ಇಂದು ಲಾಂಚ್ ಆಗುತ್ತಿವೆ ಶಿಯೋಮಿ ಮಿ ಸಿಸಿ 9 ಪ್ರೊ, ಅಕಾ ಮಿ ವಾಚ್ ಮತ್ತು ಮಿ ಟಿವಿ 5!

|

ಶಿಯೋಮಿ ತನ್ನ ಮಿ ಸಿಸಿ 9 ಪ್ರೊ ಸ್ಮಾರ್ಟ್‌ಫೋನ್, ಶಿಯೋಮಿ ವಾಚ್ ಮತ್ತು ಮಿ ಟಿವಿ 5 ಸ್ಮಾರ್ಟ್‌ಟಿವಿಗಳನ್ನು ಚೀನಾದಲ್ಲಿಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಿರುವ ಕಂಪನಿಯು ತನ್ನ ಅಧಿಕೃತ ವೀಬೊ ಪುಟ ಮತ್ತು ಮಿ.ಕಾಮ್ ಚೀನಾ ಸೈಟ್‌ನಲ್ಲಿ ಬಿಡುಗಡೆಯು ಲೈವ್‌ಸ್ಟ್ರೀಮ್ ನೀಡುತ್ತಿದ್ದು, 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಮಿ ಸಿಸಿ 9 ಪ್ರೊ ಈ ಬಿಡುಗಡೆಯ ದೊಡ್ಡ ಹೈಲೈಟ್ ಆದೆ. ಇದೇ ಫೋನ್ ಇತರೆ ಮಾರುಕಟ್ಟೆಗಳಲ್ಲಿ ಮಿ ನೋಟ್ 10 ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಶೀಯೋಮಿ

ಈಗಾಗಲೇ ಶೀಯೋಮಿಯ ಮಿ ಸಿಸಿ 9 ಪ್ರೊ ಫೋನ್ ಬಗೆಗಿನ ಮಾಹಿತಿಗಳು ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿವೆ. ಸ್ನಾಪ್‌ಡ್ರಾಗನ್ 730ಜಿ ಪ್ರೊಸೆಸರ್, 5260mAh ಬ್ಯಾಟರಿಯು 30W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಫೋನ್ ಬರುತ್ತಿರುವುದನ್ನು ಕಂಪೆನಿಯೇ ಖಚಿತಪಡಿಸಿದೆ TENAA ಪಟ್ಟಿಯಲ್ಲಿ ಈ ಫೋನ್ 6.47-ಇಂಚಿನ ಪೂರ್ಣ-ಎಚ್‌ಡಿ + (1080 x 2340 ಪಿಕ್ಸೆಲ್‌ಗಳು) OLED ಬಾಗಿದ ಅಂಚಿನ ಪ್ರದರ್ಶನವನ್ನು ಹೊಂದಿರಬಹುದು, 12GB RAM ವರೆಗೆ ಪ್ಯಾಕ್ ಮಾಡಬಹುದು ಮತ್ತು 256GB ವರೆಗೆ ಸಂಗ್ರಹಿಸಬಹುದು ಎಂದು ಸೂಚಿಸುತ್ತದೆ.

'ಅಕಾ ಮಿ' ವಾಚ್

ಇನ್ನು ಇದೇ ಕಾರ್ಯಕ್ರಮದಲ್ಲಿ ಶಿಯೋಮಿಯ 'ಅಕಾ ಮಿ' ವಾಚ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತಿದಿದೆ. ಶಿಯೋಮಿ ವಾಚ್‌ನಲ್ಲಿ ಜಿಪಿಎಸ್, ಎನ್‌ಎಫ್‌ಸಿ ಬೆಂಬಲ, ವೈ-ಫೈ ಸಂಪರ್ಕ, ದೊಡ್ಡ ಬ್ಯಾಟರಿ ಮತ್ತು ಸ್ಪೀಕರ್ ಕೂಡ ಇರುತ್ತದೆ. ಆನ್‌ಬೋರ್ಡ್ SoC ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ವೇರ್ 3100 ಆಗಿದೆ, ಮತ್ತು ಇದು ಕಸ್ಟಮ್ MIUI ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಪಲ್ ವಾಚ್‌ನಿಂದ ಹೆಚ್ಚು ಪ್ರೇರಿತವಾಗಿರುವಂತೆ ಈ ವಾಚ್ ಬರುವ ನಿರೀಕ್ಷೆಯಿದ್ದು, ಈ ವಾಚ್ ಮ್ಯಾಪಿಂಗ್ ನ್ಯಾವಿಗೇಷನ್ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ.

