ಐಟಿ ಲೋಕವನ್ನು ಆಳುತ್ತಿದ್ದಾರೆ ಭಾರತೀಯ ಸಂಜಾತ ಸಿಇಒಗಳು..!

By Avinash

  ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿರುವ ಐತಿಹ್ಯ ಪುರಾಣ ಕಾಲದ್ದು, ರೈಟ್ ಸಹೋದರರು ವಿಮಾನ ಕಂಡು ಹಿಡಿಯುವುದಕ್ಕಿಂತ ಮುಂಚೆಯೇ ರಾಮಾಯಣದಲ್ಲಿ ಪುಷ್ಪಕ ವಿಮಾನವನ್ನು ಓಡಿಸಿದವರು ಭಾರತೀಯರು. ಅದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಮೊದಲುಗಳನ್ನು ನೀಡಿರುವುದರಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದಾರೆ. ಸರ್. ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್ ರಂತಹ ವಿಜ್ಞಾನಿಗಳನ್ನು ನೀಡಿದ ಭಾರತ ಈಗ ಮತ್ತೊಂದು ಜಗತ್ತನ್ನು ಆಳುತ್ತಿದೆ.

  ಐಟಿ ಲೋಕವನ್ನು ಆಳುತ್ತಿದ್ದಾರೆ ಭಾರತೀಯ ಸಂಜಾತ ಸಿಇಒಗಳು..!

  ಹೌದು, ಮಾಹಿತಿ ತಂತ್ರಜ್ಞಾನದ ಹಲವು ದಿಗ್ಗಜ ಕಂಪನಿಗಳು ಭಾರತೀಯರ ನೇತೃತ್ವದಲ್ಲಿ ಸದ್ಯ ಮುನ್ನುಗ್ಗುತ್ತಿವೆ. ಪ್ರಮುಖವಾಗಿ ಗೂಗಲ್, ಮೈಕ್ರೋಸಾಫ್ಟ್, ಅಡೋಬ್ ನಂತಹ ದಿಗ್ಗಜ ಕಂಪನಿಗಳಿಗೆ ಭಾರತೀಯ ಸಂಜಾತರೆ ಸಿಇಒಗಳು ಎಂದರೆ ನಂಬಲೇಬೇಕು. ಇಂತಹ ಭಾರತೀಯ ಸಂಜಾತ ಐಟಿ ಸಿಇಒಗಳ ಕುರಿತು ಒಂದಿಷ್ಟು ಮಾಹಿತಿ ಮುಂದಿನ ಸ್ಲೈಡ್ ಗಳಲ್ಲಿ ನೋಡಿ.

  777ಕ್ಕೆ 500ಜಿಬಿ ಡಾಟಾ...ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ಸುಂದರ್ ಪಿಚ್ಚೈ, Google

  ಸರ್ಚ್ ಇಂಜಿನ್ ದೈತ್ಯ ಗೂಗಲ್ ನ ಪ್ರಸ್ತುತ ಸಿಇಒ ತಮಿಳುನಾಡಿನ ಸುಂದರ್ ಪಿಚ್ಚೈ. 1972 ಜುಲೈ 12 ರಂದು ಚೆನ್ನೈನಲ್ಲಿ ಜನಿಸಿದ ಪಿಚ್ಚೈ ಆಗಸ್ಟ್ 10, 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡರು. IIT ಕಾನ್ಪುರದಲ್ಲಿ B.Tech ಪದವಿ ಪಡೆದಿರುವ ಇವರು, ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ MS, ವಾರ್ಟಾನ್ ವಿಶ್ವವಿದ್ಯಾಲಯದಲ್ಲಿ MBA ಪದವಿ ಪಡೆದಿದ್ದಾರೆ.

  2. ಸತ್ಯ ನಾದೆಲ್ಲಾ, Microsoft

  ಮಾಹಿತಿ ತಂತ್ರಜ್ಞಾನದ ಬೃಹತ್ ಕಂಪನಿ ಮೈಕ್ರೋಸಾಫ್ಟ್ ನ ಪ್ರಸ್ತುತ ಸಿಇಒ ಸತ್ಯ ನಾದೆಲ್ಲಾ. ಮೈಕ್ರೋಸಾಫ್ಟ್ ನ ನಿವೃತ್ತ ಸಿಇಒ ಸ್ಟೀವ್ ಬಾಲ್ಮರ್ ನಂತರ 2014ರಲ್ಲಿ ನಾದೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡರು. 1967 ಆಗಸ್ಟ್ 19ರಂದು ಹೈದ್ರಾಬಾದ್ ನಲ್ಲಿ ಜನಿಸಿದ ಸತ್ಯ ಮಣಿಪಾಲ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ BE ಪದವಿ ಪಡೆದಿದ್ದು, University of Wisconsin-Milwaukee ನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ MS ಪದವಿ, University of Chicago ದಿಂದ MBA ಪದವಿ ಪಡೆದಿದ್ದಾರೆ.

