ಆಕರ್ಷಕ ಲುಕ್‌ನಲ್ಲಿ ಮಿ ಸ್ಮಾರ್ಟ್ ಬ್ಯಾಂಡ್ 5 ಬಿಡುಗಡೆ!
ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಶಿಯೋಮಿ, ಫಿಟ್ನೆಸ್ ಬ್ಯಾಂಡ್ ವಲಯದಲ್ಲೂ ತನ್ನ ಸ್ಥಾನವಚನ್ನ ಭದ್ರ ಪಡಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಫಿಟ್ನೆಸ್‌ಬ್ಯಾಂಡ್‌ಗಳನ್ನ ಪರಿಚಯಿಸಿರುವ ಶಿಯೋಮಿ ಸಂಸ್ಥೆ ತನ್ನ ಹೊಸ ಮಿ ಸ್ಮಾರ್ಟ್ ಬ್ಯಾಂಡ್ 5 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 1.1-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇ ಹೊಂದಿದ್ದು, ವಿವಿಧ ಬಣ್ಣ ಆಯ್ಕೆಗಳಲ್ಲಿ ಲಬ್ಯವಾಗಲಿದೆ. ಇನ್ನು ಈ ಮಿ ಸ್ಮಾರ್ಟ್ ಬ್ಯಾಂಡ್ 5 ಯೋಗ, Rowing machine ಮತ್ತು ಉಚಿತ ವ್ಯಾಯಾಮ ಸೇರಿದಂತೆ 11 ಮಾದರಿಯ professional sports ವಿಧಾನಗಳನ್ನ ಒಳಗೊಂಡಿದೆ.

ಹೌದು, ಶಿಯೋಮಿ ತನ್ನ ಹೊಸ ಮಿ ಸ್ಮಾರ್ಟ್ ಬ್ಯಾಂಡ್ 5 ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಫಿಟ್ನೆಸ್ ಆಧಾರಿತ ಬ್ಯಾಂಡ್‌ಗಳಿಗೆ ಉತ್ತಮ ಬೇಡಿಕೆ ಇದ್ದು, ಶಿಯೋಮಿಯ ಪಿಟ್ನೆಸ್ ಬ್ಯಾಂಡ್ 5 ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇನ್ನು ಈ ಬ್ಯಾಂಡ್ ಫಿಟ್‌ನೆಸ್ ಮತ್ತು ಹಾರ್ಟ್‌ರೇಟ್ ಮಾನಿಟರಿಂಗ್ , ಸ್ಲಿಪ್ ಟ್ರ್ಯಾಕಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್, ಒತ್ತಡ ಮೇಲ್ವಿಚಾರಣೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಮಿ ಸ್ಮಾರ್ಟ್ ಬ್ಯಾಂಡ್ 5 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಸ್ಮಾರ್ಟ್ ಬ್ಯಾಂಡ್ 5 ವಿಶೇಷತೆ
ಮಿ ಸ್ಮಾರ್ಟ್ ಬ್ಯಾಂಡ್ 5 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಮಿ ಸ್ಮಾರ್ಟ್ ಬ್ಯಾಂಡ್ 4 ಗಿಂತ ಸುಮಾರು 20% ಹೆಚ್ಚಿನ Display areaವನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಹೊಸ ಫಿಟ್‌ನೆಸ್ ಬ್ಯಾಂಡ್ ನಿಯಮಿತ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ಪವರ್ ಸೇವ್ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಎರಡು ಗಂಟೆಗಳಿಂತ ಕಡಿಮೆ ಅವಧಿಯ ಫುಲ್ ಚಾರ್ಜಿಂಗ್ ಟೈಂ ಅನ್ನು ಹೊಂದಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5 ಫೀಚರ್ಸ್
ಮಿ ಸ್ಮಾರ್ಟ್ ಬ್ಯಾಂಡ್ 5 ನಲ್ಲಿ ಔಟ್‌ಡೋರ್ ರೇಸ್, ವಾಕಿಂಗ್, ರೈಡಿಂಗ್ ಇನ್‌ಡೋರ್ ರನ್ನಿಂಗ್, ಇನ್‌ಡೋರ್ ಸ್ವಿಮ್ಮಿಂಗ್, free exercise, ಯೋಗ, rowing machine, ಇನ್‌ಡೋರ್ ರೈಡಿಂಗ್, elliptical machine, ಮತ್ತು ರೂಪ್ ಸ್ಕಿಪ್ಪಿಂಗ್, ಸೇರಿದಂತೆ ಸುಮಾರು 11 ವೃತ್ತಿಪರ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಅಲ್ಲದೆ ಹೆಲ್ತ್ ಮತ್ತು ಫಿಟ್ನೆಸ್ ಫೀಚರ್ಸ್‌ಗಳಿಗೆ ಸಂಬಂಧಿಸಿದಂತೆ 24x7 ಹೃದಯ ಬಡಿತ ಮೇಲ್ವಿಚಾರಣೆ, ವಿಶ್ರಾಂತಿ ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಗಾಡ ನಿದ್ರೆ, ಲಘು ನಿದ್ರೆ, ಒತ್ತಡ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಮತ್ತು ಗುರಿ ನಿರ್ಧಾರದಂತಹ ಫಿಚರ್ಸ್‌ಗಳನ್ನ ಹೊಂದಿದೆ. ಅಲ್ಲದೆ ಇದು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್ ಮಾಡುವ ವಿಶೇಷತೆಯನ್ನು ಹೊಂದಿದೆ.

ಇನ್ನು ಈ ಬ್ಯಾಂಡ್‌ನಲ್ಲಿ ಆಪ್ಡೇಟ್ ಮಾಡಲಾದ ಪಿಪಿಜಿ ಬಯೋ ಸೆನ್ಸಾರ್ ಅನ್ನು ಹೊಂದಿದೆ. ಇದು 50% ಹೆಚ್ಚು ನಿಖರವಾದ ಹೃದಯ ಬಡಿತ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಿದೆ ಎಂದು ಶಿಯೋಮಿ ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಮಿ ಸ್ಮಾರ್ಟ್ ಬ್ಯಾಂಡ್ 5 ಪರ್ಸನಲ್ ಆಕ್ಟಿವಿಟಿ ಇಂಟೆಲಿಜೆನ್ಸ್ ಅನ್ನು ಸಹ ನೀಡಲಿದೆ. ಇದು ನೀವು ಆರೋಗ್ಯವಾಗಿರಲು ಎಷ್ಟು ಸಕ್ರಿಯರಾಗಿರಬೇಕು ಎಂದು ತಿಳಿಯಲು ಅನುವು ಮಾಡಿಕೊಡುತ್ತದೆ. ವಯಸ್ಸು ಮತ್ತು ಹಾಟ್‌ಬೀಟ್ ಮತ್ತು ಇತರ ಪ್ರಮುಖ ಡೇಟಾ ಬಿಂದುಗಳನ್ನು ಬಳಸಿಕೊಂಡು ಇದನ್ನು ಲೆಕ್ಕಹಾಕಲಾಗುತ್ತದೆ.

ಸದ್ಯ ಮಿ ಸ್ಮಾರ್ಟ್ ಬ್ಯಾಂಡ್ 5 ಭಾರತದಲ್ಲಿ 2,499 ರೂ. ಬೆಲೆಯನ್ನು ಹೊಂದಿದೆ. ಇದು ಕಪ್ಪು, ನೇವಿ ಬ್ಲೂ, ಟೀಲ್, ಪರ್ಪಲ್ ಮತ್ತು ಆರೆಂಜ್ ಸ್ಟ್ರಾಪ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಈ ಫಿಟ್‌ನೆಸ್ ಬ್ಯಾಂಡ್ ಅಕ್ಟೋಬರ್ 1 ರಿಂದ Mi.com ಮತ್ತು Amazon.in ನಲ್ಲಿ ಲಭ್ಯವಿರುತ್ತದೆ.


Click it and Unblock the Notifications