'ಅಕಾ ಮಿ' ವಾಚ್

ಈ 'ಅಕಾ ಮಿ' ವಾಚ್ ಬಳಕೆದಾರರಿಗೆ ಕರೆ ಮಾಡಲು ಮತ್ತು ಅವರ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸಲು ಅವಕಾಶ ನೀಡುತ್ತದೆ. ಲೀಕ್ಸ್ ನೀಲಮಣಿಯಿಂದ ಮಾಡಿದ ಚದರ ಆಕಾರದ 3D ಬಾಗಿದ ಗಾಜಿನ ಪ್ರದರ್ಶನವನ್ನು ಈ ವಾಚ್ ಸೂಚಿಸುತ್ತದೆ. ಬದಿಯಲ್ಲಿ ವೃತ್ತಾಕಾರದ ಡಿಜಿಟಲ್ ಕಿರೀಟದಂತಹ ವಿನ್ಯಾಸವಿದೆ. ಇದೇ ಈವೆಂಟ್‌ನಲ್ಲಿ ಬಿಡುಗಡೆಯಾಗುತ್ತಿರುವ ಶಿಯೋಮಿ ಮಿ ಟಿವಿ 5 ಸರಣಿ ಮತ್ತು ಶಿಯೋಮಿ ಮಿ ಸಿಸಿ 9 ಪ್ರೊ ಸ್ಮಾರ್ಟ್‌ಫೋನ್‌ಗಳ ಜೊತೆಗೆ 'ಅಕಾ ಮಿ' ವಾಚ್ ಉಚಿತವಾಗಿ ದೊರೆಯಬಹುದು ಎಂದು ಹೇಳಲಾಗಿದೆ.

ಮಿ ಟಿವಿ 5 ಸರಣಿ

ಕೊನೆಯದಾಗಿ, ಇಂದು ನಡೆಯುವ ಈವೆಂಟ್‌ನಲ್ಲಿ ಶಿಯೋಮಿ ಮಿ ಟಿವಿ 5 ಸರಣಿ ಕೂಡ ಬಿಡುಗಡೆಗೆ ಸಜ್ಜಾಗಿದೆ. ಹೊಸ ಉತ್ಪನ್ನವು 4 ಕೆ ಕ್ವಾಂಟಮ್ ಡಾಟ್ ಪರದೆಯನ್ನು 108 ಪ್ರತಿಶತ ಎನ್‌ಟಿಎಸ್‌ಸಿ, ಎಚ್‌ಡಿಆರ್ 10 + ಬೆಂಬಲ, ಮತ್ತು ಎಂಇಎಂಸಿ ಚಲನೆಯ ಪರಿಹಾರ ಬೆಂಬಲದೊಂದಿಗೆ ಬರಲಿದೆ. ಹೊಸ ಟಿವಿ ಶ್ರೇಣಿಯು ನಾಲ್ಕು-ಘಟಕಗಳ ಸ್ಪೀಕರ್‌ನೊಂದಿಗೆ ಬರಲಿದೆ ಮತ್ತು ವಿವಿಧ ಡಾಲ್ಬಿ ಮತ್ತು ಡಿಟಿಎಸ್ ಆಡಿಯೊ ಸ್ವರೂಪಗಳನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆಮಿ ಟಿವಿ 4 ಗಿಂತ 47 ಪ್ರತಿಶತದಷ್ಟು ತೆಳ್ಳನೆಯ ಸ್ಲಿಮ್ಮರ್ ಫ್ರೇಮ್‌ ಇರಲಿದೆ.!

Most Read Articles
Best Mobiles in India

English summary
Xiaomi is all set to launch the Mi CC9 Pro phone in China today. The phone's big highlight is its penta-lens camera setup at the back that has a 108-megapixel primary shooter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more