ಒಂದು ಘಂಟೆಗೆ 200 ಐಫೋನ್ ಗಳನ್ನು ವಿಭಜಿಸಬಲ್ಲ ಸಾಮರ್ಥ್ಯ ಹೊಂದಿರುವ ರೋಬೊಟ್

By Gizbot Bureau
|

ಆಪಲ್ ತನ್ನ ಮರುಬಳಕೆ ಮಾಡುವ ಜಾಗತಿಕ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹೊಸದಾಗಿ ರೊಬೋಟ್ ಒಂದನ್ನು ಸೃಷ್ಟಿಮಾಡಿದೆ ಮತ್ತು ಅದನ್ನು ಜಗತ್ತಿಗೆ ಡೈಸಿ ಎಂದು ಪರಿಚಯಿಸಿದೆ. ಈ ರೋಬೋಟ್ ಕೇವಲ ಒಂದು ಘಂಟೆಯಲ್ಲಿ ಸುಮಾರು 200 ಐಫೋನ್ ಗಳನ್ನು ವಿಭಜಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ವಿಶೇಷತೆ:

ವಿಶೇಷತೆ:

ಯುಸ್ ನ ಗ್ರಾಹಕರು ತಮ್ಮ ಐಫೋನ್ ಗಳನ್ನು ವಿಭಜಿಸುವುದಕ್ಕಾಗಿ ಡೈಸಿಗೆ ಕಳುಹಿಸಬಹುದು ಮತ್ತು ಇದು ಸುಮಾರು 33 ಫೀಟ್ ಎತ್ತರ ರೋಬೊಟ್ ಆಗಿದ್ದು 5 ತೋಳುಗಳು ಅಥವಾ ಐಫೋನ್ ವಿಭಜನೆಗೆ ಬೇಕಾದ ಅಂಗಾಗಗಳನ್ನು ಹೊಂದಿದೆ. 15 ವಿಭಿನ್ನ ಮಾದರಿಯ ಐಫೋನ್ ಗಳನ್ನು ಕ್ರಮಬದ್ಧವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ವಿಶ್ವ ಭೂಮಿ ದಿನದ ಪ್ರಯುಕ್ತ ಬಿಡುಗಡೆ:

ವಿಶ್ವ ಭೂಮಿ ದಿನದ ಪ್ರಯುಕ್ತ ಬಿಡುಗಡೆ:

ಯುಸ್ ಬೆಸ್ಟ್ ಬ್ಯುಯ್ ಸ್ಟೋರ್ ಗಳಲ್ಲಿ ಮತ್ತು ನೆದರ್ ಲ್ಯಾಂಡ್ ನ ಕೆಪಿಎನ್ ರಿಟೈಲರ್ ಗಳು ಮರುಬಳಕೆಗಾಗಿ ಕಳುಹಿಸಿದ ಐಫೋನ್ ಗಳನ್ನು ವಿಭಜಿಸಿ ಮರುಬಳಕೆಗಾಗಿ ಡೈಸಿ ಸಹಾಯ ಮಾಡುತ್ತದೆ ಎಂದು ಎಪ್ರಿಲ್ 22 ರಂದು ವಿಶ್ವ ಭೂಮಿ ದಿನದ ಪ್ರಯುಕ್ತ ಆಪಲ್ ಸಂಸ್ಥೆ ಪ್ರಕಟಣೆ ನೀಡಿದೆ.

ಮರುಬಳಕೆಗೆ ಪ್ರಾಶಸ್ತ್ಯ ನೀಡಲಿರುವ ಆಪಲ್:

ಮರುಬಳಕೆಗೆ ಪ್ರಾಶಸ್ತ್ಯ ನೀಡಲಿರುವ ಆಪಲ್:

ಆಪಲ್ ಈಗಾಗಲೇ ಅದರ ಮೆಟಿರಿಯಲ್ ರಿಕವರಿ ಲ್ಯಾಬ್ ನ್ನು ಭವಿಷ್ಯದ ರಿಕವರಿಗಾಗಿ ಟೆಕ್ಸಾಸ್ ನ ಆಸ್ಟೀನ್ ನಲ್ಲಿ ಪ್ರಕಟಿಸಿದೆ. ಈ ಲ್ಯಾಬ್ ಆಪಲ್ ನ ಕೆಲವು ಇಂಜಿನಿಯರ್ ಗಳ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಇಂದಿನ ಇಂಡಸ್ಟ್ರಿ ಎದುರಿಸುತ್ತಿರುವ ಮರುಬಳಕೆ ಚಾಲೆಂಜ್ ಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಈ ತಂಡ ನಡೆಸುತ್ತದೆ.

