ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಬರಲಿದೆ ಒನ್ ಡಿಜಿಟಲ್ ಐಡಿ ಕಾರ್ಡ್!
ಪ್ರಸ್ತುತ ದಿನಗಳಲ್ಲಿ ಭಾರತ ಸರ್ಕಾರ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಸರ್ಕಾರದ ಹಲವು ಸೇವೆಗಳು ಡಿಜಿಟಲೀಕರಣಗೊಂಡಿವೆ. ಸದ್ಯ ಇದೀಗ ದೇಶದ ನಾಗರೀಕರಿಗೆ ಹೊಸ ಡಿಜಿಟಲ್ ಐಡಿ ಕಾರ್ಡ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಕಾರ್ಡ್‌ನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಸೇರಿದಂತೆ ಸರ್ಕಾರದ ಹಲವು ಕಾರ್ಡ್‌ಗಳನ್ನು ಲಿಂಕ್ ಮಾಡಬಹುದು ಎನ್ನಲಾಗಿದೆ. ಇದರಿಂದ ಎಲ್ಲಾ ಸೇವೆಗಳು ಒನ್ ಡಿಜಿಟಲ್ ಐಡಿ ಕಾರ್ಡ್ ಬಳಸಬಹುದು ಎಂದು ಹೇಳಲಾಗಿದೆ.

ಹೌದು, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಒನ್ ಡಿಜಿಟಲ್ ಐಡಿ ಕಾರ್ಡ್ ಪರಿಚಯಿಸುವು ಪ್ಲಾನ್ ರೂಪಿಸಿದೆ. ಹೊಸ ಮಾದರಿಯ "ಫೆಡರೇಟೆಡ್ ಡಿಜಿಟಲ್ ಐಡೆಂಟಿಟೀಸ್" ಬಗ್ಗೆ ಪ್ರಸ್ತಾವನೆ ಮಾಡಿದೆ. ಈ ಕಾರ್ಡ್‌ನಲ್ಲಿ ದೇಶದ ನಾಗರಿಕರ ಎಲ್ಲಾ ಡಿಜಿಟಲ್ ಐಡಿಗಳನ್ನು ಒಂದೇ ಕಾರ್ಡ್‌ನಲ್ಲಿ ಪರಸ್ಪರ ಲಿಂಕ್ ಮಾಡಬಹುದು ಎನ್ನಲಾಗಿದೆ. ಇದಕ್ಕಾಗಿ ಮಲ್ಟಿ ಡಿಜಿಟಲ್ ಐಡಿಗಳನ್ನು ಒಂದಕ್ಕೆ ಲಿಂಕ್ ಮಾಡುವ ಯೋಜನೆಯನ್ನು ಸರ್ಕಾರ ಪ್ರಸ್ತಾಪಿಸಿದೆ. ಹಾಗಾದ್ರೆ ಈ ಡಿಜಿಟಲ್ ಕಾರ್ಡ್ ಹೇಗಿರಲಿದೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತ ಸರ್ಕಾರ ಉದ್ದೇಶಿಸಿರುವ ಒನ್ ಡಿಜಿಟಲ್ ಐಡಿ ಕಾರ್ಡ್ ಆಧಾರ್ ಕಾರ್ಡ್ ಸಂಖ್ಯೆಯಂತೆಯೇ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಫೆಡರಲ್ ಡಿಜಿಟಲ್ ಐಡೆಂಟಿಟಿಯೊಂದಿಗೆ, ಸರ್ಕಾರವು ಹೊಸ ಡಿಜಿಟಲ್ ಆರ್ಕಿಟೆಕ್ಚರ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಡಿಜಿಟಲ್ ಐಡಿ ಕಾರ್ಡ್ ಅನ್ನು ಹಲವು ಸೇವೆಗಳಿಗೆ ಬಳಸಲು ಸಾಧ್ಯವಾಗಲಿದೆ. ಇದರಿಂದ ನೀವು ಅನೇಕ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗುವುದು ತಪ್ಪಲಿದೆ. ಒಂದೇ ಕಾರ್ಡ್ ಅನ್ನು ಬಳಸಿ ಅನೇಕ ಸೇವೆಗಳನ್ನು ಪಡೆಯಲು ಅವಕಾಶ ಸಿಗಲಿದೆ.

