Home
ಸುದ್ದಿಜಾಲ

ಮೊಬೈಲ್ ಗೇಮಿಂಗ್‌ಗಾಗಿ ಹೊಸ ಚಿಪ್​ಸೆಟ್ ಲಾಂಚ್: ಸ್ಪೀಡ್‌ ಗೇಮಿಂಗ್‌ಗೆ ಇದು ಬೆಸ್ಟ್!

ಹೈ-ಎಂಡ್​ ಗೇಮಿಂಗ್‌ಗಾಗಿ ಕಂಪ್ಯೂಟರ್ ಚಿಪ್ ತಯಾರಕ ಕಂಪನಿ MediaTek (ಮೀಡಿಯಾಟೆಕ್), ಎರಡು ನೂತನ ಚಿಪ್​ಸೆಟ್‌ (Chipsets)ಗಳನ್ನು ಬಿಡುಗಡೆ ಮಾಡಿದೆ. ನೀವು, ಹೈಟೆಕ್ ಮೊಬೈಲ್ ಗೇಮಿಂಗ್‌ಗಾಗಿ (Mobile Gaming) ಈ ಡೈಮೆನ್ಸಿಟಿ (Dimensity) 7300 ಮತ್ತು ಡೈಮೆನ್ಸಿಟಿ 7300 ಎಕ್ಸ್ ಎಂಬ 4 ಎನ್ಎಂ ಚಿಪ್‌ಗಳ​ಗಳನ್ನು ಬಳಸಬಹುದು. ಇದರಿಂದಾಗಿ ನೀವು ದೀರ್ಘಕಾಲದವರೆಗೆ ಗೇಮಿಂಗ್ (Gaming) ಮಾಡಬಹುದು ಮತ್ತು ಸ್ಟ್ರೀಮ್ ಮಾಡಬಹುದು. ಜೊತೆಗೆ, ಕಡಿಮೆ ಲೈಟಿಂಗ್‌ನಲ್ಲಿಯೂ ಅದ್ಭುತ ಫೋಟೋಗ್ರಫಿ (Photography) ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಹುದು.

MediaTek ತೈವಾನ್‌ನ ಪ್ರಮುಖ ಚಿಪ್ ತಯಾರಕ ಕಂಪನಿಯಾಗಿದೆ. ಇದು ಸ್ಮಾರ್ಟ್‌ಫೋನ್‌ಗಳು (Smartphones), ಫ್ಲಾಟ್-ಸ್ಕ್ರೀನ್ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಅಗತ್ಯವಾದ ದೊಡ್ಡ ಪ್ರಮಾಣದ ಪ್ರೊಸೆಸರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಚಿಪ್ಸೆಟ್‌ (Chipsets) ಗಳನ್ನು ಪೂರೈಸುವುದು ಮೀಡಿಯಾಟೆಕ್ ಕಂಪನಿಯ ಪ್ರಮುಖ ಉದ್ದೇಶವಾಗಿದೆ. ಈ ದೃಷ್ಠಿಕೋನದಿಂದಲೇ ಎರಡು ಹೊಸ ಚಿಪ್ಸೆಟ್‌ಗಳನ್ನು ಲಾಂಚ್ ಮಾಡಿದೆ.

High-End ಗೇಮಿಂಗ್‌ಗಾಗಿ ಎರಡು ಹೊಸ ಚಿಪ್​ಸೆಟ್ ಬಿಡುಗಡೆ

ಹೌದು, ಸಾಮಾನ್ಯವಾಗಿ ಹೊಸ ಚಿಪ್‌ಗಳು ಸ್ಮಾರ್ಟ್ ಸಂಪನ್ಮೂಲ ಆಪ್ಟಿಮೈಸೇಶನ್ ಅನ್ನು ಬಳಸಿಕೊಳ್ಳುತ್ತವೆ. 5G ಮತ್ತು Wi-Fi ಗೇಮ್ ಸಂಪರ್ಕಗಳನ್ನು ಆಪ್ಟಿಮೈಜ್ ಮಾಡುತ್ತವೆ. ಜೊತೆಗೆ, ಡ್ಯುಯಲ್-ಲಿಂಕ್ ಟ್ರೂ ವೈರ್‌ಲೆಸ್ ಸ್ಟಿರಿಯೊ ಆಡಿಯೊ ಜೊತೆಗೆ ಬ್ಲೂಟೂತ್ LE ಆಡಿಯೊ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. ಹೀಗಾಗಿ, ಗೇಮಿಂಗ್ ಅನುಭವಗಳನ್ನು ಇನ್ನಷ್ಟು ವರ್ಧಿಸಲು MediaTek ಈ ಚಿಪ್ಸೆಟ್ ಅನ್ನು ಪರಿಚಯಿಸಲಾಗಿದೆ.

ಸ್ಪೀಡ್‌ ಗೇಮಿಂಗ್‌ಗೆ ಡೈಮೆನ್ಸಿಟಿ 7300 ಚಿಪ್​​ಸೆಟ್‌ ಬೆಸ್ಟ್‌

MediaTek ಡೈಮೆನ್ಸಿಟಿ 7300 ಚಿಪ್​​ಸೆಟ್‌ಗಳು ಮಲ್ಟಿಟಾಸ್ಕಿಂಗ್, ಉತ್ತಮ ಫೋಟೋಗ್ರಫಿ(ಛಾಯಾಗ್ರಹಣ), ಸ್ಪೀಡ್‌ ಗೇಮಿಂಗ್ ಮತ್ತು ಎಐ-ವರ್ಧಿತ ಕಂಪ್ಯೂಟಿಂಗ್‌ಗಾಗಿ ತಯಾರಿಸಲಾಗಿದೆ. ಡೈಮೆನ್ಸಿಟಿ 7300 ಎಕ್ಸ್ ಚಿಪ್ಸೆಟ್‌ ಅನ್ನು ಫ್ಲಿಪ್-ಶೈಲಿಯ ಮಡಚಬಹುದಾದ ಸಾಧನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಡ್ಯುಯಲ್ ಡಿಸ್ ಪ್ಲೇಗಳಿಗೆ ಬೆಂಬಲ ನೀಡುತ್ತದೆ ಎಂದು MediaTek ಕಂಪನಿ ತಿಳಿಸಿದೆ.

