Meizu 17: ಮೀಜು 17 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಮೀಜು ಕಂಪೆನಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸರಣಿ ಮೀಜು 17 ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಚೀನಾ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿರುವ ಮೀಜು ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ. ಸದ್ಯ ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಪನಿಯು ಮೀಜು 17 ಸರಣಿ ಸ್ಮಾರ್ಟ್‌ಫೋನ್‌ ವಿಶೇಷತೆ, ಬೆಲೆ, ವಿನ್ಯಾಸ ಏನು ಅನ್ನೊದನ್ನ ಹಂಚಿಕೊಂಡಿದೆ.

ಹೌದು

ಹೌದು, ಚೀನಾದ ಸ್ಮಾರ್ಟ್‌ಫೋನ್‌ ಕಂಪೆನಿ ಮೀಜು ಕಂಪೆನಿ ತನ್ನ 17 ಸರಣಿಯಲ್ಲಿ ಮೀಜು 17 ಮತ್ತು ಟಾಪ್-ಆಫ್-ಲೈನ್ ಮೀಜು 17 ಪ್ರೊ ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಹೊಲಿಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳನ್ನ ಹೊಂದಿದ್ದರು, ಸ್ವಲ್ಪಮಟ್ಟಿಗೆ ಒಂದೇ ರೀತಿಯ ವಿಶೇಷತೆಗಳನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 5G ಕನೆಕ್ಟಿವಿಟಿಯನ್ನು ಒಳಗೊಂಡಿರುವ ಮೀಜು ಕಂಪೆನಿಯ ಮೊದಲನೆಯ ಶ್ರೇಣಿಯಾಗಿದೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ. ಸದ್ಯ ಮೀಜು 17 ಸರಣಿ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸದ್ಯ ಲಭ್ಯ ಮಾಹಿತಿ ಪ್ರಕಾರ ಮೀಜು 17 ಸರಣಿಯ ಈ ಎರಡು ಸ್ಮಾರ್ಟ್‌ಫೋನ್‌ಗಳು 6.6-ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿವೆ. ಅಲ್ಲದೆ ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿವೆ. ಇದಲ್ಲದೆ ಈ ಡಿಸ್‌ಪ್ಲೇಯು 19.5: 9 ರಚನೆಯ ಅನುಪಾತವನ್ನು ಒಳಗೊಂಡಿದ್ದು, 92.2% ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು ಎಚ್‌ಡಿಆರ್ 10+ ಬೆಂಬಲವನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯಲ್ಲಿ ಉತ್ತಮ ಟಚ್‌ ರಿಯಾಕ್ಷನ್‌ಗಾಗಿ ಹೊಸ "ಎಂಇಂಜೈನ್ 3.0" ಹ್ಯಾಪ್ಟಿಕ್ ಎಂಜಿನ್ ಅನ್ನು ಸೇರಿಸಲಾಗಿದೆ ಎಂದು ಮೀಜು ಕಂಪೆನಿ ಹೇಳಿಕೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಜೊತೆಗೆ 5G ಮತ್ತು ಅಡ್ರಿನೊ 650 GPU ಹೊಂದಿದೆ. ಇನ್ನು ಮೀಜು 17 ಸ್ಮಾರ್ಟ್‌ಫೋನ್‌ 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಹಾಗೇಯೇ ಮೀಜು 17ಪ್ರೊ ಸ್ಮಾರ್ಟ್‌ಫೋನ್‌ 8GB RAM + 128GB ಹಾಗೂ 12GB RAM + 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಮೀಜು 17 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಜು 17 ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೋನಿ ಐಎಂಎಕ್ಸ್ 686, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌, ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಮೀಜು 17 ಪ್ರೊ ಕೂಡ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮೊದಲನೇ ಕ್ಯಾಮೆರಾ 64 ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ 8 ಎಕ್ಸ್ ಜೂಮ್ ಮತ್ತು ಫೋಕಲ್ ಲೆಂಗ್ತ್ 26 ಎಂಎಂ -210 ಎಂಎಂ, 32 ಎಂಪಿ ಸೋನಿ ಐಎಂಎಕ್ಸ್ 616 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಜೊತೆಗೆ 20 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನ ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಸೂಪರ್ ನೈಟ್ ಮೋಡ್ 3.0 ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ಗಳು 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ಅನ್ನು ಹೊಂದಿವೆ. ಇದರಲ್ಲಿ ಮೀಜು 17 ಸ್ಮಾರ್ಟ್‌ಫೋನ್‌ 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತವೆ. ಮೀಜು17 ಪ್ರೊ ಆವೃತ್ತಿಯಲ್ಲಿ 27W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಅನ್ನು ಬೆಂಬಲಿಸಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಮೀಜು 17 ಸ್ಮಾರ್ಟ್‌ಫೋನ್‌ 8GB RAM + 256GB ಆಯ್ಕೆಯಲ್ಲಿ RMB 3,999 (50,278 ರೂ,) ಬೆಲೆಯನ್ನ ಹೊಂದಿದೆ. ಇದಲ್ಲದೆ ಮೀಜು 17ಪ್ರೊ 8GB RAM + 128GB ಅಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ RMB 4,299 (45,987 ರೂ), ಮತ್ತು 12GB RAM + 256GB ಸ್ಮಾರ್ಟ್‌ಫೋನ್‌ RMB 4,700(50,296 ರೂ) ಬೆಲೆಯನ್ನ ಹೊಂದಿವೆ. ಇನ್ನು ಮೀಜು 17 ಗ್ರೀನ್, ವೈಟ್ ಮತ್ತು ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು ಪ್ರೊ ಮಿಂಟ್ ಗ್ರೀನ್, ಬ್ಲ್ಯಾಕ್ ಮತ್ತು ವೈಟ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Chinese smartphone maker Meizu has just launched its latest flagship smartphone series, the Meizu 17 lineup..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X