ಮೀಡಿಯಾ ಟೆಕ್‌ನಿಂದ ಹಿಲಿಯೊ G85 ವೇಗದ ಪ್ರೊಸೆಸರ್ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ನಾನಾ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ನಾವಿಂದು ಕಾಣಬಹುದಾಗಿದೆ. ಟೆಕ್ನಾಲಜಿ ಮುಂದುವರೆದಷ್ಟು ಸಾಕಷ್ಟು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿವೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಪ್ರೊಸೆಸರ್ ಸಿಸ್ಟಂ ಉತ್ತಮವಾಗಿರಬೇಕಾಗಿರುತ್ತದೆ. ಇದಕ್ಕಾಗಿ ಹೊಸ ಮಾದರಿಯ ಪ್ರೊಸೆಸರ್‌ಗಳು ಟೆಕ್ನಾಲಜಿಗೆ ತಕ್ಕಂತೆ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಸದ್ಯ ಇದೀಗ ಪ್ರೊಸೆಸರ್ ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರುವ ಮೀಡಿಯಾ ಟೆಕ್ ಹಿಲಿಯೋ ತನ್ನ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡಿದೆ.

ಹೌದು ಮೀಡಿಯಾ ಟೆಕ್ ಹೆಲಿಯೊ G85 ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ಶಿಯೋಮಿ ಕಳೆದ ವಾರವಷ್ಟೇ ಹಿಲಿಯೋ G85 SoC ಒಳಗೊಂಡ ರೆಡ್‌ಮಿ ನೋಟ್ 9 ಅನ್ನು ಬಿಡುಗಡೆ ಮಾಡಿತು. ಈಗ, ತೈವಾನೀಸ್ ಫ್ಯಾಬ್ಲೆಸ್ ಸೆಮಿ ಕಂಡಕ್ಟರ್ ಕಂಪನಿ ಅಧಿಕೃತವಾಗಿ ತನ್ನ ಹೊಸ ಚಿಪ್‌ಸೆಟ್ ಘೋಷಿಸಿದೆ. ಸದ್ಯ ಕಂಪೆನಿಯ ಪ್ರಕಟಣೆ ಪ್ರಕಾರ ಈ ಮೊಬೈಲ್ ಪ್ರೊಸೆಸರ್ ತನ್ನ ಹಿಂದಿನ ಹೆಲಿಯೊ G80 ನಲ್ಲಿ ಕಂಡುಬರುವಂತೆಯೇ ಸಿಪಿಯು ಹೊಂದಿದೆ. ಆದಾಗ್ಯೂ, ಜಿಪಿಯು ಸ್ವಲ್ಪ ವೇಗವಾಗಿರುತ್ತದೆ, ಇದು ಸಣ್ಣ ರಿಫ್ರೆಶ್ ಅನ್ನು ಹೊಂದಿದೆ. ಸದ್ಯ ಈ ಪ್ರೊಸೆಸರ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸದ್ಯ ಇದೀಗ ಬಿಡುಗಡೆ ಆಗಿರುವ ಮೀಡಿಯಾ ಟೆಕ್‌ನ ಹಿಲಿಯೊ G85 ಆಕ್ಟಾ-ಕೋರ್ ಪ್ರೊಸೆಸರ್ ಆಗಿದ್ದು, ಎರಡು ಕಾರ್ಟೆಕ್ಸ್ A75 ಕೋರ್‌ಗಳು 2.0GHz ನಲ್ಲಿ ಚಲಿಸುತ್ತವೆ ಮತ್ತು ಆರು ಕಾರ್ಟೆಕ್ಸ್ A55 ಕೋರ್‌ಗಳು 1.8GHz ನಲ್ಲಿ ಗಡಿಯಾರವನ್ನು ಹೊಂದಿವೆ. ARM ಮಾಲಿ G52 ಜಿಪಿಯು ಇದೆ, ಅದನ್ನು ಈಗ 1GHz ನಲ್ಲಿ ಕ್ಲಾಕ್ಡ್ ಮಾಡಲಾಗಿದೆ. ಇನ್ನು ಹಿಲಿಯೊ G85 ಅನ್ನು G80ಗೆ ಹೋಲಿಸಿದರೆ G80ಅಲ್ಲಿ GPU 950 ಮೆಗಾಹರ್ಟ್ ಗಡಿಯಾರದಲ್ಲಿದೆ. ಅಲ್ಲದೆ ಚಿಪ್‌ಸೆಟ್‌ನಲ್ಲಿ ಯಾವುದೆ ದೊಡ್ಡ ಮಾದರಿಯ ಸುಧಾರಣೆ ಆಗಿಲ್ಲ ಮತ್ತು ಒಂದೇ ರೀತಿಯ ಫೀಚರ್ಸ್‌ಗಳನ್ನ ಕಾಣಬಹುದಾಗಿದೆ.

