ಗ್ರಾಹಕರಿಗೆ ಹೊಸ ಅಪ್ಲಿಕೇಶನ್‌ ಪರಿಚಯಿಸಿದ ಮೆಕ್‌ಡೊನಾಲ್ಡ್‌!

|

ಮೆಕ್‌ಡೊನಾಲ್ಡ್‌‌ ಹ್ಯಾಮ್‌ಬರ್ಗರ್‌, ಚೀಸ್‌ಬರ್ಗರ್‌, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈ, ಮುಂಜಾನೆಯ ತಿಂಡಿ ತಿನಿಸುಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗ್ರಾಹಕರು ಬಯಸಿದ ಆಹಾರವನ್ನು ಅವರು ಇರುವ ಸ್ಥಳಕ್ಕೆ ತಲುಪಿಸುವ ಕಾರ್ಯವನ್ನು ಸಹ ಇದು ಮಾಡುತ್ತಿದೆ. ಸದ್ಯ ಇದೀಗ ಮ್ಯಾಕ್‌ಡೋನಾಲ್ಡ್‌ ಇಂಡಿಯಾ ಭಾರತದಲ್ಲಿ ಹೊಸ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಅಪ್ಲಿಕೇಶನ್ ಅನ್ನು 'ಮೆಕ್‌ಡೊನಾಲ್ಡ್ಸ್ ಅಪ್ಲಿಕೇಶನ್' ಎಂದು ಹೆಸರಿಸಲಾಗಿದೆ. ಜೊತೆಗೆ ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್ ಎರಡರಲ್ಲೂ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಮೆಕ್‌ಡೊನಾಲ್ಡ್‌

ಹೌದು, ಮೆಕ್‌ಡೊನಾಲ್ಡ್‌ ಭಾರತದಲ್ಲಿ ಮೆಕ್‌ ಡೊನಾಲ್ಡ್ಸ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ವಿಶೇಷ ವ್ಯವಹಾರಗಳು ಮತ್ತು ಆಫರ್‌ಗಳಿಗೆ ಅವಕಾಶವನ್ನು ನೀಡಲಿದೆ. ಈ ಆಫರ್‌ಗಳನ್ನು ಡೈನ್‌-ಇನ್, ಟೇಕ್ಅವೇ ಅಥವಾ ಡ್ರೈವ್-ಥ್ರೂನಲ್ಲಿ ಪುನಃ ಪಡೆದುಕೊಳ್ಳಬಹುದು. ಸದ್ಯ ಕಂಪನಿಯು ತನ್ನ ಹೊಸ ಅಪ್ಲಿಕೇಶನ್‌ನೊಂದಿಗೆ, ತನ್ನ ಗ್ರಾಹಕರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಹಾಗಾದರೆ ಈ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಮೆಕ್‌ಡೊನಾಲ್ಡ್‌

ಮೆಕ್‌ಡೊನಾಲ್ಡ್‌ ತನ್ನ ರುಚಿಯಾದ ಮತ್ತು ಶುಚಿಯಾದ ಆಹಾರಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಹ್ಯಾಬರ್ಗರ್‌ ಪಾಸ್ಟ್ಪುಡ್‌ ರೆಸ್ಟೊರೆಂಟ್‌ಗಳ ಸಮೂಹವಾಗಿದೆ. ಇನ್ನು ಮೆಕ್ ಡೊನಾಲ್ಡ್‌ನಲ್ಲಿ ನಿಮಗೆ ಬೇಕಾದ ತಿನಿಸುಗಳನ್ನು ನೀವು ಆರ್ಡರ್‌ ಮಾಡಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವ್ಯವಹಾರ ಹೆಚ್ಚಾಗಿ ಪೈಪೋಟಿ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಮೆಕ್‌ಡೊನಾಲ್ಡ್‌ ಹೊಸ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಮೂಲಕ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇನ್ನು ಮೆಕ್‌ಡೊನಾಲ್ಡ್ಸ್‌ ಅಪ್ಲಿಕೇಶನ್‌ನಲ್ಲಿ ಉನ್ನತ ಆಫರ್‌ಗಳನ್ನು ಪಡೆಯುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಮೆಕ್‌ಡೊನಾಲ್ಡ್ಸ್ ಅಪ್ಲಿಕೇಶನ್‌ನಲ್ಲಿ ನೀವು ಟಾಪ್‌ ಆಫರ್‌ಗಳನ್ನು ಪಡೆದುಕೊಳ್ಳುವುದು ಹೇಗೆ ?

