ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಗ್ರಾಮ್‌ನಲ್ಲಿ AI ಪ್ರೊಫೈಲ್‌ಗಳನ್ನು ಪರಿಚಯಿಸಿದ ಮೆಟಾ!
ಇತ್ತೀಚಿನ ದಿನಗಳಲ್ಲಿ AI ಟೆಕ್ನಾಲಜಿನ ಸಾಕಷ್ಟು ಟ್ರೆಂಡ್ ಸೃಷ್ಟಿಮಾಡಿದೆ. AI ಆಧಾರಿತ ಆ್ಯಕರಿಂಗ್, AI ಟೆಕ್ನಾಲಜಿ ಆಧಾರಿತ ಫೋಟೋಗ್ರಫಿ ಹೀಗೆ ಹಲವು ಆಯಾಮಗಳಲ್ಲಿ AI ಟೆಕ್ನಾಲಜಿ ಟ್ರೆಂಡ್ ಮುಂದುವರೆದಿದೆ. ಇದೀಗ ಮೆಟಾ ಕಂಪೆನಿ ಕೂಡ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ಬಳಕೆದಾರರಿಗಾಗಿ ಹೊಸ 28 AI ಪ್ರೊಫೈಲ್‌ಗನ್ನು ಪರಿಚಯಿಸಿದೆ.
ಹೌದು, ಟ್ರೆಂಡ್‌ಗೆ ತಕ್ಕಂತೆ ಹೆಜ್ಜೆ ಹಾಕುವ ಮೆಟಾ ಕಂಪೆನಿ ಇದೀಗ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಹೊಸ 28 AI ಪ್ರೊಫೈಲ್‌ಗಳನ್ನು ಪರಿಚಯಿಸಿದೆ. ಬಳಕೆದಾರರು ಈ AI ಪ್ರೊಫೈಲ್‌ಗಳೊಂದಿಗೆ ಸಂವಹನ ನಡೆಸಬಹುದು. ಅಲ್ಲದೆ ಈ 28 AI ಪ್ರೊಫೈಲ್‌ಗಳಲ್ಲಿ ಕೆಲವು ವಿಶಿಷ್ಟ ಆಸಕ್ತಿಗಳಿಗೆ ಸಂಬಂಧಿಸಿದ ಪ್ರೊಫೈಲ್‌ಗಳು ಕೂಡ ಸೇರಿವೆ. ಹಾಗಾದ್ರೆ ಮೆಟಾ ಪರಿಚಯಿಸಿರುವ ಹೊಸ 28 AI ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೆಟಾ ಪರಿಚಯಿಸಿರುವ 28 AI ಪ್ರೊಫೈಲ್‌ಗಳನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೆಸೆಂಜರ್, ವಾಟ್ಸಾಪ್‌ನಲ್ಲಿ ಗುರುತಿಸಬಹುದಾಗಿದೆ. ಇನ್ನು ಈ AI ಪ್ರೊಫೈಲ್‌ಗಳು ತೀರಾ ಪರಿಚಿತವಾಗಿ ಕಾಣುವಂತೆ ಮಾಡಲು ಕೆಲವು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಮೆಟಾ ಸಂಸ್ಥೆ ಪಾಲುದಾರಿಕೆ ಮಾಡಿಕೊಂಡಿದೆ. ಆದರಿಂದ ನೀವು ಸಂವಹನ ನಡೆಸುವ AI ಪ್ರೊಫೈಲ್‌ಗಳು ನಿಮ್ಮ ಪರಿಚಿತ ಮುಖಗಳ ಪಾತ್ರಗಳನ್ನು ಪ್ರತಿನಿಧಿಸುತ್ತವೆ. ಇದಲ್ಲದೆ ನೀವು AI ಪ್ರೊಫೈಲ್‌ಗಳೊಂದಿಗೆ ನಡೆಸುವ ಸಂವಹನವು ಸಹ AI ನಿಂದ ರಚಿಸಲಾಗಿದ್ದು, ಇದನ್ನು ಮೆಟಾ ನಿರ್ವಹಿಸುತ್ತದೆ.
ಅಂದರೆ ನಿಮಗೆ AI ಪ್ರೊಫೈಲ್‌ಗಳ ಮೂಲಕ ಬರುವ ಮೀಡಿಯಾ ಕಂಟೆಂಟ್ AI ಕ್ರಿಯೆಟ್ ಆಗಿರುತ್ತದೆ. ಅಂತಹ ಪೋಸ್ಟ್‌ಗಳು ಅಥವಾ ಇಮೇಜ್ ಮೀಡಿಯಾವನ್ನು #ImaginedWithAI ಟೆಕ್ಸ್ಟ್‌ನೊಂದಿಗೆ ಟ್ಯಾಗ್ ಮಾಡಲಾಗುತ್ತದೆ. ಅಲ್ಲದೆ ಚಿತ್ರದ ಕೆಳಗಿನ ಎಡಭಾಗದಲ್ಲಿ ವಾಟರ್‌ಮಾರ್ಕ್ ಕೂಡ ಮಾಡಲಾಗಿರುತ್ತದೆ. ಇದರಿಂದ ನೀವು ಸಂಬಾಷಣೆ ನಡೆಸಿರುವುದು AI ಜೊತೆಗೆ ಅನ್ನೊದು ತಿಳಿಯಲಿದೆ.
ಇನ್ನು ಮೆಟಾ ಕಂಪೆನಿ ಅದರ ಡೀಫಾಲ್ಟ್ AI ಅಸಿಸ್ಟೆಂಟ್ ಜೊತೆಗೆ, ವಿಭಿನ್ನ ವ್ಯಕ್ತಿತ್ವಗಳೊಂದಿಗೆ AI ಅವತಾರಗಳನ್ನು ಸಹ ತೋರಿಸಿದೆ. ಅದರಂತೆ AI ಪಾತ್ರಗಳಾಗಿ ಬರುವ ಪ್ರಸಿದ್ಧ ವ್ಯಕ್ತಿಗಳಲ್ಲಿ ಡ್ವೇನ್ ವೇಡ್, ಕೆಂಡಾಲ್ ಜೆನ್ನರ್, ಮಿಸ್ಟರ್ ಬೀಸ್ಟ್, ಸ್ನೂಪ್ ಡಾಗ್ ಮತ್ತು ಹೆಚ್ಚಿನವರು ಸೇರಿದ್ದಾರೆ ಎನ್ನಲಾಗಿದೆ. ಇನ್ನು ಮೆಟಾ ಕಂಪೆನಿ ತನ್ನ AI ಇಮೇಜ್ ಜನರೇಷನ್ ಟೂಲ್ ಅನ್ನು 'ಎಕ್ಸ್‌ಪ್ರೆಸ್ಸಿವ್ ಮೀಡಿಯಾ ಯೂನಿವರ್ಸ್' ಅಥವಾ ಎಮು ಎಂದು ಹೆಸರಿಸಿದೆ.
ಈ AI ಇಮೇಜ್‌ಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡಲು ಬಳಕೆದಾರರ ಟೆಕ್ಸ್ಟ್ ಪ್ರಾಂಪ್ಟ್‌ಗಳನ್ನು ಆಧರಿಸಿದ AI ಸ್ಟಿಕ್ಕರ್‌ಗಳನ್ನು ತ್ವರಿತವಾಗಿ ರಚಿಸಬಹುದು. ಸದ್ಯ ಈ ಕಸ್ಟಮ್ ಸ್ಟಿಕ್ಕರ್ ಜನರೇಷನ್ ಫೀಚರ್ಸ್ ಮುಂದಿನ ತಿಂಗಳು ವಾಟ್ಸಾಪ್, ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸ್ಟೋರೀಸ್‌ಗಳಲ್ಲಿ ಆಯ್ದ ಕೆಲವು ಇಂಗ್ಲಿಷ್ ಭಾಷೆಯ ಬಳಕೆದಾರರಿಗೆ ಹೊರತರಲಿದೆ. ನಂತರದ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆ ಕೂಡ ಇದೆ.
ಇನ್ನು ಮೆಟಾ ಪರಿಚಯಿಸಿರುವ ಹೊಸ AIಗಳು 22023 ರ ಹಿಂದಿನ ಮಾಹಿತಿಯನ್ನು ಒಳಗೊಂಡಿರುತ್ತವೆ. ಆದ್ದರಿಂದ ನೀವು AI ಜೊತೆಗೆ ಸಂವಹನ ನಡೆಸುವಾಗ 2022 ರವರೆಗಿನ ರಿಯಾಕ್ಷನ್ ಅನ್ನು ಮಾತ್ರ ನಿರೀಕ್ಷಿಸಬಹುದಾಗಿದೆ. AI ಜೊತೆಗೆ ಸಂಭಾಷಣೆಯನ್ನು ಹೆಚ್ಚು ಪ್ರಸ್ತುತವಾಗುವಂತೆ ಮಾಡಲು ಕೆಲವು ತಿಂಗಳುಗಳಲ್ಲಿ Meta ಇನ್ನಷ್ಟು AIಗಳನ್ನು ಹೊರತರುವ ನಿರೀಕ್ಷೆಯಿದೆ. ಇದರಿಂದ ನೀವು ಪ್ರಸ್ತುತ ದಿನಗಳ ಬಗ್ಗೆ ಕೂಡ ಸಂಭಾಷಣೆ ನಡೆಸುವುದಕ್ಕೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








