ಶಿಯೋಮಿ ಮಿ ಬ್ಯಾಂಡ್ 5 ಬಿಡುಗಡೆ!..ದೀರ್ಘ ಬಾಳಿಕೆ ಬ್ಯಾಟರಿ ವಿಶೇಷತೆ!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನ ಸಾಧಿಸಿದೆ. ಇದಲ್ಲದ ಇತರೆ ಸ್ಮಾರ್ಟ್‌ಪ್ರಾಡಕ್ಟ್‌ಗಳ ವಲಯದಲ್ಲೂ ತನ್ನದೇ ಆದ ಮಾರುಕಟ್ಟೆಯನ್ನ ಹೊಂದಿದೆ. ಸದ್ಯ ಈಗಾಗಲೇ ಹಲವು ಮಾದರಿಯ ಫಿಟ್ನೆಸ್‌ ಟ್ರಾಕರ್‌ಗಳ ಪರಿಚಯಿಸಿರುವ ಶಿಯೋಮಿ ಇಈಗ ಮತ್ತೊಂದು ಹೊಸ ಮಾದರಿಯ ಫಿಟ್‌ನೆಸ್ ಟ್ರ್ಯಾಕರ್ ಅನ್ನು ಬಿಡುಗಡೆ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಫಿಟ್‌ನೆಸ್ ಟ್ರ್ಯಾಕರ್ ಮಿ ಬ್ಯಾಂಡ್ 5 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಇದೀಗ ಬಿಡುಗಡೆ ಆಗಿರುವ ಈ ಹೊಸ ಸ್ಮಾರ್ಟ್ ಬ್ಯಾಂಡ್ ಸ್ಟ್ಯಾಂಡರ್ಡ್ ಆವೃತ್ತಿ ಮತ್ತು NFC ಆವೃತ್ತಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಎಂಟು ವರ್ಣರಂಜಿತ ಪಟ್ಟಿಯ ಆಯ್ಕೆಗಳೊಂದಿಗೆ ಲಬ್ಯವಾಗಲಿದ್ದು, ಉತ್ತಮ ವಿನ್ಯಾಸವನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ವಿನ್ಯಾಸ ಹಾಗೂ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಶಿಯೋಮಿ

ಸದ್ಯ ಶಿಯೋಮಿ ಬಿಡುಗಡೆ ಮಾಡಿರುವ ಶಿಯೋಮಿ ಮಿ ಬ್ಯಾಂಡ್5 1.1-ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95-ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ. ಇದಲ್ಲದೆ ಈ ಫಿಟ್‌ನೆಸ್ ಟ್ರ್ಯಾಕರ್ ಈಗ 11 ಸ್ಪೋರ್ಟ್ ಮೋಡ್‌ಗಳನ್ನು ಹೊಂದಿದ್ದ, ಜೊತೆಗೆ ಪರ್ಸನಲ್ ಆಕ್ಟಿವಿಟಿ ಇಂಟೆಲಿಜೆನ್ಸ್ ಚಟುವಟಿಕೆ ಸೂಚ್ಯಂಕವನ್ನು ನೀಡಲಿದೆ.

ಸ್ಮಾರ್ಟ್‌ಬ್ಯಾಂಡ್‌

ಅಲ್ಲದೆ ಈ ಸ್ಮಾರ್ಟ್‌ಬ್ಯಾಂಡ್‌ ಬಳಕೆದಾರರು ತಮ್ಮ ಫಿಟ್‌ನೆಸ್ ಚಟುವಟಿಕೆಯನ್ನು ಇನ್ನಷ್ಟು ಉತ್ತಮವಾಗಿ ಟ್ರ್ಯಾಕ್ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಮಾದರಿಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು, ಮಿ ಬ್ಯಾಂಡ್ 5 ಸುಧಾರಿತ ನಿದ್ರೆಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ನಿದ್ರೆಯ ಮೇಲ್ವಿಚಾರಣೆಯ ನಿಖರತೆಯ ವೈಶಿಷ್ಟ್ಯವನ್ನು 40 ಪ್ರತಿಶತದಷ್ಟು ಸುಧಾರಿಸಲಾಗಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಮಿ ಬ್ಯಾಂಡ್

ಇದಲ್ಲದೆ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಹಾರ್ಟ್‌ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ. ಜೊತೆಗೆ ಈ ಸ್ಮಾರ್ಟ್‌ಬ್ಯಾಂಡ್‌ ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮಹಿಳಾ ಬಳಕೆದಾರರು ತಮ್ಮ ದೈಹಿಕ ಆರೋಗ್ಯ ಕ್ರಮದೊಂದಿಗೆ ಟ್ರ್ಯಾಕ್ ಮಾಡಬಹುದು. ಜೊತೆಗೆ ಬಳಕೆದಾರರು ಸೊಶೀಯಲ್‌ ಮೀಡಿಯಾ ಆಲರ್ಟ್‌, ಮ್ಯೂಸಿಕ್‌ ಕಂಟ್ರೋಲ್‌, ಇನ್‌ಕಮಿಂಗ್‌ ಕರೆಗಳು, ಪಠ್ಯ, ವೆದರ್‌ ಆಪ್ಡೆಟ್‌, ಮತ್ತು ಇತರೆ ಮಾದರಿಯ ಅನುಕೂಲಗಳನ್ನ ಸಹ ಈ ಬ್ಯಾಂಡ್‌ನಲ್ಲಿ ಪಡೆಯಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಫೋಟೋ ಕ್ಲಿಕ್ ಮಾಡಲು ಅನುಮತಿಸುವ ಹೊಸ ರಿಮೋಟ್ ಕಂಟ್ರೋಲ್ ಕ್ಯಾಮೆರಾ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ.

ಸ್ಮಾರ್ಟ್‌ಬ್ಯಾಂಡ್‌

ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬಳಕೆದಾರರು ಪಟ್ಟಿಗಳನ್ನು ತೆಗೆಯದೆ ಈ ಡಿವೈಸ್‌ ಅನ್ನು ಚಾರ್ಜ್ ಮಾಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಮಿ ಬ್ಯಾಂಡ್ 5 ರ NFC ರೂಪಾಂತರವು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಇನ್ನು ಸ್ಟ್ಯಾಂಡರ್ಡ್ ಆವೃತ್ತಿಯು ಒಂದೇ ಚಾರ್ಜ್‌ನಲ್ಲಿ 20 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಮಿ ಬ್ಯಾಂಡ್ 5 ರ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ CNY 189 (ಸುಮಾರು 2,000 ರೂ.), ಫಿಟ್‌ನೆಸ್ ಟ್ರ್ಯಾಕರ್‌ನ NFC ರೂಪಾಂತರವು CNY 229 (ಸರಿಸುಮಾರು 2,500 ರೂ.)ಬೆಲೆಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಕಪ್ಪು, ನೀಲಿ, ಗುಲಾಬಿ, ಕಿತ್ತಳೆ, ನೇರಳೆ, ಹಳದಿ ಮತ್ತು ಹಸಿರು ಪಟ್ಟಿಯ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ ಜೂನ್ 18 ರಿಂದ ಮಾರಾಟವಾಗಲಿದೆ.

Best Mobiles in India

English summary
Mi Band 5, the next-generation fitness tracker by Xiaomi, has been launched in China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X