  3. ರಾಜೀವ್ ಸೂರಿ, Nokia

  ಮೊಬೈಲ್ ಮಾರುಕಟ್ಟೆಯಲ್ಲಿ ಬಹುದೊಡ್ಡ ಹೆಸರೆಂದರೆ ನೋಕಿಯಾ. ನೋಕಿಯಾದ ಸಿಇಒ ಮತ್ತು ಅಧ್ಯಕ್ಷರಾಗಿ ಏಪ್ರೀಲ್ 2014ರಲ್ಲಿ ಭಾರತೀಯ ರಾಜೀವ್ ಸೂರಿ ನೇಮಕಗೊಂಡರು. ಸಿಇಒ ಆಗುವುದಕ್ಕಿಂತ ಮುಂಚೆ ರಾಜೀವ್ ಸೂರಿ 2007ರಿಂದ 2009ರವರೆಗೆ ನೋಕಿಯಾ ಸಿಮನ್ಸ್ ನೆಟ್ ವರ್ಕ್ಸ್ ನ ಹೆಡ್ ಆಫ್ ದಿ ಸರ್ವೀಸ್ ಆಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 10, 1967ರಲ್ಲಿ ಜನಿಸಿದ ಸೂರಿ ಮಣಿಪಾಲ್ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ BE ಪದವಿ ಪಡೆದಿದ್ದಾರೆ.

  4. ಶಾಂತನು ನಾರಾಯಣ್, Adobe

  ಪ್ರಮುಖ ಸಾಫ್ಟವೇರ್ ಸಂಸ್ಥೆಯಾಗಿರುವ ಅಡೋಬ್ ನ ಪ್ರಸ್ತುತ ಸಿಇಒ ಶಾಂತನು ನಾರಾಯಣ್. ಮೇ 17, 1962ರಲ್ಲಿ ಹೈದ್ರಾಬಾದ್ ನಲ್ಲಿ ಜನಿಸಿದ ನಾರಾಯಣ್ 2007ರಿಂದ ಅಡೋಬ್ ನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಹೈದ್ರಾಬಾದ್ ನಲ್ಲಿರುವ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ BE ಪದವಿ ಪಡೆದಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ MBA ಪದವಿ, ಒಹಿಯೋದ ಬೌಲಿಂಗ್ ಗ್ರೀನ್ ಸ್ಟೇಟ್ ವಿಶ್ವವಿದ್ಯಾಲಯದಿಂದ MS ಪದವಿ ಪಡೆದಿದ್ದಾರೆ.

  5. ಸಂಜಯ್ ಜಾ, Global Foundries

  ಪ್ರಮುಖ ಚಿಪ್ ತಯಾರಿಕಾ ಕಂಪನಿ ಗ್ಲೋಬಲ್ ಫೌಂಡ್ರೀಸ್ ನ ಪ್ರಸ್ತುತ ಸಿಇಒ ಸಂಜಯ್ ಜಾ. ಜನೇವರಿ 2014ರಲ್ಲಿ ಸಿಇಒ ಆಗಿ ನೇಮಕಗೊಂಡಿದ್ದಾರೆ. ಅದಕ್ಕಿಂತ ಮುಂಚೆ Motorola Mobilityಯ ಸಿಇಒ ಮತ್ತು Qualcommನ ಸಿಒಒ ಆಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಮೊಟೊರೋಲಾ ಕಂಪನಿಯ ಸಹ ಸಿಇಒ ಆಗಿ ಸೇರಿ, ನಂತರ Motorola's Mobile Devices Business ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.

