ಮ್ಯಾಕ್‌ಅಫೀ ಆಂಟಿವೈರಸ್ ಸಾಫ್ಟ್‌ವೇರ್‌ನ ಸೃಷ್ಟಿಕರ್ತ ಜಾನ್ ಮ್ಯಾಕ್‌ಅಫೀ ಆತ್ಮಹತ್ಯೆ!

|

ಮ್ಯಾಕ್‌ಅಫೀ ಆಂಟಿವೈರಸ್ ಸಾಫ್ಟ್‌ವೇರ್‌ನ ಸೃಷ್ಟಿಕರ್ತ ಜಾನ್ ಮ್ಯಾಕ್‌ಅಫೀ ಬುಧವಾರ ಬಾರ್ಸಿಲೋನಾ ಬಳಿಯ ಜೈಲು ಸೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಪ್ಯಾನಿಷ್ ನ್ಯಾಯಾಲಯವು ಯುನೈಟೆಡ್ ಸ್ಟೇಟ್ಸ್‌ಗೆ ಜಾನ್ ಮ್ಯಾಕ್‌ಅಫೀಯನ್ನು ಹಸ್ತಾಂತರಿಸಲು ಅನುಮೋದನೆ ನೀಡಿದ ಕೆಲವೇ ಗಂಟೆಗಳ ನಂತರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕ್ರಿಪ್ಟೋಕರೆನ್ಸಿ ಪ್ರಮೋಟರ್‌ ಆಗಿದ್ದ ಜಾನ್‌ ಮ್ಯಾಕ್‌ ಅಫೀ ತೆರಿಗೆ ಸಬಂಧಿತ ಕಾನೂನು ಸಮಸ್ಯೆ ಸುಳಿಯಲ್ಲಿ ಸಿಲುಕಿ ಜೈಲುಪಾಲಾಗಿದ್ದರು ಎನ್ನಲಾಗಿದೆ.

ಮ್ಯಾಕ್‌ಅಫೀ

ಹೌದು, ಜಾನ್‌ ಮ್ಯಾಕ್‌ಅಫೀ ಮ್ಯಾಕ್‌ಅಫೀ ಆಂಟಿವೈರಸ್‌ ಸಾಫ್ಟ್‌ವೇರ್‌ ಕ್ರಿಯಟರ್‌, ಆಂಟಿ ವೈರಸ್‌ ಸಾಫ್ಟ್‌ವೇರ್‌ ಮುಂಖಾತರ ಪ್ರಖ್ಯಾತಿ ಪಡೆದಿದ್ದ ಜಾನ್‌ ಸ್ಪೇನ್‌ನ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಅಂತ್ಯ ಕಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಾಗ ಆತನನ್ನು ಬದುಕುಳಿಸುವ ಪ್ರಯತ್ನ ನಡೆಸಿದೆ. ಆದರೂ ಜೈಲು ಸಿಬ್ಬಂದಿಗಳ ಪ್ರಯತ್ನ ವ್ಯರ್ಥವಾಗಿದ್ದು, ಅಂತಿಮವಾಗಿ ಜೈಲಿನ ವೈದ್ಯಕೀಯ ತಂಡವು ಅವರ ಸಾವನ್ನು ದೃಡೀಕರಿಸಿದೆ ಎಂದು ಪ್ರಾದೇಶಿಕ ಕೆಟಲಾನ್ ಸರ್ಕಾರದ ಹೇಳಿಕೆ ತಿಳಿಸಿದೆ. ಅಷ್ಟಕ್ಕೂ ಜಾನ್‌ ಮ್ಯಾಕ್‌ಅಫೀಆತ್ಮಹತ್ಯೆ ಮಾಡಿಕೊಂಡಿರೋದು ಯಾಕೆ, ಅಷ್ಟಕ್ಕೂ ಜೈಲು ಪಾಲಾಗಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ರಿಪ್ಟೋಕರೆನ್ಸಿ

ಟೆನ್ನೆಸ್ಸಿಯಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ರಾಜಕೀಯ ವಿಚಾರಗಳ ಕಾರಣದಿಂದಾಗಿ ಮ್ಯಾಕ್‌ಅಫಿ ಸ್ಪೇನ್‌ನಲ್ಲಿ ಜೈಲು ಪಾಲಾಗಿದ್ದರು. ಆದರೆ ಸ್ಪೇನ್‌ನ ರಾಷ್ಟ್ರೀಯ ನ್ಯಾಯಾಲಯವು ಸೋಮವಾರ 75 ರ ಹರೆಯದ ಮ್ಯಾಕ್‌ಅಫಿಯನ್ನು ತೆರಿಗೆ ಸಬಂಧಿತ ಅಪರಾಧದ ವಿಚಾರವಾಗಿ ಯುನೈಟೆಡ್‌ ಸ್ಟೆಟ್ಸ್‌ಗೆ ಹಸ್ತಾಂತರಿಸುವ ಪರವಾಗಿ ತೀರ್ಪು ನೀಡಿತು. ಇದು ಜಾನ್‌ ಮ್ಯಾಕ್‌ಅಫಿಗೆ ಅಘಾತವನ್ನು ಉಂಟುಮಾಡಿದ್ದು, ಇದೇ ಕಾರಣಕ್ಕೆ ಸೂಸೈಡ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಇದೇ ತಿಂಗಳ ಆರಂಭದಲ್ಲಿ ನಡೆದ ವಿಚಾರಣೆಯಲ್ಲಿ ಟೆನ್ನೆಸ್ಸೀಯಲ್ಲಿ ಫಿರ್ಯಾದಿಗಳು ಆತನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಸಹ ಹೇಳಿಕೆಯನ್ನು ಸಹ ನೀಡಿದ್ದಾಗಿ ವರದಿಯಾಗಿದೆ.

