Home
ಸುದ್ದಿಜಾಲ

ಜಗತ್ತಿನ ಅತಿ ಹಿರಿಯ ಭಾರತದ 'ಯೂಟ್ಯೂಬ್ ಸ್ಟಾರ್' ಅಜ್ಜಿ 'ಮಸ್ತಾನಮ್ಮ' ಇನ್ನಿಲ್ಲ!!

ಜಗತ್ತಿನ ಅತಿ ಹಿರಿಯ ಯೂಟ್ಯೂಬ್ ಸ್ಟಾರ್ ಎಂದು ಖ್ಯಾತರಾಗಿದ್ದ ಮಸ್ತಾನಮ್ಮ ಅವರು ತಮ್ಮ 107 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಕೆ.ಲಕ್ಷ್ಮಣ್‌ ಮತ್ತು ಶ್ರೀನಾಥ್‌ ರೆಡ್ಡಿಹುಟ್ಟಿಹಾಕಿದ್ದ ಕಂಟ್ರಿ ಫುಡ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಳ್ಳಿ ಸೊಡಗಿನ ಅಡುಗೆಯಿಂದ ಭಾರತದಲ್ಲಿ ಸೇರಿದಂತೆ ವಿಶ್ವದಾದ್ಯಂತ ಭಾರೀ ಹೆಸರುವಾಸಿಯಾಗಿದ್ದ ಮಸ್ತಾನಮ್ಮ ನೆನ್ನೆ ಬಾರದ ಲೋಕಕ್ಕೆ ತೆರಳಿದ್ದಾರೆ.

ತಮ್ಮ ಹಳ್ಳಿ ಸೊಡಗಿನ ಅಡುಗೆ ಶೈಲಿಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಮಸ್ತಾನಮ್ಮ ನಿಧನರಾದ ಸುದ್ದಿ ಕೇಳಿ ವಿಶ್ವದಾದ್ಯಂತ ಅಜ್ಜಿಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಜ್ಜಿಯ ನಿಧನದ ಸುದ್ದಿ ಕೇಳಿ, ನಮಗಿನ್ನು ರುಚಿಯಾದ ಮಾಂಸಾಹಾರಿ ಆಹಾರಗಳನ್ನು ಹೇಳಿಕೊಡುವವರು ಯಾರು ಎಂದು ಎಲ್ಲೆಡೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಜಗತ್ತಿನ ಅತಿ ಹಿರಿಯ ಭಾರತದ 'ಯೂಟ್ಯೂಬ್ ಸ್ಟಾರ್' ಅಜ್ಜಿ 'ಮಸ್ತಾನಮ್ಮ' ಇನ್ನಿಲ್ಲ!!

ಆಂಧ್ರಪ್ರದೇಶದ ಮಸ್ತಾನಮ್ಮ ಎಂಬ ಶತಾಯುಷಿ ಅಜ್ಜಿ ತಮ್ಮ ರುಚಿ ಮತ್ತು ರೆಸಿಪಿಯನ್ನು ಜಾಗತಿಕವಾಗಿ ಯೂಟ್ಯೂಬ್ ಮೂಲಕ ಹಂಚಿಕೊಳ್ಳುವ ಮೂಲಕ ಜಗತ್ತಿನ 'ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಎಂಬ ಖ್ಯಾತಿ ಪಡೆದುಕೊಂಡಿದ್ದರು. ಹಾಗಾದರೆ, ಜಗತ್ತಿನ 'ಅತೀ ಹಿರಿಯ ಯೂಟ್ಯೂಬ್ ಸ್ಟಾರ್' ಅಜ್ಜಿಯ ಜೀವನದ ಕಥೆಯನ್ನೊಮ್ಮೆ ನಾವೂ ಕೂಡ ತಿಳಿಯೋಣವೆ.?

 ಕಂಟ್ರಿ ಫುಡ್ಸ್ (country foods)

ಕಂಟ್ರಿ ಫುಡ್ಸ್ (country foods)

ಯೂಟ್ಯೂಬ್‌ನಲ್ಲಿ ಕಂಟ್ರಿ ಫುಡ್ಸ್ (country foods) ಎಂಬ ಯೂಟ್ಯೂಬ್ ಚಾನಲ್ ಅನ್ನು ನೀವು ಬಹುಶಃ ವೀಕ್ಷಿಸಿರಬಹುದು. ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‌ಗಳಲ್ಲಿ ಇದು ಒಂದು. ಆದರೆ, ಈ ಚಾನಲ್‌ನ ವಿಶೇಷತೆ ಎಂದರೆ, ಆಂಧ್ರದ ಶತಾಯುಷಿ, 107 ವರ್ಷದ ಮಸ್ತಾನಮ್ಮ ಅಜ್ಜಿಯ ಹಳ್ಳಿ ಸ್ಟೈಲ್ ಅಡುಗೆಗಳು.

ಅಜ್ಜಿ ಯೂಟ್ಯೂಬ್‌ಗೆ ಬಂದಿದ್ದೇಗೆ

ಅಜ್ಜಿ ಯೂಟ್ಯೂಬ್‌ಗೆ ಬಂದಿದ್ದೇಗೆ

ಲಕ್ಷ್ಮಣ ಎಂಬುವವರು ಕಂಟ್ರಿ ಫುಡ್ಸ್ ಎಂಬ ಹೆಸರಿನಲ್ಲಿ ಅಡುಗೆಯ ಕುರಿತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಹಳ್ಳಿಯಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಹೋದ ಅವರು, ಅಜ್ಜಿ ಅಡುಗೆ ಮಾಡುವುದನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಯೂಟ್ಯೂಬ್‌ನಲ್ಲಿ ಅವರ ವಿಡಿಯೋಗಳನ್ನು ಹಾಕಿದರು.