ಒನ್ ಡಿಜಿಟಲ್ ಐಡಿ ಕಾರ್ಡ್ ವಿಶೇಷತೆ ಏನು?
ಒನ್ ಡಿಜಿಟಲ್ ಐಡಿ ಕಾರ್ಡ್ ಮೂಲಕ ನೀವು ಅನೇಕ ಉದ್ದೇಶಗಳಿಗೆ ಬಳಸುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡಬಹುದು. ಇದರಿಂದ ನೀವು ಯಾವುದನ್ನು ಬಳಸಬೇಕೆಂದು ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸಲಿದೆ. ಇನ್ನು ಫೆಡರಲ್ ಡಿಜಿಟಲ್ ಐಡೆಂಟಿಟಿಯು ಕೇಂದ್ರ ಮತ್ತು ರಾಜ್ಯ-ಸಂಬಂಧಿತ ID ಡೇಟಾವನ್ನು ಸಂಗ್ರಹಿಸಲು ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಇದನ್ನು KYC ಅಥವಾ eKYC ಪ್ರಕ್ರಿಯೆಗಳಿಗೆ ಬಳಸಬಹುದಾಗಿದೆ. ಪ್ರಸ್ತಾವಿತ ಯೋಜನೆಯನ್ನು ಇಂಡಿಯಾ ಎಂಟರ್‌ಪ್ರೈಸ್ ಆರ್ಕಿಟೆಕ್ಚರ್ 2.0 ಅಡಿಯಲ್ಲಿ ಸ್ಥಳಾಂತರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭದ್ರತೆ ನೀಡಲಿದೆ?
ಒನ್ ಡಿಜಿಟಲ್ ಐಡಿ ಕಾರ್ಡ್ ನಿಮಗೆ ಡಿಜಿಟಲ್ ಭದ್ರತೆಯನ್ನು ನೀಡಲಿದೆ. ಆನ್‌ಲೈನ್ ವಂಚನೆಗಳನ್ನು ತಪ್ಪಿಸುವುದಕ್ಕೆ ಸಹಕಾರಿಯಾಗಲಿದೆ. ಅದರಲ್ಲೂ ಆನ್‌ಲೈನ್ ಸ್ಕ್ಯಾಮ್‌ಗಳು KYC ಮತ್ತು OTP ಗೆ ಸಂಬಂಧಿಸಿವೆ. ಇದರಿಂದ ಸಿಂಗಲ್ ಡಿಜಿಟಲ್ ಐಡಿ ಕಾರ್ಡ್ ನಿಮಗೆ ಉಪಯುಕ್ತವಾಗಲಿದೆ. ಅನೇಕ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ನಮೂದಿಸುವ ಬದಲು ಸಿಂಗಲ್ ಡಿಜಿಟಲ್ ಕಾರ್ಡ್ ಅನ್ನು ನಮೂದಿಸುವ ಮೂಲಕ ನೀವು ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

"ಫೆಡರೇಟೆಡ್ ಡಿಜಿಟಲ್ ಐಡಿ ಕಾರ್ಡ್" ಹೊರತಾಗಿ, ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಮೂರು ಪ್ರಮುಖ ಆರ್ಕಿಟೆಕ್ಚರ್ ಮಾದರಿಗಳನ್ನು ಪ್ರಸ್ತಾಪಿಸಿದೆ. ಡೊಮೇನ್ ಆರ್ಕಿಟೆಕ್ಚರ್ ಮಾದರಿಯು ಕೇಂದ್ರ ಸಚಿವಾಲಯಗಳು ಅಥವಾ ಏಕಕಾಲೀನ ಅಥವಾ ರಾಜ್ಯ ವಿಷಯಗಳೊಂದಿಗೆ ವ್ಯವಹರಿಸುವ ಸಚಿವಾಲಯಗಳು ಇವುಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸೂಕ್ತವಾಗಿರುತ್ತದೆ. ಸದ್ಯ ಪ್ರಸ್ತಾವಿತ ಸೇವೆಯು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕೇಂದ್ರದ ಬಜೆಟ್ ಅದಿವೇಶನ ಹತ್ತಿರದಲ್ಲಿರುವುದರಿಂದ ಶೀಘ್ರದಲ್ಲೇ ಒನ್ ಡಿಜಿಟಲ್ ಐಡಿ ಕಾರ್ಡ್ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.


Click it and Unblock the Notifications








