ಶಿಯೋಮಿ ಮಿ11 ಸ್ಮಾರ್ಟ್‌ಫೋನ್‌ ಅನಾವರಣ!..2K WQHD ಅಮೋಲೆಡ್ ಡಿಸ್‌ಪ್ಲೇ ವಿಶೇಷ?

|

ಜನಪ್ರಿಯ ಶಿಯೋಮಿ ಕಂಪೆನಿ ತನ್ನ ಬಹುನಿರೀಕ್ಷಿತ ಶಿಯೋಮಿ ಮಿ 11 ಫೋನ್ ಅಧಿಕೃತವಾಗಿ ಅನಾವರಣಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಈ ತಿಂಗಳ ಆರಂಭದಲ್ಲಿ ಬಿಡುಗಡೆ ಆದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಈ ಪ್ರೊಸೆಸರ್‌ ಮುಂದಿನ ವರ್ಷದ ಆರಂಭದಲ್ಲಿ ಪ್ರೀಮಿಯಂ ಫೋನ್‌ಗಳ ಪಟ್ಟಿಗೆ ಶಕ್ತಿ ತುಂಬುವ ನಿರೀಕ್ಷೆಯಿದೆ. ಜೊತೆಗೆ Mi 11 ಶಿಯೋಮಿಯ ಅತ್ಯಾಧುನಿಕ ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ತನ್ನ ಹೊಸ ಮಿ 11 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು E4 ಲೈಟ್ ಎಮಿಟಿಂಗ್ ಮೆಟೀರಿಯಲ್‌ನಿಂದ ತಯಾರಿಸಲ್ಪಟ್ಟ ಮಿ-ಸೀರೀಸ್ ಫೋನ್‌ನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ನಾಲ್ಕು ಬದಿಗಳಲ್ಲಿ ಬಾಗಿದ ಅಂಚುಗಳನ್ನು ಹೊಂದಿದೆ ಮತ್ತು 2K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿ ಮಿ 11 ಸ್ಮಾರ್ಟ್‌ಫೋನ್‌ 1,440x3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.81-ಇಂಚಿನ 2K WQHD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್‌ ಅನ್ನು ಹೊಂದಿದೆ. 5000000: 1 ಕಾಂಟ್ರಾಸ್ಟ್ ಅನುಪಾತ ಮತ್ತು 515 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಪಂಚ್ ಹೋಲ್‌ ವಿನ್ಯಾಸವನ್ನು ಹೊಂದಿರುವ ಈ ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್‌ ಅನ್ನು ಸಹ ಒಳಗೊಂಡಿದೆ. ಇದು ಬಳಕೆಗೆ ಅನುಗುಣವಾಗಿ 30Hz ಗೆ ಇಳಿಯಬಹುದು. 480Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಹೊಂದಿದೆ. ಜೊತೆಗೆ ಎಚ್‌ಡಿಆರ್ 10 + ಮತ್ತು ಮೋಷನ್ ಎಸ್ಟಿಮೇಷನ್, ಮೋಷನ್ ಕಾಂಪೆನ್ಸೇಷನ್ ಅನ್ನು ಬೆಂಬಲಿಸುತ್ತದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಅನ್ನು ಬೆಂಬಲಿಸಲಿದೆ. ಹಾಗೇಯೇ 8GB RAM+128GB, 8GB RAM+256GB ಹಾಗೂ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಮಿ 11 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, 1.6 ಮೈಕ್ರಾನ್‌ಗಳ ಪಿಕ್ಸೆಲ್ ಗಾತ್ರದೊಂದಿಗೆ ಹೊಂದಿದೆ, ಜೊತೆಗೆ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ, ಇದು 123 ಡಿಗ್ರಿಗಳಷ್ಟು ಫೀಲ್ಡ್-ಆಫ್-ವ್ಯೂ (ಎಫ್ಒವಿ) ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಕಡಿಮೆ-ಬೆಳಕಿನ ವೀಡಿಯೊಗಳನ್ನು ಸೆರೆಹಿಡಿಯಲು ಶಿಯೋಮಿ ಸ್ವಾಮ್ಯದ ಈ ಫೀಚರ್ಸ್‌ ಅನ್ನು ಸಹ ಅಭಿವೃದ್ಧಿಪಡಿಸಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಸ್ಮಾರ್ಟ್‌ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿ ಸೆಟಪ್‌ ಅನ್ನು ಹೊಂದಿದೆ. ಇದು ಮಿ ಟರ್ಬೊಚಾರ್ಜ್ 55W ವೈರ್ಡ್ ಮತ್ತು 50W ವಾಯರ್‌ ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 10W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಬೆಂಬಲವೂ ಇದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ಮಿ 11 ಬೆಲೆ 8GB RAM ಮತ್ತು 128GB ಶೇಖರಣಾ ರೂಪಾಂತರಕ್ಕೆ CNY 3,999 (ಸುಮಾರು 45,000 ರೂ.) ಗೆ ನಿಗದಿಪಡಿಸಲಾಗಿದೆ. ಆದರೆ 8GB RAM + 256GB ಶೇಖರಣಾ ಮಾದರಿಯು CNY 4,299 (ಸುಮಾರು ರೂ. 48,300) ಮತ್ತು ಟಾಪ್- ಆಫ್-ದಿ-ಲೈನ್ 12GB RAM + 256GB ಶೇಖರಣಾ ಆಯ್ಕೆಯನ್ನು CNY 4,699 (ಸುಮಾರು ರೂ. 52,800).ಬೆಲೆಯನ್ನು ಹೊಂದಿದೆ. ಇದರ ಮಾರಾಟವನ್ನು ಜನವರಿ 1 ರಿಂದ ಯೋಜಿಸಲಾಗಿದೆ. ಇದು ಹರೈಸನ್ ಬ್ಲೂ, ಫ್ರಾಸ್ಟ್ ವೈಟ್ ಮತ್ತು ಮಿಡ್ನೈಟ್ ಗ್ರೇನಲ್ಲಿ ಆಂಟಿ-ಗ್ಲೇರ್ (ಎಜಿ) ಫ್ರಾಸ್ಟ್ ಗ್ಲಾಸ್ ಫಿನಿಶ್ನಲ್ಲಿ ಲಭ್ಯವಿರುತ್ತದೆ. ಭಾರತದಲ್ಲಿ 49,999 ರೂ ಗಳಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Xiaomi Mi 11 has now been officially unveiled as the company's newest flagship phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X