ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!

|

ಆಂಡ್ರಾಯ್ಡ್ ಒನ್‌ನಲ್ಲಿ ಚಾಲನೆಯಲ್ಲಿರುವ ಶಿಯೋಮಿ ಕಂಪನಿಯ ಇತ್ತೀಚಿನ ಫೋನ್ 'ಮಿ ಎ2' ವಿನ ಉತ್ತರಾಧಿಕಾರಿ ಸ್ಮಾರ್ಟ್‌ಪೋನ್ ಆಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಸ್ಪೇನ್‌ನಲ್ಲಿ ನಡೆದ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿಯೋಮಿ ತನ್ನ ಬಹುನಿರೀಕ್ಷಿತ 'ಮಿ ಎ3' ಸ್ಮಾರ್ಟ್‌ಫೋನನ್ನು ಅನಾವರಣಗೊಳಿಸಿ ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ.

ಶಿಯೋಮಿ 'ಮಿ ಎ2' ವಿನ ಉತ್ತರಾಧಿಕಾರಿಯಾಗಿ 'ಮಿ ಎ3' ಮಾರುಕಟ್ಟೆಗೆ ಎಂಟ್ರಿ!

ಹೌದು, ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹಾಗೂ 6.1 ಇಂಚಿನ ಡಿಸ್‌ಪ್ಲೇಯಂತಹ ಫೀಚರ್ಸ್ ಹೊಂದಿರುವ ಶಿಯೋಮಿ 'ಮಿ ಎ3' ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಈ ಪೋನಿನ ಬೆಲೆಯು ಸ್ಪೇನಿನಲ್ಲಿ € 250 ಗಳಿಂದ ಆರಂಭವಾಗಿದೆ. ಭಾರತದ ರೂಪಾಯಿಗಳಲ್ಲಿ ಇದರ ಅಂದಾಜು ಬೆಲೆ 19,300 ರೂ.ಗಳಾಗುತ್ತವೆ.

ಇನ್ನು 64 ಜಿಬಿ ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದ ಎರಡು ರೂಪಾಂತದಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಕ್ರಮವಾಗಿ € 250 (19,300 ರೂ.) ಹಾಗೂ € 280 (21,600 ರೂ.) ಬೆಲೆಗಳನ್ನು ಹೊಂದಿವೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಶಿಯೋಮಿ'ಮಿ ಎ3' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ 6.1-ಇಂಚಿನ ಎಚ್‌ಡಿ + (720x1560 ಪಿಕ್ಸೆಲ್‌ಗಳು) ಒಎಲ್‌ಇಡಿ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. 19.5: 9 ರ ಅನುಪಾತದೊಂದಿಗೆ ಬಂದಿರುವ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ರಕ್ಷಿತವಾಗಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಫೀಚರ್ ಹೊಂದಿರುವ ಈ ಫೋನ್ ವಾಟರ್‌ಡ್ರಾಪ್ ನೋಚ್ ವಿನ್ಯಾಸದಲ್ಲಿದೆ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಮೊದಲೇ ಹೇಳಿದಂತೆ, ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 'ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್' ಮೂಲಕ ರನ್ ಆಗಲಿದೆ. 4 ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಹೈಬ್ರಿಡ್ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಸಹಾಯದಿಂದ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಣೆ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ರಿಯರ್ ಕ್ಯಾಮೆರಾ

ರಿಯರ್ ಕ್ಯಾಮೆರಾ

ಶಿಯೋಮಿ ಮಿ ಎ3 ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದ್ದು, ಎಫ್ / 1.78 ಅಪರ್ಚರ್ ಸಾಮರ್ಥ್ಯದ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕಗಳನ್ನು ನೋಡಬಹುದು. ಇವುಗಳಿಂದ 2160 ಪಿ ವೀಡಿಯೊಗಳನ್ನು ಪಡೆಯಬಹುದು ಎಂದು ಕಂಪೆನಿ ಹೇಳಿದೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ ಎಫ್ / 2.0 ಅಪರ್ಚರ್ ಸಾಮರ್ಥ್ಯದ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫ್ರಂಟ್ ಕ್ಯಾಮೆರಾವು ಎಐ ಪೋರ್ಟ್ರೇಟ್ ಮೋಡ್, 3 ಡಿ ಬ್ಯೂಟಿ, ಫ್ರಂಟ್ ಪನೋರಮಾ, ಗೆಸ್ಚರ್ ಫೋಟೋ, ಫ್ರಂಟ್ ಎಚ್‌ಡಿಆರ್ ಮತ್ತು ಫ್ರಂಟ್ ಸ್ಕ್ರೀನ್ ಫಿಲ್ ಸೇರಿದಂತೆ ಹಲವು ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿದೆ.

 ಕ್ಯಾಮೆರಾ ತಂತ್ರಜ್ಞಾನ

ಕ್ಯಾಮೆರಾ ತಂತ್ರಜ್ಞಾನ

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನಿನಲ್ಲಿ 30 ಎಫ್‌ಪಿಎಸ್‌ನಲ್ಲಿ 2160 ಪಿ ವೀಡಿಯೊ ಅಥವಾ 120 ಎಫ್‌ಪಿಎಸ್ ವರೆಗೆ 1080 ಪಿ ವರೆಗೆ ರೆಕಾರ್ಡ್ ಮಾಡಬಹುದು. 32 ಎಂಪಿ ಸೆಲ್ಫಿ ಕ್ಯಾಮೆರಾದಲ್ಲಿ 30 ಎಫ್‌ಪಿಎಸ್‌ನಲ್ಲಿ 1080p ವರೆಗೆ ಶೂಟ್ ಮಾಡಬಹುದು. ಪನೋರಮಾ, 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಸ್ಲೊಮೋಷನ್ ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಶಿಯೋಮಿ ಮಿ ಎ3 ಸ್ಮಾರ್ಟ್‌ಫೋನ್ 4,030 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.ಇದು 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆಯಾದರೂ, ಫೋನ್ ಜೊತೆಗೆ 10 W ಚಾರ್ಜರ್ ಮಾತ್ರ ನೀಡಲಾಗಿದೆ. ಇನ್ನು 4ಜಿ ವೋಲ್ಟ್ ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಭಾರತದಲ್ಲಿ ಮಿ ಎ3 ಬರುವುದು ಯಾವಾಗ?

ಭಾರತದಲ್ಲಿ ಮಿ ಎ3 ಬರುವುದು ಯಾವಾಗ?

ಶಿಯೋಮಿ ಮಿ ಎ 3 ಸ್ಮಾರ್ಟ್‌ಫೋನ್ ಸ್ಪೇನ್‌ನಲ್ಲಿ ಇದೇ ಜುಲೈ 24 ರಿಂದ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಈ ಫೋನ್ ನಾಟ್ ಜಸ್ಟ್ ಬ್ಲೂ, ಮೋರ್ ದೆನ್ ವೈಟ್, ಮತ್ತು ಕೈಂಡ್ ಆಫ್ ಗ್ರೇ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈಗಷ್ಟೇ ಯುರೋಪಿಗೆ ಕಾಲಿಟ್ಟಿರುವ ಈ ಫೋನಿನ ಭಾರತದ ಲಭ್ಯತೆ ಮತ್ತು ಬೆಲೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
A successor to last year's Mi A2, the Mi A3 packs an octa-core Qualcomm Snapdragon 665 SoC with up to 6GB RAM and a triple rear camera setup sporting a 48-megapixel primary sensor. The Mi A3 also features a 32-megapixel selfie camera. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X