4 ಪಟ್ಟು ಆರ್ಮ್ ಕಾರ್ಟೆಕ್ಸ್-ಎ 78 ಕೋರ್‌‌

Dimensity 7050ಗೆ ಹೋಲಿಸಿದರೆ 4nm ಪ್ರಕ್ರಿಯೆಯು 4 ಪಟ್ಟು ಆರ್ಮ್ ಕಾರ್ಟೆಕ್ಸ್-ಎ 78 ಕೋರ್‌ಗಳನ್ನು ಒಳಗೊಂಡಿವೆ. ಎರಡೂ ಚಿಪ್ ಸೆಟ್‌ಗಳು ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿವೆ. ಇವು 2.5 ಗಿಗಾಹರ್ಟ್ಸ್‌ವರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು 4 ಎಕ್ಸ್ ಆರ್ಮ್ ಕಾರ್ಟೆಕ್ಸ್-ಎ 55 ಕೋರ್‌ಗಳೊಂದಿಗೆ ಜೋಡಿಸಲ್ಪಟ್ಟಿವೆ. ಇತ್ತೀಚಿನ ಎಐ (AI) ಆವಿಷ್ಕಾರಗಳು ಮತ್ತು ಸಂಪರ್ಕ ವೈಶಿಷ್ಟ್ಯಗಳನ್ನು ಸಂಯೋಜಿಸಲು MediaTek ಡೈಮೆನ್ಸಿಟಿ 7300 ಚಿಪ್ಸೆಟ್‌ಗಳು ಮುಖ್ಯ ಪಾತ್ರ ನಿರ್ವಹಿಸಲಿವೆ.

ಶೇ.20ರಷ್ಟು ಕಡಿಮೆ ವಿದ್ಯುತ್ ಬಳಕೆ

ಇತರ ಚಿಪ್ ತಯಾರಕ ಕಂಪನಿಯ ಇದೇ ಮಾದರಿಯ ಚಿಪ್​ಸೆಟ್‌ಗಳಿಗೆ ಹೋಲಿಸಿದರೆ, MediaTek ಡೈಮೆನ್ಸಿಟಿ 7300 ಸರಣಿಯು ಶೇ.20ರಷ್ಟು ವೇಗದ ಎಫ್‌ಪಿಎಸ್ ಮತ್ತು ಶೇ.20ರಷ್ಟು ಕಡಿಮೆ ವಿದ್ಯುತ್ ಬಳಕೆಯನ್ನು ಒದಗಿಸುತ್ತದೆ. ಡೈಮೆನ್ಸಿಟಿ 7300 ಚಿಪ್ಸೆಟ್‌ಗಳು MediaTek ಇಮೇಜಿಂಗ್ 950 ಯೊಂದಿಗೆ ಸುಧಾರಿತ ಫೋಟೋಗ್ರಫಿಯ ಫೀಲ್ ನೀಡುತ್ತವೆ. ಇದು ಪ್ರೀಮಿಯಂ-ಗ್ರೇಡ್ 12-ಬಿಟ್ ಎಚ್‌ಡಿಆರ್-ಐಎಸ್‌ಪಿಯೊಂದಿಗೆ 200 MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ.

ಫೋಟೋ, ವಿಡಿಯೋ ರೆಕಾರ್ಡಿಂಗ್‌ಗೆ ಬೆಸ್ಟ್

ಈ ಬಗ್ಗೆ MediaTekನ ವೈರ್​ಲೆಸ್ ಸಂವಹನ ವ್ಯವಹಾರದ ಉಪ ಪ್ರಧಾನ ವ್ಯವಸ್ಥಾಪಕ ಡಾ.ಯೆಂಚೀ ಲೀ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿನ ಎಐ ಆವಿಷ್ಕಾರಗಳು ಮತ್ತು ಸಂಪರ್ಕ ಫೀಚರ್ಸ್‌ಗಳನ್ನು ಒಗ್ಗೂಡಿಸಲು MediaTek ಡೈಮೆನ್ಸಿಟಿ 7300 ಚಿಪ್‌ಗಳು ಪ್ರಮುಖ ಪಾತ್ರ ನಿರ್ವಹಿಸಲಿವೆ. ಫೇಸ್ ಡಿಟೆಕ್ಷನ್ ಮತ್ತು ವೀಡಿಯೊ ಎಚ್‌ಡಿಆರ್ ಒದಗಿಸುವ ಹೊಸ ಹಾರ್ಡ್‌ವೇರ್‌​ ಎಂಜಿನ್‌ಗಳೊಂದಿಗೆ, ವರ್ಧಿತವಾದ ಡೈಮೆನ್ಸಿಟಿ 7300 ಬಳಕೆದಾರರಿಗೆ ಕಡಿಮೆ ಲೈಟಿಂಗ್‌ನಲ್ಲಿಯೂ ಅದ್ಭುತ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Taiwanese fabless chipmaker MediaTek on Thursday launched new Dimensity 7300 and 7300X 5G chipsets with AI-enhanced computing, photography and gaming capabilitie for mid-range smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+