ಮೆಕ್‌ಡೊನಾಲ್ಡ್ಸ್ ಅಪ್ಲಿಕೇಶನ್‌ನಲ್ಲಿ ನೀವು ಟಾಪ್‌ ಆಫರ್‌ಗಳನ್ನು ಪಡೆದುಕೊಳ್ಳುವುದು ಹೇಗೆ ?

ಹಂತ 1: ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ‘ಮೆಕ್‌ಡೊನಾಲ್ಡ್ಸ್' ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2: ದೇಶವನ್ನು ಭಾರತ ಎಂದು ಆಯ್ಕೆ ಮಾಡಿ- ಇದರಲ್ಲಿ ಉತ್ತರ ಮತ್ತು ಪೂರ್ವ ಎಂದು ಆಯ್ಕೆಮಾಡಿ.

ಹಂತ 3: ಮುಂದೆ, ಅಧಿಸೂಚನೆಗಳನ್ನು ಅನುಮತಿಸು ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4: ಖಾತೆಯನ್ನು ರಚಿಸುವ ಮೂಲಕ ನೋಂದಾಯಿಸಿ.

ಡೀಲ್‌

ಹಂತ 5: ನೋಂದಾಯಿಸಿದ ನಂತರ, "ಡೀಲ್‌ಗಳು" ವಿಭಾಗದ ಅಡಿಯಲ್ಲಿ ಒಂದು ಗುಂಪಿನ ಆಫರ್‌ಗಳು ಕಾಣಿಸಿಕೊಳ್ಳುತ್ತವೆ.

ಹಂತ 6: ಡೀಲ್‌ ಅನ್ನು ಕ್ಲೇಮ್‌ ಮಾಡುವ ಆಯ್ಕೆ ಮಾಡಿ (ಡೈನ್-ಇನ್ ಅಥವಾ ಟೇಕ್ಅವೇ ಅಥವಾ ಡ್ರೈವ್-ಥ್ರೂನಲ್ಲಿ).

ಹಂತ 7: ಕೌಂಟರ್‌ನಲ್ಲಿ ಒಮ್ಮೆ ‘ರಿಡೀಮ್' ಮತ್ತು ‘ಆಕ್ಟಿವೇಟ್‌' ಟ್ಯಾಪ್ ಮಾಡಿ.

ಹಂತ 8: ಇದು ಸಕ್ರಿಯಗೊಂಡ ನಂತರ, 5 ನಿಮಿಷಗಳ ಟೈಮರ್ ಮತ್ತು ಕ್ಯೂಆರ್ ಕೋಡ್ ಪರದೆಯ ಮೇಲೆ ಕಾಣಿಸುತ್ತದೆ. ಕೋಡ್ ಅನ್ನು ಸ್ಕ್ಯಾನರ್‌ನ ಮುಂದೆ ಇರಿಸಿ ಇದರಿಂದ 5 ನಿಮಿಷಗಳಲ್ಲಿ ಡೀಲ್‌ ಅನ್ನು ರೀಡ್‌ ಮಾಡಲಾಗುತ್ತದೆ. ನಂತರ ಅನ್ವಯಿಸಬಹುದು ಮತ್ತು ಆಫರ್‌ ಅನ್ನು ಪಡೆದುಕೊಳ್ಳಬಹುದು.

Best Mobiles in India

English summary
McDonald’s India launched a brand new app in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X