ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿಯ ಮಿ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ಸಂಸ್ಥೆ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ ಸ್ಪೀಕರ್‌‌ ಪ್ರಾಡಕ್ಟ್‌ಗಳಲ್ಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ ಸ್ಪೀಕರ್‌ಗಳನ್ನ ಪರಿಚಯಿಸಇರುವ ಶಿಯೋಮಿ ಇದೀಗ ಭಾರತದಲ್ಲಿ ತನ್ನ ಹೊಸ ಮಿ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ ಸ್ಪೀಕರ್ ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಹೊಂದಿದೆ ಮತ್ತು Two far-field microphones ಅನ್ನು ಒಳಗೊಂಡಿದೆ. ಅಲ್ಲದೆ ಅಮೆಜಾನ್ ಎಕೋ ಸ್ಪೀಕರ್‌ಗಳಲ್ಲಿ ಲಭ್ಯವಿರುವ ಲೈಟ್ ರಿಂಗ್‌ನಂತೆಯೇ ಕಾಣುವ ವಾಯ್ಸ್‌ ಲೈಟ್‌ ಅನ್ನು ಸಹ ಹೊಂದಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ತನ್ನ ಮಿ ಸ್ಮಾರ್ಟ್ ಸ್ಪೀಕರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಮೆಟಲ್ ಮೆಶ್ ವಿನ್ಯಾಸವನ್ನು ಹೊಂದಿದ್ದು, ಪ್ರೀಮಿಯಂ ಲುಕ್ ಜೊತೆಗೆ ಉತ್ತಮ ಸೌಂಡ್‌ ಸಿಸ್ಟಂ ಅನುಭವವನ್ನು ಸಹ ಒಳಗೊಂಡಿದೆ ಎಂದು ಕಂಪನಿ ಹೇಳಿದೆ. ಇನ್ನು ಶಿಯೋಮಿ ಸಂಸ್ಥೆ ಭಾರತದಲ್ಲಿ ಮಿ ಸ್ಮಾರ್ಟ್ ಸ್ಪೀಕರ್ ಬಿಡುಗಡೆ ಮಾಡುವ ಮೂಲಕ ಗೂಗಲ್ ಹೋಮ್ ಮಿನಿ ಮತ್ತು ಅಮೆಜಾನ್ ಎಕೋ ಡಾಟ್ ಸ್ಪೀಕರ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗ್ತಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ಸ್ಪೀಕರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪೀಕರ್

ಮಿ ಸ್ಮಾರ್ಟ್ ಸ್ಪೀಕರ್ 0.7mm-ತೆಳುವಾದ ಮೆಟಲ್ ಮೆಶ್‌ನ ಮೇಲೆ ಮ್ಯಾಟ್ ಫಿನಿಶ್ ಅನ್ನು ಹೊಂದಿದೆ. ಇದು ಪ್ರೀಮಿಯಂ ಲುಕ್‌ ಮತ್ತು ಫಿಲ್‌ ಅನ್ನು ನೀಡಲಿದೆ. ಜೊತೆಗೆ ಉತ್ತಮ sound experience ನೀಡಲು ಜಾಲರಿಯ ವಿನ್ಯಾಸವು ಸಹಾಯ ಮಾಡಲಿದೆ. ಇದಲ್ಲದೆ ಸ್ಪೀಕರ್ ಡಿಟಿಎಸ್ ವಾಯ್ಸ್‌ ಜೊತೆಗೆ ಟ್ಯೂನ್ ಮಾಡಲಾದ 12W 2.5-ಇಂಚಿನ ಫ್ರಂಟ್-ಫೈರಿಂಗ್ ಆಡಿಯೊ ಡ್ರೈವರ್ ಅನ್ನು ಹೊಂದಿದೆ. ಅಲ್ಲದೆ ವಾಲ್ಯೂಮ್ ಮಟ್ಟವನ್ನು ಸರಿಹೊಂದಿಸಲು, ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಪ್ಲೇ ಮಾಡಲು ಸ್ಟಾಪ್‌ ಮಾಡಲು ಮತ್ತು ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಮ್ಯೂಟ್ ಮಾಡಲು ಟಚ್ ಪ್ಯಾನಲ್ ಅನ್ನು ಹೊಂದಿದೆ.

ಆಡಿಯೋ

ಇನ್ನು ಆಡಿಯೋ ಸಿಗ್ನಲ್‌ಗಳನ್ನು ನಿಖರವಾಗಿ ಡಿಕೋಡ್ ಮಾಡಲು ಟೆಕ್ಸಾಸ್ ಇನ್ಸ್ಟ್ರುಮೆಂಟ್ ತಯಾರಿಸಿದ ಹೈ-ಫೈ ಆಡಿಯೊ ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಸ್ಪೀಕರ್ ವೈ-ಫೈ ಮತ್ತು ಬ್ಲೂಟೂತ್ ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ ಬ್ಲೂಟೂತ್ ಮೂಲಕ ಎರಡು ಮಿ ಸ್ಮಾರ್ಟ್ ಸ್ಪೀಕರ್ ಯೂನಿಟ್‌ಗಳನ್ನು ಒಟ್ಟಿಗೆ ಸಂಪರ್ಕಿಸುವ ಮೂಲಕ ನೀವು ಸ್ಟಿರಿಯೊ ವಾಯ್ಸ್‌ ಅನುಭವವನ್ನು ಸಹ ಪಡೆಯಬಹುದು. ಅಲ್ಲದೆ ಗೂಗಲ್ ಅಸಿಸ್ಟೆಂಟ್‌ ಅನ್ನು ಗೂಗಲ್ ಹೋಮ್ ಅಪ್ಲಿಕೇಶನ್‌ಗೆ ತರುತ್ತದೆ. ಇದು ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಹೊಂದಿರುವ ಎಲ್ಲಾ ಸಂಪರ್ಕಿತ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಇದಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ Google ಹೋಮ್ ಅಪ್ಲಿಕೇಶನ್ ಬಳಸಿ ನೀವು Multi-room setup ಅನ್ನು ಸಹ ಕ್ರಿಯೆಟ್‌ ಮಾಡಬಹುದಾಗಿದೆ.

ಸ್ಮಾರ್ಟ್ ಸ್ಪೀಕರ್

ಸದ್ಯ ಮಿ ಸ್ಮಾರ್ಟ್ ಸ್ಪೀಕರ್ ಭಾರತದಲ್ಲಿ 3,499 ರೂ. ಬೆಲೆಯನ್ನು ಹೊಂದಿದೆ. ಇದು ಅಕ್ಟೋಬರ್ 1ರಿಂದ ಫ್ಲಿಪ್‌ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Mi Smart Speaker is priced at Rs. 3,499 and will be available for purchase starting October 1.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X