ಸ್ಮಾರ್ಟ್‌ವಾಚ್‌ಗಳಿಗಾಗಿಯೇ ಹೊಸ ವಾಟ್ಸಾಪ್ ಅಪ್ಲಿಕೇಶನ್ ಬಿಡುಗಡೆ! ಇದರ ಬಳಕೆ ಹೇಗೆ?
ಇನ್ಮುಂದೆ ಸ್ಮಾರ್ಟ್‌ವಾಚ್‌ಗಳಲ್ಲಿಯೂ ಕೂಡ ಸರಾಗವಾಗಿ ವಾಟ್ಸಾಪ್ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿಯೇ ಸೊಶೀಯಲ್ ಮೀಡಿಯಾ ದೈತ್ಯ ಮೆಟಾ ಕಂಪೆನಿ Google ನ Wear OS ನಲ್ಲಿ ರನ್ ಆಗುವ ಸ್ಮಾರ್ಟ್‌ವಾಚ್‌ಗಳಿಗಾಗಿ ಹೊಸ ವಾಟ್ಸಾಪ್ ಅಪ್ಲಿಕೇಶನ್ ಪರಿಚಯಿಸಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ ವಾಟ್ಸಾಪ್ ಬಳಕೆ ಸಾದ್ಯವಾಗಲಿದೆ.
ಹೌದು, ಸ್ಮಾರ್ಟ್ ವಾಚ್‌ಗಳಿಗಾಗಿಯೇ ಮೀಸಲಾದ ಹೊಸ ವಾಟ್ಸಾಪ್ ಅಪ್ಲಿಕೇಶನ್ ಬಿಡುಗಡೆಯಾಗಿದೆ. ಇದರ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸ್ಮಾರ್ಟ್‌ವಾಚ್‌ನಲ್ಲಿ ವಾಟ್ಸಾಪ್ ಕಾಲ್ ಮತ್ತು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ ಹೊಸ ವಾಟ್ಸಾಪ್ ಅಪ್ಲಿಕೇಶನ್ ವಿಶೇಷತೆ ಏನು? ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್‌ಗಳಿಗಾಗಿ ಹೊಸ ವಾಟ್ಸಾಪ್
ಮೆಟಾ ಕಂಪೆನಿ ಈಗಾಗಲೇ WearOS ಅಪ್ಲಿಕೇಶನ್ ಅನ್ನು ಹೊರತರಲು ಪ್ರಾರಂಭಿಸಿದೆ. ಇದು Wear OS 3ನಲ್ಲಿ ರನ್ ಆಗಿರುವ ಸ್ಮಾರ್ಟ್‌ವಾಚ್‌ಗಳೊಂದಿಗೆ ಹೊಂದಿಕೊಳ್ಳಲಿದೆ. ಇನ್ನು ಈ ಅಪ್ಲಿಕೇಶನ್ ಬಳಕೆದಾರರಿಗೆ ಟೆಕ್ಸ್ಟ್‌ಗಳು, ಎಮೋಜಿಗಳು, ಸಂದೇಶಗಳಿಗೆ ರಿಪ್ಲೆ ಕಳುಹಿಸುವುದಕ್ಕೆ ಹಾಗೂ ಸಂದೇಶಗಳನ್ನು ಸ್ವಿಕರಿಸುವುದಕ್ಕೆ ಅನುಮತಿಸಲಿದೆ. ಜೊತೆಗೆ ಈ ಅಪ್ಲಿಕೇಶನ್ ಮೂಲಕ ಧ್ವನಿ ಸಂದೇಶಗಳನ್ನು ನೇರವಾಗಿ ಸ್ಮಾರ್ಟ್‌ವಾಚ್ ಮೂಲಕವೇ ರಕಾರ್ಡ್ ಮಾಡಿ ಕಳುಹಿಸಲು ಅವಕಾಶ ನೀಡಲಿದೆ.
ಇನ್ನು WearOS ಗಾಗಿ ಸ್ವತಂತ್ರ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಕಳೆದ ಮೇ ತಿಂಗಳಲ್ಲಿಯೇ ಘೋಷಿಸಲಾಗಿತ್ತು. ಗೂಗಲ್ ತನ್ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್, I/O 2023 ರ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಸದ್ಯ ಈ ಆಯ್ಕೆಯು ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇನ್ನು ವಾಟ್ಸಾಪ್ ಅಪ್ಲಿಕೇಶನ್ ಹೊರತಾಗಿ ಗೂಗಲ್ ಸ್ಪಾಟಿಫೈ ಮತ್ತು ಪೆಲ್ಟಾನ್ ಸೇರಿದಂತೆ ಇತರ ಥರ್ಡ್ ಪಾರ್ಟಿ ವೇರ್ OS ಅಪ್ಲಿಕೇಶನ್‌ಗಳನ್ನು ಸಹ ಅನಾವರಣಗೊಳಿಸಿದೆ.
