WhatsApp ಸ್ಟೇಟಸ್ ಅಪ್ಡೇಟ್‌ಗಳ ಟ್ರೇ ಬದಲಾವಣೆಗೆ ಮುಂದಾದ ಮೆಟಾ ! ಏನಲ್ಲಾ ಬದಲಾವಣೆ ಇರಬಹುದು ?
WhatsApp ಭಾರತದಲ್ಲಿ ಅತೀ ಹೆಚ್ಚು ಜನರು ಬಳಸುವ ತ್ವರಿತ ಸಂದೇಶ ಕಳುಹಿಸುವಿಕೆಯ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಕಂಪನಿ ಆಗಾಗ ನೂತನ ಅಪ್ಡೇಟ್‌ಗಳನ್ನು ಹೊರತರುವ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಲೇ ಬಂದಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್ ಪ್ಲಾಟ್‌ಫಾರ್ಮ್ ತನ್ನ ಸ್ಟೇಟಸ್ ಅಪ್ಡೇಟ್‌ಗಳ ಟ್ರೇ ಯನ್ನು ಮರುವಿನ್ಯಾಸಗೊಳಿಸುಲು ಯೋಜಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಮತ್ತು ಇದರಿಂದಾಗಿ ಹೆಚ್ಚಿನ ಬಳಕೆದಾರರು ಇಂಟರ್ಫೇಸ್ ಅನ್ನು ಕಾಣಬಹುದಾಗಿದೆ ಎಂದು ವರದಿಗಳು ತಿಳಿಸಿವೆ. ಇದರರ್ಥ ನಿಮ್ಮ ವಾಟ್ಸಾಪ್ ಶೀಘ್ರದಲ್ಲೇ ನೂತನ ಅಪ್ಡೇಟ್ ಪಡೆದು ಇಂಟರ್ಫೇಸ್ ವಿಭಿನ್ನವಾಗಿ ಕಾಣಿಸಬಹುದು ಎಂದು ನಿರೀಕ್ಷಿಸಲಾಗಿದೆ.
WA ಬೀಟಾ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ವಾಟ್ಸಾಪ್ ಬಳಕೆದಾರರು ದೊಡ್ಡದಾದ ಹಾಗೂ ಲಂಬವಾದ ಥಂಬ್‌ನೇಲ್‌ಗಳ ರೂಪದಲ್ಲಿ ಇತರರ WhatsApp ಸ್ಟೇಟಸ್‌ಗಳನ್ನು ನೋಡಬಹುದಾಗಿದೆ. ಅಂದರೆ ವಾಟ್ಸಾಪ್ ಬಳಕೆದಾರರು ಹಾಕಿರುವ ಹೊಸ ಸ್ಟೇಟಸ್ ತೆರೆಯುವ ಅಗತ್ಯವಿಲ್ಲದೆ ಮೇಲಿನಿಂದಲೇ ಉತ್ತಮವಾಗಿ ನೋಡಬಹುದಾಗಿದೆ. ಸದ್ಯಕ್ಕೆ ನಾವು ಥಂಬ್‌ನೇಲ್‌ನಲ್ಲಿ ಸ್ಟೇಟಸ್ ಅಪ್ಡೇಟ್‌ಗಳ ಪೂರ್ವವೀಕ್ಷಣೆಗಳನ್ನು ಮಾತ್ರ ನೋಡುತ್ತೇವೆ ಅದು ಬಳಕೆದಾರರ ಪ್ರೊಫೈಲ್ ಚಿತ್ರದ ಗಾತ್ರದಂತೆಯೇ ಇರಲಿದೆ. ಹಾಗಾಗಿ ಸ್ಟೇಟಸ್ ತೆರೆಯದೆಯೇ ಅವರು ಏನು ಪೋಸ್ಟ್ ಮಾಡಿದ್ದಾರೆ ಎಂಬ ಕಲ್ಪನೆಯನ್ನು ಪಡೆಯುವುದು ತುಂಬಾ ಕಷ್ಟ. ಆದರೆ ಈ ಹೊಸ ವೈಶಿಷ್ಟ್ಯ ಸ್ಟೇಟಸ್ ತೆರೆಯದೆಯೇ ಪೋಸ್ಟ್ ನೋಡಲು ಸಹಕರಿಸಲಿದೆ.

ನೀವು ವಾಟ್ಸಾಪ್‌ನ ಈ ನೂತನ ಅಪ್ಡೇಟ್ ಪಡೆದುಕೊಂಡರೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ವ್ಯಕ್ತಿಗಳು ಏನು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಲು ನೀವು ಇನ್ನೊಬ್ಬರ ವಾಟ್ಸಾಪ್ ಸ್ಟೇಟಸ್ ತೆರೆಯುವ ಅಗತ್ಯ ಇರುವುದಿಲ್ಲ. ನೀವು ಸ್ಟೇಟಸ್ ನೋಡಲು ಆಸಕ್ತಿ ಹೊಂದಿದ್ದರೆ ಮಾತ್ರ ಈ ಅಪ್ಡೇಟ್ ಅನ್ನು ಪಡೆದುಕೊಳ್ಳಬಹುದಾಗಿದೆ ಒಂದು ವೇಳೆ ನೀವು ಬೇರೆ ಕಾರಣಕ್ಕೆ ವಾಟ್ಸಾಪ್ ಬಳಸುತ್ತಿದ್ದರೆ ಈ ಅಪ್ಡೇಟ್ ಅಗತ್ಯವಿರುವುದಿಲ್ಲ.