ಇನ್ನು ಈ ಪ್ರೊಸೆಸರ್ VoW (ವಾಯ್ಸ್ ಆನ್ ವೇಕ್ಅಪ್) ಅನ್ನು ಬೆಂಬಲಿಸುತ್ತದೆ ಮತ್ತು ವರ್ಧಿತ ಹೈಪರ್ ಎಂಜೈನ್ ಗೇಮ್ ಟೆಕ್ನಾಲಜಿಯನ್ನು ಸಹ ಒಳಗೊಂಡಿದೆ. ಅಲ್ಲದೆ ಮೀಡಿಯಾಟೆಕ್‌ನ ಈ ಹೊಸ ಚಿಪ್‌ಸೆಟ್ ಕೇವಲ 13 ಎಂಎಂಗಳಲ್ಲಿ ನೆಟ್‌ವರ್ಕ್‌ಗಳ ನಡುವೆ ಬದಲಾಯಿಸಬಹುದಾಗಿದೆ. ಇದು ವಿಳಂಬ-ಮುಕ್ತ ಅನುಭವಕ್ಕೆ ಸಹಾಯ ಮಾಡುತ್ತದೆ. ವೈಫೈ ಮತ್ತು ಎಲ್‌ಟಿಇ ಸಹಭಾಗಿತ್ವದ ಇಂಟೆಲಿಜೆಂಟ್ ಮುನ್ಸೂಚನೆಯನ್ನು ಚಿಪ್ ಬೆಂಬಲಿಸುತ್ತದೆ ಎಂದು ಮೀಡಿಯಾ ಟೆಕ್ ಹೇಳಿದೆ.

ಇದಲ್ಲದೆ ಹಿಲಿಯೊ G ಚಿಪ್‌ನೊಂದಿಗೆ ಸೆಲ್ಯುಲಾರ್ ಸಂಪರ್ಕವನ್ನು ಸುಧಾರಿಸುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಹಿಲಿಯೊ G85 ಸೆಲ್ ಟವರ್ ಮತ್ತು ಸೆಲ್ ಫೋನ್ ನಡುವೆ ವೇಗವಾಗಿ ಪ್ರತಿಕ್ರಿಯೆ ತರುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಡೇಟಾ ಸಂಪರ್ಕವನ್ನು ಬಿಡದೆಯೇ ಇದು ಗೇಮ್ ಅನುಭವದ ಜೊತೆಗೆ ಕರೆಗಳನ್ನು ಮುಂದೂಡುತ್ತದೆ. ಇನ್ನು ಸ್ಮಾರ್ಟ್‌ಫೋನ್ ತಯಾರಕರಿಗೆ SoC ಅನ್ನು ಶಿಫ್ಟ್ ಮಾಡಲು ಪ್ರಾರಂಭಿಸಲಾಗಿದೆ ಎಂದು ಮೀಡಿಯಾ ಟೆಕ್ ದೃಡಪಡಿಸಿದೆ.ಸದ್ಯ ಈ ಚಿಪ್‌ಸೆಟ್ ಅನ್ನು ರೆಡ್‌ಮಿ ನೋಟ್ 9 ನಲ್ಲಿ ಬಳಸಲಾಗಿದೆ. ಇತರ ಸ್ಮಾರ್ಟ್‌ಫೋನ್ ತಯಾರಕರು ಚಿಪ್‌ಸೆಟ್ ಅನ್ನು ಬಳಸುವುದನ್ನು ನೋಡಬೇಕಿದೆ. ಇನ್ನಿಉ ಮೀಡಿಯಾ ಟೆಕ್ ಹಿಲಿಯೊ ಜಿ85 ಚಾಲಿತ ಸ್ಮಾರ್ಟ್‌ಫೋನ್‌ಗಳು ಅಧಿಕೃತವಾದಾಗ $ 200 (ಸುಮಾರು 15,000 ರೂ.) ಬೆಲೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications





