ಸಾಯಾ: ಸುಂಟರಗಾಳಿ ಎಬ್ಬಿಸಿದ 3ಡಿ ಚೆಲುವೆ

Written By:

ಅಸಾಧ್ಯ ಎಂಬುದನ್ನು ಸಾಧಿಸಿ ತೋರುವ ಛಲಕ್ಕೆ ಆತ ಮುನ್ನುಡಿ ಬರೆದಿದ್ದಾನೆ. ವಿಜ್ಞಾನ ಲೋಕಕ್ಕೆ ಸವಾಲೊಡ್ಡುವ ಇಂತಹ ಸಾಧನೆಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಭೂಮಿ ಅಳಿದರೂ ಮಾನವರು ಬದುಕಲು ಸಾಧ್ಯವಿರುವಂತಹ ತಾವಳದ ಅನ್ವೇಷಣೆಯನ್ನು ಪತ್ತೆಹಚ್ಚಿ ನೀರು, ಗಾಳಿ, ಬೆಳಕು ಅಲ್ಲಿಯೂ ಇದೆ ಎಂಬುದನ್ನು ಇಡಿಯ ವಿಶ್ಚಕ್ಕೆ ತೋರಿಸಿದವರು.

ಇನ್ನೂ ಮುಂದಕ್ಕೆ ಹೋಗಿ ಮಾನವರನ್ನೇ ಸ್ಥಳಾಂತರಿಸುವ ರೊಬೋಟ್‌ಗಳ ಆವಿಷ್ಕಾರಕ್ಕೂ ಆತ ಮುಂದಾಗಿದ್ದು ಈಗ ಇತಿಹಾಸ. ಏಕೆಂದರೆ ರೊಬೋಟ್‌ಗಳ ಅಭಿವೃದ್ಧಿಯಲ್ಲಿ ಈತ ಈಗ ಮೀರಿಸಿದ್ದಾನೆ. ಇಂದಿನ ಲೇಖನದಲ್ಲಿ ಇಂತಹುದೇ ಸುಂದರ ರೊಬೋಟ್ ಸಾಯಾಳ ವಿವರವಾದ ವರ್ಣನೆ ಇಲ್ಲಿದೆ.

ಪ್ರಥಮ ನೋಟದಲ್ಲಿ ಈಕೆ ಸಾಮಾನ್ಯ ಶಾಲಾ ಹುಡುಗಿಯಂತೆ ಕಾಣುತ್ತಾಳೆ. ಆದರೆ ಆಕೆ ಸಾಮಾನ್ಯಳಲ್ಲಿ ಅಸಾಮಾನ್ಯಳು. ಕಂಪ್ಯೂಟರ್ ಅನಿಮೇಶನ್ ತಂತ್ರಗಳಿಂದ ಜೀವತಳೆದ ಕಂಪ್ಯೂಟರ್ ನಿರ್ಮಿತ ಚಿತ್ರಗಳಿಂದ ಮೈದಳೆದಿರುವ ರೂಪಸಿಯಾಗಿದ್ದಾಳೆ ಸಾಯ. ಇಂತಹ ಚೆಲುವು, ಈಕೆಯಲ್ಲಿ ತುಂಬಿಕೊಂಡದ್ದಾದರೂ ಹೇಗೆ? ಮನುಷ್ಯಳಂತೆ ಕಾಣುವ ಈಕೆಯ ನಿರ್ಮಾಣವನ್ನು ಮಾಡಿದವರಾದರೂ ಯಾರು ಎಂಬ ಪ್ರಶ್ನೆಗಳು ನಿಮ್ಮ ಮನದಲ್ಲಿ ಉಂಟಾಗಿದ್ದರೆ ಇಂದಿನ ಲೇಖನದಲ್ಲಿ ನೀವು ಅದಕ್ಕೆ ಉತ್ತರಗಳನ್ನು ಪಡೆದುಕೊಳ್ಳಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಕಿ ಇಶಿಕಾವಾ ದಂಪತಿ

ಯೂಕಿ ಇಶಿಕಾವಾ ದಂಪತಿ

#1

3 ಡಿ ಕಂಪ್ಯೂಟರ್ ಗ್ರಾಫಿಕ್ಸ್ ಫ್ರಿಲಾನ್ಸ್ 3 ಡಿ ಕಂಪ್ಯೂಟರ್ ಗ್ರಾಫಿಕ್ಸ್ ಕಲಾವಿದರಾದ ತೆರ್ಯೂಕಿ ಮತ್ತು ಯೂಕಿ ಇಶಿಕಾವಾ ದಂಪತಿಗಳ ನಿರ್ಮಾಣವೇ ಸಾಯ.
ಚಿತ್ರಕೃಪೆ:Teruyki & Yuki ishikawa

ಆನ್‌ಲೈನ್‌ ಪೋಸ್ಟ್

ಆನ್‌ಲೈನ್‌ ಪೋಸ್ಟ್

#2

ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅವರು ಪೋಸ್ಟ್ ಮಾಡಿ ಅದ್ಭುತ ಪ್ರತ್ಯುತ್ತರಗಳನ್ನು ಪಡೆದುಕೊಂಡಿದ್ದಾರೆ. ಇವರು ನಿಜವಾದ ಹುಡುಗಿಯನ್ನೇ ಫೋಟೋ ತೆಗೆದಿದ್ದಾರೆ ಎಂದೇ ಈ ಫೋಟೋ ವಿಕ್ಷಣೆ ಮಾಡಿದ ಎಲ್ಲರೂ ಭಾವಿಸಿದ್ದರು.

ಚಿತ್ರಕೃಪೆ:Teruyki & Yuki ishikawa

ಬಿಡುವಿನ ವೇಳೆ

ಬಿಡುವಿನ ವೇಳೆ

#3

ಕಂಪ್ಯೂಟರ್ ಗ್ರಾಫಿಕ್ಸ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಈ ದಂಪತಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಸಾಯಾಳನ್ನು ನಿರ್ಮಿಸಿದ್ದಾರೆ.
ಚಿತ್ರಕೃಪೆ:Teruyki & Yuki ishikawa

ಸಾಯಾ ಪ್ರಾಜೆಕ್ಟ್‌

ಸಾಯಾ ಪ್ರಾಜೆಕ್ಟ್‌

#4

ಇಶಿಕಾವಾ ಆರ್ಮರ್ ಮತ್ತು ಇತರ ಉಪಕರಣಗಳನ್ನು ಸಾಯಾ ಪ್ರಾಜೆಕ್ಟ್‌ಗಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕೃಪೆ:Teruyki & Yuki ishikawa

ಹೆಚ್ಚು ಕಷ್ಟಕರ

ಹೆಚ್ಚು ಕಷ್ಟಕರ

#5

ಸಾಯಾಳ ನಿರ್ಮಾಣ ಕೆಲಸ ಹೆಚ್ಚು ಕಷ್ಟಕರವಾದುದು ಎಂಬುದಾಗಿ ಇಶಿಕಾವಾ ತಿಳಿಸಿದ್ದಾರೆ. ಚಿತ್ರಕೃಪೆ:Teruyki & Yuki ishikawa

ಹೆಚ್ಚು ಕಷ್ಟಕರವಾದ ಕೆಲಸ

ಹೆಚ್ಚು ಕಷ್ಟಕರವಾದ ಕೆಲಸ

#6

ಚರ್ಮಕ್ಕೆ ಮೃದುತ್ವ, ಎಳಸುತನವನ್ನು ತರುವುದೇ ಹೆಚ್ಚು ಕಷ್ಟಕರವಾದ ಕೆಲಸವಾಗಿದೆ ಎಂಬುದು ಆಕೆಯ ಮಾತಾಗಿದೆ.
ಚಿತ್ರಕೃಪೆ:Teruyki & Yuki ishikawa

ಕೂದಲಿನ ಸುಧಾರಣೆ

ಕೂದಲಿನ ಸುಧಾರಣೆ

#7

ಸಾಯಾ ಮಾಡೆಲ್ ಅನ್ನು ಅವರು ಇನ್ನೂ ಅಭಿವೃದ್ಧಿಡಪಡಿಸುತ್ತಿದ್ದು, ಚರ್ಮ ಮತ್ತು ಕೂದಲಿನ ಸುಧಾರಣೆಯಲ್ಲಿ ಇನ್ನಷ್ಟು ಪ್ರಗತಿಯನ್ನು ಇವರು ಮಾಡಬೇಕಾಗಿದೆ.
ಚಿತ್ರಕೃಪೆ:Teruyki & Yuki ishikawa

3ಡಿ ಮಾಡೆಲಿಂಗ್

3ಡಿ ಮಾಡೆಲಿಂಗ್

#8

ಚಲನಚಿತ್ರಗಳಲ್ಲಿ ಇಫೆಕ್ಟ್‌ಗಳನ್ನು ಉಂಟುಮಾಡಲು ಬಳಸಲಾದ ಮತ್ಯಾ ಪರಿಕರಗಳಾದ 3ಡಿ ಮಾಡೆಲಿಂಗ್ ಶ್ರೇಣಿಗಳನ್ನು ಬಳಸಿಕೊಂಡು ಸಾಯಾಳನ್ನು ನಿರ್ಮಿಸಲಾಗಿದೆ.

ಸಿಜಿ ಪಾತ್ರ ಇವರದ್ದೇ

ಸಿಜಿ ಪಾತ್ರ ಇವರದ್ದೇ

#9

ಸ್ವಯಂ ನಿರ್ಮಾಣದ ಚಿತ್ರದಲ್ಲಿ ಸಾಯಾಳನ್ನು ಸಿಜಿ ಪಾತ್ರವನ್ನಾಗಿ ದಂಪತಿಗಳು ತೋರಿಸಲಿದ್ದಾರೆ. ಇನ್ನು ಚಿತ್ರಕ್ಕಾಗಿ ಆಕೆಯನ್ನು ಇನ್ನಷ್ಟು ಪ್ರಗತಿಪರವಾಗಿ ನಿರ್ಮಿಸಬೇಕಾಗಿದೆ ಎಂಬುದು ಇವರುಗಳ ಮಾತಾಗಿದೆ.

ಮನಸೋಲದವರು

ಮನಸೋಲದವರು

#10

ಅಂತೂ ಸಾಯಾ ಚಿತ್ರದಲ್ಲಿ ಬರುತ್ತಾಳೆಂದರೆ ಆಕೆಯ ಅದ್ಭುತ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲವೆಂದೇ ಹೇಳಬಹುದು.

ಕಂಪ್ಯೂಟರ್‌ನಿಂದ ನೇರವಾಗಿಯೇ ಮೈತಳೆದ ಹುಡುಗಿ

ಕಂಪ್ಯೂಟರ್‌ನಿಂದ ನೇರವಾಗಿಯೇ ಮೈತಳೆದ ಹುಡುಗಿ

#11

ಕಂಪ್ಯೂಟರ್‌ನಿಂದ ನೇರವಾಗಿಯೇ ಮೈತಳೆದ ಹುಡುಗಿ ಈಕೆಯಾಗಿದ್ದು, ಈಕೆಯನ್ನು ನಿರ್ಮಿಸಿದ ತಂದೆ ತಾಯಿಗಳು 3 ಡಿ ಸಿಜಿಐ ಗಳಾಗಿದ್ದು ತಮ್ಮ ಸುಂದರ ಮಗಳ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದವರಾಗಿದ್ದು ಆಕೆಯನ್ನು ಚಿತ್ರಗಳಲ್ಲಿ ತೋರಿಸುವ ಸಾಹಸಕ್ಕೆ ಮುಂದಾಗಿದ್ದಾರೆ.

ನೈಜ ಮಾನವ

ನೈಜ ಮಾನವ

#12

ಆಕೆಯ ಫೋಟೋಗಳನ್ನು ನೋಡಿದಾಗ, ಆಕೆ 3 ಡಿ ಚಿತ್ರ ಎಂದು ಹೇಳಲು ಸಾಧ್ಯವೇ ಇಲ್ಲ. ಆಕೆ ನೈಜ ಮಾನವರಂತೆಯೇ ಕಾಣುತ್ತಿದ್ದು, ಉಸಿರಾಡುವ ಬೊಂಬೆಯಂತಿದ್ದಾಳೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
She was born straight out of a computer, created by a mother and father who make their living as freelance 3-D CGI artists and who have high hopes for their beautiful daughter to one day become a movie star..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot