ವಿಶ್ವ ಮಾನ್ಯತೆ ಗಳಿಸಿದ ಭಾರತೀಯ ಮೂಲದ ಹೆಮ್ಮೆಯ ಸಿಇಒಗಳು
ಆಧುನಿಕ ತಂತ್ರಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಅಸಾಮಾನ್ಯವಾದುದಾಗಿದೆ. ಗೂಗಲ್‌ನಿಂದ ಮೈಕ್ರೋಸಾಫ್ಟ್‌ವರೆಗೆ, ಕಾಗ್ನಿಜೆಂಟೊನಿಂದ ನೆಟ್ ಆಪ್‌ವರೆಗೆ ಭಾರತೀಯ ನಿಸ್ಸೀಮರು ತಮ್ಮ ಪ್ರತಿಭೆಯನ್ನು ತಾಂತ್ರಿಕ ಲೋಕಕ್ಕೆ ದಾರೆ ಎರೆದಿದ್ದಾರೆ. ವಿಶ್ವದ ಅತಿ ದೊಡ್ಡ ಕಂಪೆನಿಗಳನ್ನೇ ಲೀಲಾ ಜಾಲವಾಗಿ ನಿರ್ವಹಿಸುವ ನೈಪುಣ್ಯತೆಯನ್ನು ಈ ಸ್ಥಾಪಕರು ಪಡೆದುಕೊಂಡಿದ್ದಾರೆ ಎಂಬುದೇ ಹೆಮ್ಮೆಯ ವಿಷಯವಾಗಿದೆ.
ಓದಿರಿ: ಹೊಸ ಮೊಬೈಲ್ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿ
ಹಾಗಿದ್ದರೆ ಈ ಅಸಾಮಾನ್ಯರನ್ನು ಕಾಣಬೇಕೆಂಬ ಹಂಬಲ ಅಂತೆಯೇ ಅವರನ್ನು ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಇಂದಿನ ಲೇಖನ ನಿಮಗೆ ಸಹಕಾರಿಯಾಗಲಿದೆ.

ಸುಂದರ್ ಪಿಚ್ಚೈ - ಗೂಗಲ್
ಭಾರತದಲ್ಲಿ ಜನಿಸಿದ ಸುಂದರ್ ಪಿಚ್ಚೈ, ಆಗಸ್ಟ್ 10, 2015 ರಿಂದ ಗೂಗಲ್ ಸಿಇಒ ಆಗಿ ನೇಮಕಗೊಂಡಿದ್ದಾರೆ. 44 ರ ಹರೆಯದ ಸುಂದರ್ ಚೆನ್ನೈಯಲ್ಲಿ ಜನಿಸಿದವರು.

ಸತ್ಯ ನಡೇಲ್ಲಾ - ಮೈಕ್ರೋಸಾಫ್ಟ್
22 ವರ್ಷದ ನಂಟನ್ನು ಮೈಕ್ರೋಸಾಫ್ಟ್‌ನೊಂದಿಗೆ ಹೊಂದಿಕೊಂಡಿರುವ ಸತ್ಯ ನಡೇಲ್ಲಾ, ಫೆಬ್ರವರಿ 2014 ರಂದು ಮುಖ್ಯ ಎಕ್ಸಿಕ್ಯೂಟೀವ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.

ರಾಜೀವ್ ಸುರಿ - ನೋಕಿಯಾ ಸಲ್ಯೂಶನ್ ಏಂಡ್ ನೆಟ್‌ವರ್ಕ್ಸ್
1995 ರಲ್ಲಿ ನೋಕಿಯಾಗೆ ಸೇರ್ಪಡೆಗೊಂಡ ರಾಜೀವ್ ನಂತರ 2014 ರ ಏಪ್ರಿಲ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಶಂತನು ನಾರಾಯಣ್, ಅಡೋಬ್
ಹೈದ್ರಾಬಾದ್‌ನಲ್ಲಿ ಜನಿಸಿದ ಶಂತನು, ಅಡೋಬ್ ಅನ್ನು 1998 ರಲ್ಲಿ ಸೇರಿದರು. ನಂತರ 2007 ರಲ್ಲಿ ಸಿಇಒ ಆಗಿ ನೇಮಕಗೊಂಡರು.