ತಮ್ಮ ಫೋನ್‌ಗಳಲ್ಲಿ ಸಾಕಷ್ಟು ಕೆಲಸಕ್ಕೆ ಸಂಬಂಧಿಸಿದ ಸಂಪರ್ಕಗಳನ್ನು ಉಳಿಸುವ ಮತ್ತು ವೃತ್ತಿಪರ ಸ್ವಭಾವ ಹೊಂದಿರುವವರಿಗೆ ಈ ಸ್ಟೇಟಸ್ ಅಪ್ಡೇಟ್ ಪಡೆಯುವುದು ಅನಾವಶ್ಯಕ. ನೀವು ಒಂದು ವೇಳೆ ವಾಟ್ಸಾಪ್ ಸ್ಟೇಟಸ್ ನೋಡಲು ಉತ್ಸುಕರಾಗಿದ್ದರೆ ಈ ಅಪ್ಡೇಟ್ ಬಳಸಬಹುದಾಗಿದೆ.
ಇತ್ತೀಚಿಗೆ ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್‌ಗಳಿಗೆ ಸಂಬಂಧಿಸಿದಂತೆ ಹಲವಾರು ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಕೇವಲ ಒಂದು ದಿನದ ಹಿಂದೆ ಬೀಟಾ ಪರೀಕ್ಷಕರು ಮ್ಯಾಕ್ ಸ್ಟೇಟಸ್‌ಗಳನ್ನು ಟ್ಯಾಬ್‌ನಿಂದಲೇ ಹಂಚಿಕೊಳ್ಳಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಅನ್ವೇಷಿಸಬಹುದು ಎಂದು ವರದಿಯಾಗಿದೆ.
WA ಬೀಟಾ ಸ್ಕ್ರೀನ್‌ಶಾಟ್ ಮಾಹಿತಿ ಪ್ರಕಾರ, ಈ ಅಪ್ಡೇಟ್ ಕೇವಲ ಬಳಕೆದಾರರ ಸ್ಟೇಟಸ್ ಅಪ್ಡೇಟ್ ಟ್ಯಾಬ್‌ಗೆ ಹೋಗಬಹುದು ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾಡಿದ ರೀತಿಯಲ್ಲಿಯೇ ಸಬ್ಜೆಕ್ಟ್ ಅಥವಾ ಫೋಟೋ ಸ್ಥಿತಿಯನ್ನು ಅವರ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಾಗುತ್ತಿದೆ.
ಹಿಂದೆ ಮ್ಯಾಕ್ ಅಪ್ಲಿಕೇಶನ್ ಬಳಕೆದಾರರಿಗೆ WhatsApp ಸ್ಟೇಟಸ್ ಪೋಸ್ಟ್ ಮಾಡುವ ಆಯ್ಕೆ ನೀಡಿರಲಿಲ್ಲ ಬದಲಾಗಿ ಸ್ಟೇಟಸ್‌ಗಳನ್ನು ವೀಕ್ಷಿಸಲು ಮಾತ್ರ ಅವಕಾಶ ಮಾಡಿಕೊಟ್ಟಿತು. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಡೆಸ್ಕ್‌ಟಾಪ್‌ನಿಂದ ನೇರವಾಗಿ ಅವರ ಸ್ಟೇಟಸ್ ಅಪ್ಡೇಟ್ ಮಾಡುವ ಸ್ವಾತಂತ್ರ್ಯ ನೀಡಿದೆ. ಇದರಿಂದ ಹೆಚ್ಚು ಸಮಯ ಕಂಪ್ಯೂಟರ್‌ಗಳ ಮುಂದೆ ಕಾಲ ಕಳೆಯುವವರಿಗೆ ಅನುಕೂಲಕರವಾಗಲಿದೆ.
ಬಳಕೆದಾರರು ಇನ್ನು ಮುಂದೆ ಡಿವೈಸ್ ಬದಲಾಯಿಸಬೇಕಾಗಿಲ್ಲ, ಅವರ ಒಟ್ಟಾರೆ ಅನುಭವವನ್ನು ಹೆಚ್ಚಿಸಲು ಬಳಕೆದಾರರು ತಮ್ಮ ಮೊಬೈಲ್ ಆನ್ ಮಾಡದೆಯೇ ಅಥವಾ ಇಂಟರ್ನೆಟ್‌ಗೆ ಸಂಪರ್ಕಿಸದೆಯೇ WhatsApp ಸ್ಟೇಟಸ್ ಅಪ್ಡೇಟ್ ಮಾಡಬಹುದಾಗಿದೆ. ಇದು ಸ್ಥಿರವಾದ ಬಹು ಸಾಧನದ ಅನುಭವ ನೀಡಲಿದೆ ಮತ್ತು ಇದೇ ಸೇಮ್ ಸಾಮರ್ಥ್ಯದ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರಲಿದೆ.


Click it and Unblock the Notifications








