ಲೀಟಿವಿ ಯಿಂದ ಬಜೆಟ್ ಬೆಲೆಯ ಫಿಂಗರ್ ಪ್ರಿಂಟ್ ಫೋನ್ಸ್

By Shwetha
|

ಲೀಟಿವಿ ಮಲ್ಟಿ ನ್ಯಾಶನಲ್ ಟೆಕ್ನಾಲಜಿ ಸಂಸ್ಥೆ ಫ್ಲ್ಯಾಗ್‌ಶಿಪ್ ಫೋನ್‌ಗಳಾದ ಲೀ 1ಎಸ್ ಮತ್ತು ಲೀ ಮ್ಯಾಕ್ಸ್ ಅನ್ನು ಲಾಂಚ್ ಮಾಡಿದೆ.

ಸಂಸ್ಥೆ ಹೇಳುವಂತೆ ನವೆಂಬರ್‌ನಲ್ಲಿ ಈಗಾಗಲೇ 1 ಮಿಲಿಯನ್ ಲೀ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗಷ್ಟೇ ಭಾರತದಲ್ಲಿ ರೂ 10,999 ಮತ್ತು ರೂ 32,999 ಬೆಲೆಗೆ ಮಾರಾಟವಾಗಿದೆ. ಭಾರತೀಯ ಬಳಕೆದಾರರಿಗೆ ಒಪ್ಪುವಂತಹ ರೀತಿಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಸಿದ್ಧಗೊಂಡಿದ್ದು ನಿಜಕ್ಕೂ ಬಜೆಟ್ ಬೆಲೆಯ ಅತ್ಯುತ್ತಮ ಡಿವೈಸ್‌ಗಳು ಎಂದೆನಿಸಿವೆ.

ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ತಂತ್ರಜ್ಞಾನ

ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ಬಂದಿದ್ದು ಅತ್ಯಪೂರ್ಣ ವಿಶೇಷತೆಗಳನ್ನು ಹೊಂದಿದೆ. ಇತರ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗೆ ಇದು ಕಠಿಣ ಪೈಪೋಟಿಯನ್ನು ನೀಡುವುದು ಖಚಿತವಾಗಿದ್ದು ಫಿಂಗರ್ ಪ್ರಿಂಟ್ ತಂತ್ರಜ್ಞಾನ ಇದರಲ್ಲೂ ಇದೆ.

ಪೇಟೆಂಟ್ ಎಲ್‌ಇ ತಂತ್ರಜ್ಞಾನ

ಪೇಟೆಂಟ್ ಎಲ್‌ಇ ತಂತ್ರಜ್ಞಾನ

ಪೇಟೆಂಟ್ ಲೀ ತಂತ್ರಜ್ಞಾನದೊಂದಿಗೆ ಎಲ್ಇ 1 ವಿಶ್ವದ ಪ್ರಥಮ ಮಿರರ್ ಮೇಲ್ಮೈ ಉಳ್ಳ ಫಿಂಗರ್ ಪ್ರಿಂಟ್ ಗುರುತಿರುವ ಡಿವೈಸ್ ಆಗಿ ಹೆಸರುವಾಸಿಯಾಗಿದ್ದು 0.15 ಸೆಕೆಂಡ್‌ಗಳು ಮತ್ತು 99.3% ನಿಖರ ಗುರುತಿಸುವಿಕೆಯನ್ನು ಪಡೆದುಕೊಂಡಿದೆ. ಫೋನ್ ಅನ್ನು 360 ಡಿಗ್ರಿಯಲ್ಲಿ ಅನ್‌ಲಾಕ್ ಮಾಡಬಹುದಾಗಿದ್ದು ಐದು ಫಿಂಗರ್ ಪ್ರಿಂಟ್ ಆಯ್ಕೆಗಳು ಲಭ್ಯವಿದೆ.

ಫಿಂಗರ್ ಪ್ರಿಂಟ್ ಬಟನ್

ಫಿಂಗರ್ ಪ್ರಿಂಟ್ ಬಟನ್

ಫಿಂಗರ್ ಪ್ರಿಂಟ್ ಬಟನ್ ಬಳಸಿ ಫೋಟೋಗಳನ್ನು ತೆಗೆದುಕೊಳ್ಳಬಹುದಾಗಿದ್ದು ಒಂದೇ ಹ್ಯಾಂಡ್‌ನಲ್ಲಿ ಫೋನ್ ಅನ್ನು ನಿಯಂತ್ರಿಸಬಹುದಾಗಿದೆ.

ಮಿನಿ ಮೇಕಪ್ ಮಿರರ್‌

ಮಿನಿ ಮೇಕಪ್ ಮಿರರ್‌

ಲೀ 1 ಫೋನ್‌ಗಳು ಸಿಲ್ವರ್ ಮತ್ತು ಗೋಲ್ಡ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಮಿನಿ ಮೇಕಪ್ ಮಿರರ್‌ನಂತೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಇನ್ ಬಿಲ್ಟ್ ಪ್ರೈವಸಿ ಸೆಕ್ಯುರಿಟಿ, ತಂತ್ರಜ್ಞಾನ ಡಿವೈಸ್‌ನಲ್ಲಿದ್ದು ಇದು ಮುಖ್ಯ ಫೀಚರ್‌ಗಳಲ್ಲಿ ಒಂದೆನಿಸಿದೆ.

2004 ರಲ್ಲಿ ಕಂಪೆನಿ ಸ್ಥಾಪನೆ

2004 ರಲ್ಲಿ ಕಂಪೆನಿ ಸ್ಥಾಪನೆ

2004 ರಲ್ಲಿ ಜಿಯಾ ಯೂಟಿಂಗ್ ಮತ್ತು ಲಿ ಹೊಂಗ್ ಲೀಟಿವಿ ಕಂಪೆನಿಯನ್ನು ಸ್ಥಾಪಿಸಿದ್ದು ಇದು ಮುಂಚೂಣಿಯಲ್ಲಿರುವ ತಂತ್ರಜ್ಞಾನ ಸಂಸ್ಥೆಯಾಗಿ ಹೆಸರು ಮಾಡಿದೆ.

Best Mobiles in India

English summary
Letv, a leading multi-national technology conglomerate, launched the flagship Superphones-Le 1s and Le Max in China in October in 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X