  6. ಜಾರ್ಜ್ ಕುರಿಯನ್, NetApp

  ಪ್ರಮುಖ ಸ್ಟೋರೆಜ್ ಮತ್ತು ಮಾಹಿತಿ ನಿರ್ವಹಣಾ ಕಂಪನಿ ನೆಟ್ ಆಪ್ ಗೆ ಜಾರ್ಜ್ ಕುರಿಯನ್ ಜೂನ್ 2015ರಲ್ಲಿ ಸಿಇಒ ಆಗಿ ನೇಮಕಗೊಂಡರು. ಇದಕ್ಕೂ ಮುನ್ನ ಕುರಿಯನ್ ನೆಟ್ ಆಪ್ ನಲ್ಲಿ ಪ್ರೋಡಕ್ಟ್ ಆಪರೇಷನ್ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. NetAppಗೆ ಸೇರುವ ಮುಂಚೆ Cisco Systemsನಲ್ಲಿ Application Networking and Switching Technology Groupನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸಿದ್ದರು. ಕೇರಳದ ಕೊಟ್ಟಾಯಮ್ ನಲ್ಲಿ ಜನಿಸಿರುವ ಕುರಿಯನ್ IIT ಮದ್ರಾಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

  7. ಫ್ರಾನ್ಸಿಸ್ ಡಿಸೋಜಾ, Cognizant

  ಸಾಫ್ಟ್ ವೇರ್ ಸೇವಾ ಕ್ಷೇತ್ರದಲ್ಲಿನ ಪ್ರಮುಖ ಕಂಪನಿ ಕಾಗ್ನಿಜೆಂಟ್ ನ ಪ್ರಸ್ತುತ ಸಿಇಒ ಭಾರತೀಯ ಸಂಜಾತಾ ಫ್ರಾನ್ಸಿಸ್ ಡಿಸೋಜಾ. 1994ರಲ್ಲಿ ಸಹ ಸಂಸ್ಥಾಪಕರಾಗಿ ಕಾಗ್ನಿಜೆಂಟ್ ಪ್ರವೇಶಿಸಿದ ಡಿಸೋಜಾ, 2007ರಲ್ಲಿ ಕಾಗ್ನಿಜೆಂಟ್ ನ ಸಿಇಒ ಆಗಿ ನೇಮಕಗೊಂಡರು. ಇವರ ಅವಧಿಯಲ್ಲಿ ಕಾಗ್ನಿಜೆಂಟ್ ಕಂಪನಿಯ ಕೆಲಸಗಾರರ ಸಂಖ್ಯೆ 55 ಸಾವಿರದಿಂದ 2.30 ಲಕ್ಷಕ್ಕೆ ಏರಿತು. ಕೀನ್ಯಾದಲ್ಲಿ ಜನಿಸಿದ ಇವರು ಈಸ್ಟ್ ಏಷ್ಯಾ ವಿಶ್ವವಿದ್ಯಾಲಯದಿಂದ BBA ಪದವಿ ಪಡೆದಿದ್ದಾರೆ.

  8. ದಿನೇಶ್ ಪಲಿವಾಲ್, Harman International

  ಜೆಬಿಎಲ್, ಬೆಕ್ಕರ್, ಡಿಬಿಎಕ್ಸ್ ನಂತಹ ಆಡಿಯೋ ಬ್ರಾಂಡ್ ಗಳನ್ನು ಹೊಂದಿರುವ ಹರ್ಮನ್ ಇಂಟರ್ ನ್ಯಾಷನಲ್ ನ ಪ್ರಸ್ತುತ ಸಿಇಒ ಭಾರತೀಯ ಮೂಲದ ದಿನೇಶ್ ಪಲಿವಾಲ್. ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ದಿನೇಶ್ ರೋರ್ಕಿಯ IITಯಿಂದ BE ಪದವಿ ಪಡೆದಿದ್ದಾರೆ. ABB Groupನಲ್ಲಿ ಹಲವು ಹುದ್ದೆಗಳಲ್ಲಿ ದಿನೇಶ್ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

  Check your Aahdaar update history - GIZBOT KANNADA
  9. ಅಶೋಕ್ ವೆಮುರಿ, Conduent Inc.

  9. ಅಶೋಕ್ ವೆಮುರಿ, Conduent Inc.

  Xeroxನ ಸಹೋದರ ಕಂಪನಿಗಳಲ್ಲಿ ಜೂನ್ 2016ರಲ್ಲಿ ಪ್ರತ್ಯೇಕ ಕಂಪನಿಯಾಗಿ ಪ್ರಾರಂಭವಾದ ಕಂಡ್ಯೂಯೆಂಟ್ ಕಂಪನಿಗೆ ಪ್ರಸ್ತುತ ಸಿಇಒ ಅಶೋಕ್ ವೆಮುರಿ. 110 ವರ್ಷ ಹಳೆಯದಾದ Xerox ಕಂಪನಿ ತನ್ನ ಹೊಸ ಕಂಪನಿಗೆ iGateನ ಮಾಜಿ ಸಿಇಒ ಅಶೋಕ್ ವೆಮುರಿಯನ್ನು ಸಿಇಒ ಆಗಿ ನೇಮಿಸಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Meet 9 Indian-origin CEOs of global tech giants. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more