ಶಿಯೋಮಿ 'ಮಿ ಸೂಪರ್ ಬಾಸ್' ವೈರ್‌ಲೆಸ್ ಹೆಡ್‌ಫೋನ್‌ ಬೆಲೆ ಬಹಿರಂಗ!

|

ಶಿಯೋಮಿ ಕಳೆದ ವಾರ ಘೋಷಿಸಿದಂತೆ ಅಮೆಜಾನ್ ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಜುಲೈ 15 ರಿಂದ ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳು ಭಾರತದಲ್ಲಿ ಮಾರಾಟಕ್ಕೆ ಬಂದಿದೆ. ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳು ಈಗ ಅಮೆಜಾನ್ ಇಂಡಿಯಾ ಮತ್ತು ಮಿ.ಕಾಮ್ ಆನ್‌ಲೈನ್ ಮಳಿಗೆಗಳಲ್ಲಿ ಕೇವಲ 1,799 ರೂ. ಗಳಿಗೆ ಖರೀದಿಸಲು ಲಭ್ಯವಿದೆ.

ಶಿಯೋಮಿ 'ಮಿ ಸೂಪರ್ ಬಾಸ್' ವೈರ್‌ಲೆಸ್ ಹೆಡ್‌ಫೋನ್‌ ಬೆಲೆ ಬಹಿರಂಗ!

ಹೌದು, ಈ ಮೊದಲೇ ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದರೂ ಸಹ ಇದರ ಬೆಲೆಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಅಮೆಜಾನ್ ಪ್ರೈಮ್ ಡೇ ಮಾರಾಟ ಪ್ರಾರಂಭವಾದ ನಂತರ ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳ ಬೆಲೆ ಬಹಿರಂಗವಾಗಿದೆ. ಮಾರುಕಟ್ಟೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಬೆಲೆಗೆ ಹೆಡ್‌ಫೋನ್ ಬಿಡುಗಡೆಯಾಗಿದೆ.

ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಕಪ್ಪು ಮತ್ತು ಕೆಂಪು ಮತ್ತು ಕಪ್ಪು ಮತ್ತು ಚಿನ್ನ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಉತ್ಪನ್ನದ ಎಂಆರ್‌ಪಿಯನ್ನು ಮಿ.ಕಾಮ್ ಮತ್ತು ಅಮೆಜಾನ್ ಇಂಡಿಯಾ ಎರಡರಲ್ಲೂ 2,199 ರೂ ಎಂದು ಪಟ್ಟಿ ಮಾಡಲಾಗಿದೆ. ಆದರೆ, ಇದು ಪ್ರಸ್ತುತ 1,799 ರೂ.ಗಳಿಗೆ 18% ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ.

ಶಿಯೋಮಿ 'ಮಿ ಸೂಪರ್ ಬಾಸ್' ವೈರ್‌ಲೆಸ್ ಹೆಡ್‌ಫೋನ್‌ ಬೆಲೆ ಬಹಿರಂಗ!

ಹೆಸರೇ ಸೂಚಿಸುವಂತೆ, 40 ಎಂಎಂ ಡೈನಾಮಿಕ್ ಡ್ರೈವರ್‌ನೊಂದಿಗೆ ಬಂದಿರುವ ಈ ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ ಬಾಸ್ ಪ್ರಿಯರನ್ನು ಗುರಿಯಾಗಿರಿಸಿಕೊಂಡಿವೆ. ಬ್ಲೂಟೂತ್ 5.0 ಬೆಂಬಲ, ಧ್ವನಿ ನಿಯಂತ್ರಣ ವೈಶಿಷ್ಟ್ಯವನ್ನು ಹೊಂದಿರುವ ಶಿಯೋಮಿ ಕಂಪನಿಯು ಈ ಉತ್ಪನ್ನವು 20 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವುದು ಸಂಗೀತ ಪ್ರಿಯರಿಗೆ ಸಿಹಿಸುದ್ದಿ

'ಪ್ರೈಮ್ ಡೇ' ಬೆಸ್ಟ್ ಡೀಲ್!..ಅತ್ಯಂತ ಕಡಿಮೆ ಬೆಲೆಗೆ 'ಒನ್‌ಪ್ಲಸ್ 6ಟಿ'!'ಪ್ರೈಮ್ ಡೇ' ಬೆಸ್ಟ್ ಡೀಲ್!..ಅತ್ಯಂತ ಕಡಿಮೆ ಬೆಲೆಗೆ 'ಒನ್‌ಪ್ಲಸ್ 6ಟಿ'!

ಇನ್ನು ಈ ಮಿ ಸೂಪರ್ ಬಾಸ್ ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ವೈರ್ಡ್ ಮತ್ತು ವೈರ್‌ಲೆಸ್ ಆಗಿ ಬಳಸಬಹುದಾಗಿದ್ದು, ಇದು ಶಿಯೋಮಿ ಫೋನ್‌ಗಳಲ್ಲದೆ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುತ್ತದೆ. ಹೆಡ್‌ಫೋನ್‌ಗಳ ತೂಕ 150 ಗ್ರಾಂ ಇದ್ದು, ಈ ಹೆಡ್‌ಫೋನ್‌ಗಳ ಬ್ಲೂಟೂತ್ ಶ್ರೇಣಿ 10 ಮೀ ಮತ್ತು ಅವುಗಳನ್ನು ಯುಎಸ್‌ಬಿ ಪೋರ್ಟ್ ಬಳಸಿ ಚಾರ್ಜ್ ಮಾಡಬಹುದಾಗಿದೆ.

ಒಂದು ಕಾಲದ ದಿಗ್ಗಜ ಕಂಪೆನಿ 'ಯಾಹೂ'ವಿನ ಇಂದಿನ ಕರುಣಾಜನಕ ಕಥೆ!ಒಂದು ಕಾಲದ ದಿಗ್ಗಜ ಕಂಪೆನಿ 'ಯಾಹೂ'ವಿನ ಇಂದಿನ ಕರುಣಾಜನಕ ಕಥೆ!

ಪ್ರಯಾಣದಲ್ಲಿ ಸಂಗೀತ ಆಲಿಸಲು ಕಿವಿ ಮಫ್‌ಗಳನ್ನು ಧ್ವನಿ ನಿರೋಧಕ ವಸ್ತುವನ್ನು ನೀಡಲಾಗಿದೆ. ಇಯರ್‌ಮಫ್ಗಳನ್ನು ತಿರುಗಿಸಲು ಹೆಡ್‌ಫೋನ್‌ಗಳು ಹೊಂದಾಣಿಕೆ ಮಾಡಬಹುದಾದ ಶಾಫ್ಟ್‌ಗಳೊಂದಿಗೆ ಬರುತ್ತವೆ. ಅದು ಬಳಕೆದಾರರಿಗೆ ಸಂಗೀತವನ್ನು ಬದಲಾಯಿಸಲು ಮತ್ತು ಕರೆಗಳಿಗೆ ಹಾಜರಾಗಲು ಅನುವು ಮಾಡಿಕೊಡುತ್ತದೆ. ಅಂದರೆ ಧ್ವನಿ ನಿಯಂತ್ರಣ ಬೆಂಬಲವಿದೆ.

Best Mobiles in India

English summary
Xiaomi announced that the Mi Super Bass Wireless Headphones would be going on sale in India starting July 15 during Amazon Prime Day sale. However, the Chinese company did not reveal the price back then. Today, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X