ಇದರೊಂದಿಗೆ Wear OS-ಆಧಾರಿತ ಸ್ಮಾರ್ಟ್‌ವಾಚ್‌ಗಳಲ್ಲಿ ಹೊಸ ಅನುಭವ ನೀಡುವುದಕ್ಕಾಗಿ ಗೂಗಲ್ ತನ್ನ ಅಪ್ಲಿಕೇಶನ್‌ಗಳಾದ ಗೂಗಲ್ ಹೋಮ್, ಜಿಮೇಲ್ ಮತ್ತು ಕ್ಯಾಲೆಂಡರ್‌ನಲ್ಲಿ ಹೊಸ ಅಪ್ಡೇಟ್‌ಗಳನ್ನು ಸಹ ಘೋಷಿಸಿದೆ. ಈ ಮೂಲಕ ಸ್ಮಾರ್ಟ್‌ವಾಚ್‌ನಲ್ಲಿ ನಿಮ್ಮ ಮೊಬೈಲ್ ಅನ್ನು ಕನೆಕ್ಟ್ ಮಾಡದೇ ಇದ್ದರೂ ಕೂಡ ವಾಟ್ಸಾಪ್, ಗೂಗಲ್ ಅನ್ನು ಬಳಸುವುದುಕ್ಕೆ ಸಾದ್ಯವಾಗಲಿದೆ.

ಆಪಲ್ ವಾಚ್‌ನಲ್ಲಿದೆಯಾ ವಾಟ್ಸಾಪ್?
ಪ್ರಸ್ತುತ ಆಪಲ್‌ನ ವಾಚ್ ಓಎಸ್ ಯಾವುದೇ ಮೀಸಲಾದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಹೊಂದಿಲ್ಲ. ಇದರಿಂದ ಆಪಲ್ ವಾಚ್‌ಗಳಲ್ಲಿ ವಾಟ್ಸಾಪ್ ಕರೆಗಳನ್ನು ಮಾಡುವುದಕ್ಕೆ ಅವಕಾಶವಿಲ್ಲ. ಆದರೆ ವಾಟ್ಸಾಪ್ ಸಂದೇಶಗಳನ್ನು ನೋಡುವುದಕ್ಕೆ ಮತ್ತು ಸಂದೇಶಗಳಿಗೆ ರಿಪ್ಲೇ ಮಾಡುವುದಕ್ಕೆ ಅನುಮತಿಸಲಿದೆ. ಆದರೆ ಇದಕ್ಕಾಗಿ ಆಪಲ್ ವಾಚ್ ಬಳಕೆದಾರರು ತಮ್ಮ ಐಫೋನ್‌ಗಳಲ್ಲಿ ಅಗತ್ಯವಿರುವ ನೋಟಿಫಿಕೇಶನ್ ಸೆಟ್ಟಿಂಗ್ಸ್‌ಗಳನ್ನು ಆಕ್ಟಿವ್ ಮಾಡಬೇಕಾಗುತ್ತದೆ.
ಸದ್ಯ ಗೂಗಲ್ WearOS WhatsApp ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಸಾಧ್ಯತೆಯಿದೆ. ಇದರಿಂದ ಗೂಗಲ್ ಆಪಲ್ ಕಂಪೆನಿಯೊಂದಿಗೆ ಪೈಪೋಟಿ ಸಾಧಿಸಲಿದೆ ಎಂದು ಟೆಕ್ ವಲಯದಲ್ಲಿ ಚರ್ಚೆ ಜೊರಾಗಿದೆ. ಇದು ಮುಂದಿನ ದಿನಗಳಲ್ಲಿ ಹೊಸ ಅಪ್ಲಿಕೇಶನ್‌ಗಳು ಮತ್ತು ಅನುಭವಗಳನ್ನು ಪ್ಲಾಟ್‌ಫಾರ್ಮ್‌ಗೆ ತರಲು ಡೆವಲಪರ್‌ಗಳನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗಿದೆ.
ಈ ಮೂಲಕ ಸ್ಮಾರ್ಟ್‌ವಾಚ್ ಬಳಕೆದಾರರು ಇನ್ಮುಂದೆ ವಾಟ್ಸಾಪ್ ಅನ್ನು ಮೊಬೈಲ್‌ನಲ್ಲಿ ಮಾತ್ರವಲ್ಲದೆ ವಾಚ್‌ನಲ್ಲಿ ಕೂಡ ಆನಂದಿಸಬಹುದು. ಸ್ಮಾರ್ಟ್‌ವಾಚ್ ಮೂಲಕವೇ ವಾಟ್ಸಾಪ್ ಬಳಕೆದಾರರಿಗೆ ಸಂದೇಶ ಕಳುಹಿಸಬಹುದು. ಇದು ಹೊಸ ಸಂಚಲನಕ್ಕೆ ಕಾರಣವಾಗಲಿದೆಯಾ ಅನ್ನೊದನ್ನ ಕಾದು ನೋಡಬೇಕಿದೆ.


Click it and Unblock the Notifications