ಸೌದೆ ಒಲೆಯಲ್ಲಿ ನಾನ್‌ವೆಜ್

ಸೌದೆ ಒಲೆಯಲ್ಲಿ ನಾನ್‌ವೆಜ್

ಶತಾಯುಷಿ ಅಜ್ಜಿ ಮಸ್ತಾನಮ್ಮ, ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ನಾನ್‌ವೆಜ್ ಮಾಡುವುದರ ಮೂಲಕ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡರು. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈನಂತಹ ಅಡುಗೆಗಳನ್ನು ಹಳ್ಳಿ ಸ್ಟೈಲ್‌ನಲ್ಲಿ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ಹೇಳಿಕೊಡುತ್ತಿದ್ದರು.

ಅದೆಷ್ಟು ಜನ ನೋಡಿದರೋ

ಅದೆಷ್ಟು ಜನ ನೋಡಿದರೋ

ಕಂಟ್ರಿ ಫುಡ್ಸ್ ಚಾನಲ್‌ನಲ್ಲಿ ಶತಾಯುಶಿ ಅಜ್ಜಿಯ ಹಳ್ಳಿ ಕೈರುಚಿಯನ್ನು ಯುಟ್ಯೂಬ್ ಮೂಲಕ ಜಗತ್ತಿನಾದ್ಯಂತ ಅದೆಷ್ಟು ಜನ ನೋಡಿದರೋ ಲೆಕ್ಕಕ್ಕೇ ಸಿಗದು.! ಇವತ್ತು ಇವರ ಫಾಲೋವರ್ಸ್ 10 ಲಕ್ಷಕ್ಕೂ ಹೆಚ್ಚಿದೆ. ಪುರಾತನ ಅಡುಗೆ ಪದ್ಧತಿಯ ಸ್ವಾರಸ್ಯವನ್ನು ಕಲಿಯಲು ಭಾರತೀಯರು ಸೇರಿದಂತೆ, ವಿದೇಶಿಯರು ಕೂಡ ಅಜ್ಜಿಯ ವಿಡಿಯೋಗಳಿಗೆ ಮನಸೋತಿದ್ದರು.

ಪ್ರತಿ ತಿಂಗಳ ದುಡಿಮೆ ಎಷ್ಟು?

ಪ್ರತಿ ತಿಂಗಳ ದುಡಿಮೆ ಎಷ್ಟು?

ಕಂಟ್ರಿ ಫುಡ್ ಮೂಲಕ ಡಿಸೆಂಬರ್ 2016ರಿಂದ ಆರಂಭಿಸಿ ಈಕೆಯ ಅಡುಗೆಯ ಸುಮಾರು 200ಕ್ಕೂ ಹೆಚ್ಚು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿದಿನ 4 ಲಕ್ಷಕ್ಕೂ ಹೆಚ್ಚು ವಿಡಿಯೋ ವೀಕ್ಷಣೆಗಳನ್ನು ಈ ಯೂಟ್ಯೂಬ್ ಚಾನಲ್ ಪಡೆದುಕೊಳ್ಳುತ್ತದೆ. ಅಂದರೆ, ಪ್ರತಿತಿಂಗಳು ಅಂದಾಜು 5 ರಿಂದ 6 ಲಕ್ಷ ರೂಪಾಯಿಗಳನ್ನು ಈ ಯೂಟ್ಯೂಬ್ ಚಾನಲ್ ಪಡೆದುಕೊಳ್ಳುತ್ತದೆ.

ಯುಟ್ಯೂಬ್ ತಾರೆ

ಯುಟ್ಯೂಬ್ ತಾರೆ

ತನ್ನ ಮೊಮ್ಮಗ ಲಕ್ಷ್ಮಣ ಮತ್ತು ಅವರ ಗೆಳೆಯರ ಸಹಾಯದಿಂದ, ಮಸ್ತಾನಮ್ಮ ಅಡುಗೆಯ ವಿಡಿಯೋಗಳನ್ನು ಪ್ರತಿ ವಾರ ಬಿಡುಗಡೆ ಮಾಡುತ್ತಲೇ ಇದ್ದರು, ಆ ಮೂಲಕ ಜಗತ್ತಿನ ಅತಿ ಹಿರಿಯ ಯುಟ್ಯೂಬ್ ತಾರೆಯಾಗಿ ಹೊರಹೊಮ್ಮಿದ್ದರು. ಆದರೆ, ಈಗ ಮಸ್ತಾನಮ್ಮ ಅಜ್ಜಿಯ ರುಚಿಕರ ಅಡುಗೆ ಮಾಡುವ ವಿಧಾನವನ್ನು ನೋಡಲು ಅಜ್ಜಿಯೇ ನಮ್ಮ ಜೊತೆಯಲ್ಲಿಲ್ಲ.

Best Mobiles in India

English summary
India’s oldest Youtuber Karre Mastanamma, whose YouTube cooking channel Country Foods has over 12 lakh subscribersto know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+