Instagram Stories ಈಗ ಹೆಚ್ಚು ಸ್ಮಾರ್ಟ್: ಹೊಸ Meta AI Restyle ಫೀಚರ್ ನೋಡಿ!
ನಾವು ಪ್ರತಿದಿನ Instagram ಸ್ಟೋರಿ ಹಂಚಿಕೊಳ್ಳುತ್ತೇವೆ. ಆದರೆ, ಕೆಲವೊಮ್ಮೆ ಫೋಟೋ ಸರಿಯಾಗಿ ಬಾರದಿದ್ದರೆ ಅಥವಾ ಬ್ಯಾಕ್‌ಗ್ರೌಂಡ್ ಅಸಮಾಧಾನಕರವಾಗಿದ್ದರೆ, ಬೇಸರವಾಗುತ್ತಿತ್ತು. ಅಥವಾ ಇದನ್ನು ಸರಿಪಡಿಸಲು ಬೇರೆ ಆ್ಯಪ್‌ಗಳನ್ನು ತೆರೆಯಬೇಕಾಗುತ್ತಿತ್ತು. ಈಗ ಈ ಸಮಸ್ಯೆಯೇ ಬೇಡ.! ಏಕೆಂದರೆ, ಇನ್‌ಸ್ಟಾಗ್ರಾಂ ಇದೀಗ ಹೊಸ AI Restyle ಫೀಚರ್ ಮೂಲಕ ನೇರವಾಗಿ ಸ್ಟೋರಿಯಲ್ಲೇ ಫೋಟೋ ಅಥವಾ ವಿಡಿಯೋ ಎಡಿಟ್ ಮಾಡಲು ಅವಕಾಶ ನೀಡಿದೆ. ಮೆಟಾ ಬಿಡುಗಡೆ ಮಾಡಿರುವ ಈ ಹೊಸAI ತಂತ್ರಜ್ಞಾನದಿಂದ ನಿಮ್ಮ ಸ್ಟೋರಿ ಈಗ ಕೇವಲ ಕ್ಷಣಗಳಲ್ಲೇ ಮಾಯಾ ರೂಪ ಪಡೆಯಬಹುದು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಸುಲಭವಾದ ಎಡಿಟಿಂಗ್, ನೇರವಾಗಿ Instagramನಲ್ಲೇ
ನೀವು ಇದೀಗ Instagram ಸ್ಟೋರಿಗೆ ಫೋಟೋ ಅಥವಾ ವಿಡಿಯೋ ಅಪ್‌ಲೋಡ್ ಮಾಡಿದ ಬಳಿಕ ಮೇಲ್ಭಾಗದಲ್ಲಿ ಕಾಣುವ Restyle ಐಕಾನ್ ಮೇಲೆ ಟ್ಯಾಪ್ ಮಾಡಿ ಸಾಕು. ನಂತರ ನೀವು ಬಯಸುವ ಬದಲಾವಣೆಯನ್ನು ಕಮಾಂಡ್ ರೂಪದಲ್ಲಿ ಹೇಳಬಹುದು. ಉದಾಹರಣೆಗೆ, "ಬ್ಯಾಕ್‌ಗ್ರೌಂಡ್ ಲೈಟ್ ಮಾಡಿ", "ಕ್ರೌನ್ ಹಾಕಿ", "ಡ್ರೆಸ್ ಬ್ಲ್ಯಾಕ್ ಬಣ್ಣದಲ್ಲಿ ಇರಲಿ" ಹೀಗೆ ಪ್ರಾಂಪ್ಟ್‌ಗಳನ್ನು ನೀಡದರೆ ಸಾಕು, AI ನಿಮ್ಮ ಸೂಚನೆಯಂತೆ ಫೋಟೋವನ್ನು ತಕ್ಷಣ ಪರಿವರ್ತಿಸುತ್ತದೆ. ಇದಲ್ಲದೆ, ಇನ್‌ಸ್ಟಾಗ್ರಾಂ ಕೆಲವು ಪ್ರೀಸೆಟ್ ಎಫೆಕ್ಟ್‌ಗಳುನ್ನೂ ನೀಡಿದೆ. "ಸನ್‌ಗ್ಲಾಸ್", "ಬ್ಲ್ಯಾಕ್ ಔಟ್‌ಫಿಟ್", ಅಥವಾ "ವಾಟರ್‌ಕಲರ್ ಸ್ಟೈಲ್" ಮುಂತಾದವುಗಳನ್ನು ನೀವು ಬಳಸಬಹುದು.

ಕಸ್ಟಮ್ ಪ್ರಾಂಪ್ಟ್‌ಗಳಿಂದ ನಿಮ್ಮ ಕಲ್ಪನೆ ಮೂಡಿಸಬಹುದು.
ಇನ್ನೂ ಸ್ವಲ್ಪ ಕ್ರಿಯೇಟಿವ್ ಆಗಿರೋವರು "ಪಪರಾಜಿ ಫ್ಲ್ಯಾಶ್ ಲುಕ್ ಕೊಡು" ಅಥವಾ "ಫಿಲ್ಮ್ ನ್ವಾಯರ್ ಸ್ಟೈಲ್ ಬೇಕು" ಎಂದು ಹೇಳಬಹುದು. ಇಲ್ಲಿ ನಿಮ್ಮ ಸೂಚನೆ ಎಷ್ಟು ವಿವರವಾಗುತ್ತದೋ, ಫಲಿತಾಂಶವೂ ಅಷ್ಟು ನಿಖರವಾಗಿರುತ್ತದೆ. ಬೆಳಕು, ಬಣ್ಣ, ಬ್ಯಾಕ್‌ಗ್ರೌಂಡ್ ಎಲ್ಲವೂ ನಿಮ್ಮ ಮಾತಿನಂತೆ ಬದಲಾಗುತ್ತದೆ. "Add Yours" ಸ್ಟಿಕ್ಕರ್‌ನಿಂದ ಟ್ರೆಂಡ್ ಆರಂಭಿಸಿ ವಿಶಿಷ್ಟ ಎಡಿಟ್ ಮಾಡಿದರೆ ಅದನ್ನು ಇತರರಿಗೂ ಪ್ರಯೋಗಿಸಲು ಅವಕಾಶ ನೀಡಬಹುದು. "Add Yours" ಸ್ಟಿಕ್ಕರ್ ಸೇರಿಸಿ ಸ್ಟೋರಿ ಹಂಚಿದರೆ, ನಿಮ್ಮ ಸ್ನೇಹಿತರು ಅದೇ ಎಫೆಕ್ಟ್ ಬಳಸಿ ತಮ್ಮ ಫೋಟೋ ಅಪ್‌ಲೋಡ್ ಮಾಡಬಹುದು. ಹೀಗೆ ಒಂದು ಟ್ರೆಂಡ್ ಕ್ಷಣಗಳಲ್ಲಿ ವೈರಲ್ ಆಗಬಹುದು.! ಇದು ಯುವಜನತೆಯನ್ನು ಆಕರ್ಷಿಸುವಂತೆ ಮೂಡಿಬಂದಿದೆ.
ವಿಡಿಯೋಗಳಿಗೂ ಅದೇ AI ಬಳಸಬಹುದು.
ಈ ಹೊಸ Restyle ಫೀಚರ್ ಕೇವಲ ಫೋಟೋಗಳಿಗೆ ಮಾತ್ರವಲ್ಲ, ವಿಡಿಯೋಗಳಿಗೂ ಅನ್ವಯಿಸುತ್ತದೆ. ನೀವು ಒಂದು ಸಾಮಾನ್ಯ ದೃಶ್ಯವನ್ನು "Underwater fantasy" ಅಥವಾ "ಮೂವಿ ಲುಕ್" ಆಗಿ ಪರಿವರ್ತಿಸಬಹುದು. ಈ ಮೂಲಕ Instagram Stories ಅನ್ನು ನೀವು ಇನ್ನಷ್ಟು ಕ್ರಿಯೇಟಿವ್ ಮತ್ತು ಆಕರ್ಷಕವಾಗಿ ಕಾಣಿಸುವಂತೆ ಮಾಡಬಹುದು. ಈ ಮೊದಲು ಕೆಲವೊಮ್ಮೆ ಫೋಟೋ ಸರಿಯಾಗಿ ಬಾರದಿದ್ದರೆ ಅಥವಾ ಬ್ಯಾಕ್‌ಗ್ರೌಂಡ್ ಅಸಮಾಧಾನಕರವಾಗಿದ್ದರೆ ಆಗುತ್ತಿದ್ದ ಸಮಸ್ಯೆಯು ಕ್ಷಣ ಮಾತ್ರದಲ್ಲಿ ಬಗೆಹರಿಸಲು ಮೆಟಾ ಈ ಹೊಸ ಪ್ರಯೋಗವನ್ನು ತಂದಿದೆ. ನೀವು ಕೂಡ ಈ Meta AI Restyle ಫೀಚರ್ ಅನ್ನು ಒಮ್ಮೆ ಬಳಸಿ ನೋಡಿ. ಮತ್ತು ಈ ಫೀಚರ್ ಎಷ್ಟು ಉತ್ತಮವಾಗಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