ಸಂಜಯ್ ಜಹಾ, - ಗ್ಲೋಬಲ್ ಫೌಂಡರೀಸ್
ಗ್ಲೋಬಲ್ ಫೌಂಡರೀಸ್ ಸಿಇಒ ಆಗಿ ಸಂಜಯ್ ಜಹಾ ನೇಮಗೊಂಡಿದ್ದು, ಇದು ಚಿಪ್‌ಗಳನ್ನು ತಯಾರಿಸುವ ಬಹುದೊಡ್ಡ ಸಂಸ್ಥೆಯಾಗಿ ಬೆಳದಿದೆ.

ಸಂಜಯ್ ಮೆಹ್ರೋತ್ರಾ - ಸ್ಯಾಂಡಿಸ್ಕ್
1988 ರಲ್ಲಿ ಸಂಜಯ್ ಮೆಹ್ರೋತ್ರಾ ಫ್ಲ್ಯಾಶ್ ಮೆಮೊರಿ ಸ್ಟೋರೇಜ್ ಕಂಪೆನಿಯನ್ನು ಹುಟ್ಟು ಹಾಕಿದ್ದು ಜನವರಿ 2011 ರಿಂದ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಜಾರ್ಜ್ ಕುರಿಯನ್ - ನೆಟ್ ಆಪ್
ಜೂನ್ 2015 ರಲ್ಲಿ ಸ್ಟೋರೇಜ್ ಮತ್ತು ಡೇಟಾ ಮ್ಯಾನೇಜ್‌ಮೆಂಟ್ ಕಂಪೆನಿ ನೆಟ್ ಆಪ್ ಸಿಇಒ ಮತ್ತು ಅಧ್ಯಕ್ಷರಾಗಿ ಜಾರ್ಜ್ ಕುರಿಯನ್ ನೇಮಕಗೊಂಡಿದ್ದರು.

ಫ್ರಾನ್ಸಿಸ್ಕೊ ಡಿಸೋಜಾ - ಕಾಗ್ನಿಜಾಂಟ್
ಸಾಫ್ಟ್‌ವೇರ್ ಸರ್ವೀಸ್ ವರ್ಗದಲ್ಲೇ ಅತಿ ಕಿರಿಯ ಸಿಇಒ ಎಂಬ ಮಾನ್ಯತೆಗೆ ಭಾಜನರಾದ ಫ್ರಾನ್ಸಿಸ್ಕೊ, ಕಂಪೆನಿಯ ಬೋರ್ಡ್ ಆಫ್ ಡೈರೆಕ್ಟರ್ಸ್‌ನ ಸದಸ್ಯರೂ ಹೌದು.

ದಿನೇಶ್ ಪಲಿವಾಲ್ - ಹಾರ್ಮನ್
ಹಾರ್ಮನ್ ಅಂತರಾಷ್ಟ್ರೀಯ ಕಂಪೆನಿಯ ಸಿಇಒ ಆಗಿರುವ ದಿನೇಶ್ ಪಲಿವಾಲ್, ಪ್ರೀಮಿಯಮ್ ಆಡಿಯೊ ಗೇರ್ ಬ್ರ್ಯಾಂಡ್‌ನ ಉತ್ತಮ ಹುದ್ದೆಯನ್ನು ಅಲಂಕರಿಸಿದ್ದಾರೆ.

ಅಶೋಕ್ ವೇಮುರಿ - ಕ್ಸೆರಾಕ್ಸ್ ಬ್ಯುಸಿನೆಸ್ ಎಲ್‌ಎಲ್‌ಸಿ
110 ವರ್ಷದ ಹಳೆಯ ಡಾಕ್ಯುಮೆಂಟ್ ತಂತ್ರಜ್ಞಾನ ಕಂಪೆನಿಯಾಗಿರುವ ಕ್ಸೆರಾಕ್ಸ್, ಇದರ ಸಿಇಒ ಆಗಿ ಗದ್ದುಗೆಯನ್ನು ಏರಿದವರು ಅಶೋಕ್ ವೇಮುರಿಯಾಗಿದ್ದಾರೆ.


Click it and Unblock the Notifications








