ಇನ್ಮುಂದೇ ಕಳುವಾದ ಮೊಬೈಲ್ ಬಳಕೆ ಸಾಧ್ಯವೇ ಇಲ್ಲ!!..ಏಕೆ ಗೊತ್ತಾ?

ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಆ ಮೊಬೈಲ್‌ನ ಎಲ್ಲಾ ಸೇವೆಗಳನ್ನು ರದ್ದುಪಡಿಸುವ ಹೊಸ ವ್ಯವಸ್ಥೆ ತರಲು ಸರ್ಕಾರ ಚಿಂತಿಸಿದೆ.

|

ನಿಮ್ಮ ಮೊಬೈಲ್ ಕಳೆದುಹೋಗುವುದು ಬಿಡಿ. ನಿಮಗೆ ಯಾವುದಾದರೂ ಮೊಬೈಲ್ ಸಿಕ್ಕರೂ ದುಖಃ ಪಡಬೇಕಾದ ಪರಿಸ್ಥಿತಿ ಬರುವ ದಿನಗಳು ಬಹಳ ದೂರವಿಲ್ಲಾ.!! ಹೌದು, ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಆ ಮೊಬೈಲ್‌ನ ಎಲ್ಲಾ ಸೇವೆಗಳನ್ನು ರದ್ದುಪಡಿಸುವ ಹೊಸ ವ್ಯವಸ್ಥೆ ತರಲು ಸರ್ಕಾರ ಚಿಂತಿಸಿದೆ.

ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ನ ಸಿಮ್ ತೆಗೆದು ಬೇರೆ ಸಿಮ್ ಹಾಕಿಯೂ ಬಳಕೆ ಮಾಡದಂತೆ, ಮೊಬೈಲ್ ನಿಷ್ಪ್ರಯೋಜಕವಾಗುವಂತೆ ಆಗುವಂತಹ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಹಾಗಾದರೆ, ಆ ತಂತ್ರಜ್ಞಾನ ಯಾವುದು? ಆ ತಂತ್ರಜ್ಞಾನದಿಂದ ಮೊಬೈಲ್ ನಿಷ್ಪ್ರಯೋಜಕವಾಗುವಂತೆ ಹೇಗೆ ಮಾಡುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸಿಇಐಆರ್ (CEIR) ವ್ಯವಸ್ಥೆ ಬಳಕೆ!!

ಸಿಇಐಆರ್ (CEIR) ವ್ಯವಸ್ಥೆ ಬಳಕೆ!!

ಕೇಂದ್ರ ಉಪಕರಣ ಗುರುತು ನೋಂದಣಿ (ಸಿಇಐಆರ್) ಎಂಬ ಹೊಸ ವ್ಯವಸ್ಥೆ ಮೂಲಕಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ನ ಸಿಮ್ ತೆಗೆದು ಬೇರೆ ಸಿಮ್ ಹಾಕಿಯೂ ಬಳಕೆ ಮಾಡದಂತೆ, ಮೊಬೈಲ್ ನಿಷ್ಪ್ರಯೋಜಕವಾಗುವಂತೆ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.!!

 ಇಐಎಂಇ ದತ್ತಾಂಶಗಳು ಸಿಇಐಆರ್‌ಗೆ ವರ್ಗಾವಣೆ!!

ಇಐಎಂಇ ದತ್ತಾಂಶಗಳು ಸಿಇಐಆರ್‌ಗೆ ವರ್ಗಾವಣೆ!!

ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಮೊಬೈಲ್‌ಗಳ ಇಐಎಂಇ ದತ್ತಾಂಶಗಳನ್ನು ಸಿಇಐಆರ್ ಜೊತೆತ ಸಂಯೋಜನೆ ಹೊಂದುವಂತೆ ಮಾಡಲು ಟೆಲಿಕಾಂ ಇಲಾಖೆ ಉದ್ದೇಶಿಸಿದೆ. ಅಲ್ಲದೆ, ಮೊಬೈಲ್‌ನಲ್ಲಿನ ಹಾರ್ಡ್‌ವೇರ್ ದತ್ತಾಂಶಗಳನ್ನೂ ಸಿಇಐಆರ್‌ಗೆ ಸಂಯೋಜಿಸಲಾಗುತ್ತದೆ.