ಉದ್ದೇಶ:

ಉದ್ದೇಶ:

ಎಲೆಕ್ಟ್ರಾನಿಕ್ ಸಪ್ಲೈ ಚೈನ್ ನ ಪ್ರಮುಖ ಭಾಗವೆಂದರೆ ಅದು ಅಡ್ವಾನ್ಸ್ ಆಗಿರುವ ರಿಸೈಕಲಿಂಗ್ ಅಂದರೆ ನೂತನವಾಗಿರುವ ಮರುಬಳಕೆಯನ್ನು ಸಾಧಿಸುವುದು ಮತ್ತು ಆ ಮೂಲಕ ಇಂಡಸ್ಟ್ರಿಯ ಏಳಿಗೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಆಪಲ್ ಸಂಸ್ಥೆಯ ವಾತಾವರಣ, ಪಾಲಿಸಿ ಮತ್ತು ಸಾಮಾಜಿಕ ಚಟುವಟಿಕೆಗಳ ವಿಭಾಗದ ಉಪಾಧ್ಯಕ್ಷರಾಗಿರುವ ಲಿಸಾ ಜಾಕ್ಸನ್.

ಡೈಸಿ ಸಾಮರ್ಥ್ಯ:

ಡೈಸಿ ಸಾಮರ್ಥ್ಯ:

ಆಪಲ್ ನ ಈ ಕಾರ್ಯಕ್ರಮ ಆರಂಭವಾದ ಮೇಲೆ ಸುಮಾರು 1 ಮಿಲಿಯನ್ ಡಿವೈಸ್ ಗಳನ್ನು ಈಗಾಗಲೇ ಕಲೆಹಾಕಿದೆ ಮತ್ತು ಒಂದು ವರ್ಷಕ್ಕೆ ಒಂದು ಡೈಸಿ ರೊಬೋಟ್ ಸುಮಾರು 1.2 ಮಿಲಿಯನ್ ಡಿವೈಸ್ ಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿದೆ.

48,000 ಮೆಟ್ರಿಕ್ ಟನ್ ಕಸ:

48,000 ಮೆಟ್ರಿಕ್ ಟನ್ ಕಸ:

2018 ರಲ್ಲಿ ಕಂಪೆನಿಯು 7.8 ಮಿಲಿಯನ್ ಆಪಲ್ ಡಿವೈಸ್ ಗಳನ್ನು ಮರುಬಳಕೆಗೆ ಉಪಯೋಗಿಸಿದೆ ಮತ್ತು ಆ ಮೂಲಕ ಭೂಮಿಗೆ ಸೇರುವ ಸುಮಾರು 48,000 ಮೆಟ್ರಿಕ್ ಟನ್ ನ್ನು ಎಲೆಕ್ಟ್ರಾನಿಕ್ ವೇಸ್ಟ್ ನ್ನು ತಡೆದಿದೆ.

ಐಫೋನ್ ಗಳನ್ನು ಹೊರತುಪಡಿಸಿ ಡೈಸಿ ಕೋಬಾಲ್ಟ್, ಅಲ್ಯುಮಿನಿಯಂ ಮತ್ತು ಟಿನ್ ನ್ನು ಕೂಡ ರಿಕವರಿ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಅದನ್ನು ಮರಬಳಕೆಗೆ ಯೋಗ್ಯಗೊಳಿಸುತ್ತದೆ. ಒಮ್ಮೆ ಡೈಸಿಯಿಂದ ರಿಕವರ್ ಆಗಿರುವ ಮೆಟಿರಿಯಲ್ ಗಳು ತಯಾರಿಕಾ ಪ್ರೊಸೆಸ್ ಗೆ ಒಳಪಟ್ಟು ಮರುಬಳಕೆ ಆಗುತ್ತದೆ.

ಬ್ಯಾಟರಿ ಮರುಬಳಕೆ:

ಬ್ಯಾಟರಿ ಮರುಬಳಕೆ:

ಬ್ಯಾಟರಿ ಮೆಟಿರಿಯಲ್ ನ ಪ್ರಮುಖ ಅಂಶವೇ ಕೊಬಾಲ್ಟ್ ಆಗಿದೆ ಮತ್ತು ಡೈಸಿಯಿಂದ ರಿಕವರ್ ಆಗಿರುವ ಆಪಲ್ ಬ್ಯಾಟರಿಗಳನ್ನು ಪುನಃ ಬಳಕೆಗೆ ಅಂದರೆ ಸಪ್ಲೈ ಚೈನ್ ಗೆ ಆಪಲ್ ಕಳುಹಿಸುತ್ತದೆ. ಈ ರೀತಿ ಕೋಬಾಲ್ಟ್ ನಿಂದ ರಿಕವರಿಯಿಂದ ಆಗುವ ಆಪಲ್ ಬ್ಯಾಟರಿಗಳು ಇದೇ ಮೊದಲ ಬಾರಿಗೆ ಸಂಸ್ಥೆ ಬಳಕೆ ಮಾಡುತ್ತಿದೆ.

Best Mobiles in India

Read more about:
English summary
Meet Daisy, the new Apple robot who can disassemble 200 iPhones per hour

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X