ಸ್ಪ್ಯಾನಿಷ್

ಇನ್ನು ನ್ಯಾಯಾಲಯದಿಂದ ಬಂದ ತೀರ್ಪಿನ ಅನ್ವಯ ಯಾವುದೇ ಅಂತಿಮ ಹಸ್ತಾಂತರ ಆದೇಶವು ಸ್ಪ್ಯಾನಿಷ್ ಕ್ಯಾಬಿನೆಟ್ನಿಂದ ಅನುಮೋದನೆ ಪಡೆಯುವ ಅಗತ್ಯವಿರುತ್ತದೆ. ಕಳೆದ ಅಕ್ಟೋಬರ್‌ನಲ್ಲಿ ಬಾರ್ಸಿಲೋನಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟಿದ್ದ ಮ್ಯಾಕ್‌ಅಫಿಯನ್ನು ಜೈಲಿನಲ್ಲಿರಿಸಬೇಕೆಂದು ನ್ಯಾಯಾಧೀಶರು ಆ ಸಮಯದಲ್ಲಿ ಆದೇಶಿಸಿದರು. ಕ್ರಿಪ್ಟೋಕರೆನ್ಸಿಗಳನ್ನು ಉತ್ತೇಜಿಸುವಾಗ ಆದಾಯವನ್ನು ವರದಿ ಮಾಡಲು ವಿಫಲವಾದ ನಂತರ ಅದೇ ತಿಂಗಳಿನಲ್ಲಿ ಟೆನ್ನೆಸ್ಸೀಯಲ್ಲಿ ಮ್ಯಾಕ್ಅಫೀ ವಿರುದ್ಧ ತೆರಿಗೆ ಸಂಬಂಧಿತ ಅಪರಾಧದ ಆಧಾರದ ಮೇಲೆ ಬಂದಿಸಲಾಗಿತ್ತು. ಸದ್ಯ ಸ್ಪ್ಯಾನಿಷ್ ಅಧಿಕಾರಿಗಳು ಮ್ಯಾಕ್‌ಅಫೀ ಸೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮ್ಯಾಕ್‌ಅಫಿ

ಇನ್ನು ಮ್ಯಾಕ್‌ಅಫಿ ಜೀವನ ಶೈಲಿ ನೋಡುವುದಾದರೆ ಇವರು ವಿಲಾಸಿ ಜೀವನಕ್ಕೆ ಹೆಸರುವಾಸಿಯಾಗಿದ್ದವರು. ಅದರಲ್ಲೂ 2015 ರಲ್ಲಿ ಡಬ್ಲ್ಯುಬಿಬಿಜೆ-ಟಿವಿಗೆ ನೀಡಿದ ಸಂದರ್ಶನದಲ್ಲಿ, ಮ್ಯಾಕ್ಅಫೀ ಶಸ್ತ್ರಸಜ್ಜಿತವಾದಾಗ ಮಾತ್ರ ಹಾಯಾಗಿರುತ್ತಾನೆ ಎಂದು ಹೇಳಿದ್ದೂ ಉಂಟು. ಪ್ರತಿ ಭಾರಿಯೂ ಕೈಯಲ್ಲಿ ಲೋಡ್ ಗನ್‌ನೊಂದಿಗೆ ಇರುವುದಕ್ಕೆ ಜಾಕ್‌ ಮ್ಯಾಕ್‌ಅಫಿ ಬಯಸುತ್ತಿದ್ದರು ಎಂದು ಟಿವಿ ಸ್ಟೇಷನ್ ವರದಿ ಮಾಡಿದೆ. "ನನ್ನ ಮಲಗುವ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಶಸ್ತ್ರಸಜ್ಜಿತನಾಗಿರುವುದನ್ನು ಹೊರತುಪಡಿಸಿ ಸುರಕ್ಷಿತ ಮತ್ತು ಹೆಚ್ಚು ಸುರಕ್ಷಿತ ಎಂಬ ಭಾವನೆ ನನಗೆ ತುಂಬಾ ಕಡಿಮೆ ನೀಡುತ್ತದೆ" ಎಂದು ಮ್ಯಾಕ್ಅಫೀ ಟಿವಿ ಸ್ಟೇಷನ್‌ಗೆ ಒಮ್ಮೆ ಹೇಳಿದ್ದರು ಎನ್ನಲಾಗಿದೆ..

Best Mobiles in India

English summary
Found dead hours after court ruled in favour of extradition to U.S.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X