ಕೇಂದ್ರೀಯ ವ್ಯವಸ್ಥೆ

ಕೇಂದ್ರೀಯ ವ್ಯವಸ್ಥೆ

ನೆಟ್‌ವರ್ಕ್ ಆಪರೇಟರ್‌ಗಳಿಗೆ ಸಿಇಐಆರ್ ಕೇಂದ್ರೀಯ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ. ಹಾಗಾಗಿ ಯಾವುದೇ ಮೊಬೈಲ್‌ಗೆ ಸಿಮ್ ಬದಲಾಯಿಸಿ ಯಾವುದೇ ನೆಟ್‌ವರ್ಕ್ನಲ್ಲಿ ಆ ಮೊಬೈಲ್ ಬಳಕೆ ಮಾಡಿದರೂ ಸಹ ಅದನ್ನು ಸಿಇಐಆರ್ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುತ್ತದೆ.!!

ಭಧ್ರತೆಗಾಗಿ ಈ ತಂತ್ರಜ್ಞಾನ!!

ಭಧ್ರತೆಗಾಗಿ ಈ ತಂತ್ರಜ್ಞಾನ!!

ಕಳುವಾದ ಮೊಬೈಲ್‌ಗಳಿಂದ ನಡೆಯುತ್ತಿದ್ದ ಕ್ರಿಮಿನಲ್ ಚಟುವಟಿಕೆಗಳನ್ನು ತಡೆಯಲು ನೂತನ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದು, ಈ ತಂತ್ರಜ್ಞಾನದಿಂದ ಸಂಭಾವ್ಯದಲ್ಲಿ ಆಗಬಹುದಾದ ಕ್ರಿಮಿನಲ್ ಚಟುವಟಿಕೆಗಳನ್ನು ನಿಂಯಂತ್ರಿಸಬಹುದಾಗಿದೆ.!!

ಅನುಷ್ಠಾನ ವಿಧಾನ ಅಭಿವೃದ್ಧಿಯಾಗುತ್ತಿದೆ.!!

ಅನುಷ್ಠಾನ ವಿಧಾನ ಅಭಿವೃದ್ಧಿಯಾಗುತ್ತಿದೆ.!!

ಕೇಂದ್ರ ಉಪಕರಣ ಗುರುತು ನೋಂದಣಿ (ಸಿಇಐಆರ್) ಅನುಷ್ಠಾನ ವಿಧಾನವನ್ನು ಅಭಿವೃದ್ಧಿಯಾಗುತಿದ್ದು, ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ಗೆ ಮಹಾರಾಷ್ಟ್ರದ ಪುಣೆಯಲ್ಲಿ ಆರು ತಿಂಗಳ ಕಾಲ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.

<strong>ಲೀಕ್ ಆಯ್ತು ಜಿಯೋ ಫೈಬರ್ ಪ್ಲಾನ್!..ಮತ್ತೆ ನಡುಗಿದ ಟೆಲಿಕಾಂ!..ಕ್ಷಣಮಾತ್ರದಲ್ಲಿ ವೈರಲ್!!</strong>ಲೀಕ್ ಆಯ್ತು ಜಿಯೋ ಫೈಬರ್ ಪ್ಲಾನ್!..ಮತ್ತೆ ನಡುಗಿದ ಟೆಲಿಕಾಂ!..ಕ್ಷಣಮಾತ್ರದಲ್ಲಿ ವೈರಲ್!!

Best Mobiles in India

English summary
the government is putting in place a new system that will block all services on stolen or lost Mobiles to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X