Just In
- 2 hrs ago
ಏರ್ಟೆಲ್ 5G+ ಯಿಂದ ರೈತರಿಗೆ ನೆರವು; ಭಾರೀ ಇಳುವರಿ ಪಡೆಯಬಹುದು!
- 5 hrs ago
ಮತ್ತೆ ಮರಳಿದ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್; ಆಫರ್ಗಳ ಸುರಿಮಳೆ!
- 22 hrs ago
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- 23 hrs ago
Ooredoo ಸಂಸ್ಥೆಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಫೋನ್ ಬಗ್ಗೆ ಘೋಷಣೆ; ಯಾರಿಗೆ ಉಪಯೋಗ!?
Don't Miss
- Movies
Lakshana Serial: ಮನೆಗೆ ಬಂದ ಮೌರ್ಯ! ಮುಂದೇನು?
- News
Ballari utsav: ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
- Sports
IND vs NZ: ಭಾರತದ ಶುಭ್ಮನ್ ಗಿಲ್ ಬ್ಯಾಟಿಂಗ್ ಕುರಿತು ಪಿಸಿಬಿ ಮಾಜಿ ಅಧ್ಯಕ್ಷ ಹೇಳಿದ್ದೇನು?
- Finance
ಎಚ್ಡಿಎಫ್ಸಿಯಿಂದ 10ವರ್ಷದಲ್ಲಿ 30ಶತಕೋಟಿ ಸಂಗ್ರಹದ ಚಿಂತನೆ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವ ಎಂಐ ಟ್ರಕ್ ಬಿಲ್ಡರ್
ಆಟದ ವಸ್ತುಗಳು ಅಂದರೆ ಕೇವಲ ಮಕ್ಕಳಿಗೆ ಮನರಂಜನೆ ನೀಡುವ ವಸ್ತುಗಳು ಮಾತ್ರವಲ್ಲ ಬದಲಾಗಿ ಅವರ ಬುದ್ಧಿಮಟ್ಟ, ಕೌಶಲ್ಯವನ್ನು ಹೆಚ್ಚಿಸುವ ಸಾಧನಗಳಾಗಿರಬೇಕು. ಸ್ಮಾರ್ಟ್ ಫೋನ್, ಸ್ಮಾರ್ಟ್ ಪ್ರೊಡಕ್ಟ್ ಗಳನ್ನು ತಯಾರಿಸುವ ಸಂಸ್ಥೆ ಶಿಯೋಮಿ ಇದೀಗ ಮಕ್ಕಳ ಆಟದ ವಸ್ತುಗಳ ಬಗ್ಗೆಯೂ ಗಮನ ಹರಿಸಿದೆ.

ನಿಮ್ಮ ಮಗುವಿಗೆ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ಇದೆಯಾ? ಯಾವುದೋ ಬಿಲ್ಡಿಂಗ್ ಬ್ಲಾಕ್ಸ್ ಗಳನ್ನು ಹಿಡಿದು ಮನೆ ಕಟ್ಟಿದೆ ನೋಡಿ ಅಮ್ಮಾ ಅಂತ ಹೇಳೋದು, ಯಾವ್ಯಾವುದೋ ಬಿಡಿಭಾಗಗಳನ್ನು ಸೇರಿಸಿ ಇನ್ನೇನೊ ನಿರ್ಮಿಸಿದೆ ನೋಡಿ ಅಪ್ಪ ಅಂತ ತೋರಿಸೋದು ಮಾಡ್ತಾರಾ? ಹಾಗಾದ್ರೆ ನಿಮ್ಮ ಮಗುವಿಗೆ ನಾವು ಹೇಳುವ ಈ ಶಿಯೋಮಿಯ ಆಟದ ವಸ್ತುವನ್ನು ಕೊಡಿಸುವುದು ಬಹಳ ಒಳ್ಳೆಯದು.

ಎಂಐ ಟ್ರಕ್ ಬಿಲ್ಡರ್:
ಶಿಯೋಮಿ ಸಂಸ್ಥೆ ಹೊಸದಾಗಿ ಎಂಐ ಟ್ರಕ್ ಬಿಲ್ಡರ್ ಅನ್ನೋ ಆಟದ ವಸ್ತುವೊಂದನ್ನು ಬಿಡುಗಡೆಗೊಳಿಸಿದೆ. ಕನ್ಸ್ಟ್ರಕ್ಷನ್ ಬಗ್ಗೆ ಆಸಕ್ತಿ ಹೆಚ್ಚಿಸುವುದಕ್ಕೆ ಹೇಳಿ ಮಾಡಿಸಿದ ಆಟದ ವಸ್ತು ಇದಾಗಿದೆ. 97 ವಿಭಿನ್ನ ರೀತಿಯ 530 ಕ್ಕೂ ಹೆಚ್ಚು ಬಿಡಿಭಾಗಗಳನ್ನು ಒಂದಕ್ಕೊಂದು ಜೋಡಿಸಿ ಟ್ರಕ್ ತಯಾರಿಸುವಿಕೆಯೇ ಈ ಆಟದ ವಸ್ತುವಿನಲ್ಲಿರುವ ಅಜೆಂಡಾ.

6 ವರ್ಷಕ್ಕೂ ಮೇಲ್ಪಟ್ಟವರಿಗೆ:
ಸಂಸ್ಥೆ ಹೇಳಿರುವ ಪ್ರಕಾರ 6 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಮಕ್ಕಳಿಗಾಗಿ ನೀವು ಈ ಆಟದ ವಸ್ತುವನ್ನು ಖರೀದಿಸಬಹುದು. ಆದರೆ ನಾವು ಇದನ್ನು ಖರೀದಿಸಿ ಟೆಸ್ಟ್ ಮಾಡಿದಾಗ 6 ವರ್ಷದ ಮಕ್ಕಳಿಗೆ ಈ ಟ್ರಕ್ ತಯಾರಿಸುವುದು ಸ್ವಲ್ಪ ಕಠಿಣವೆನ್ನಿಸಬಹುದು. ದೊಡ್ಡವರೊಂದಿಗೆ ಜೊತೆಗೂಡಿ ಮಕ್ಕಳನ್ನು ತೊಡಗಿಸಿಕೊಂಡು ಮಾಡುವುದಾದರೆ ಖಂಡಿತ ಓಕೆ. 10 ವರ್ಷದ ಮೇಲ್ಪಟ್ಟವರು ತಾವಾಗೇ ಮಾನ್ಯುವಲ್ ನೋಡಿ ಟ್ರಕ್ ಬಿಲ್ಡ್ ಮಾಡಲು ಸಾಧ್ಯವಿದೆ. ಇನ್ನು ಅತೀ ಚಿಕ್ಕ ಮಕ್ಕಳಿಗೆ ಇದನ್ನು ಕೊಡಿಸಬಾರದು. ಇದರಲ್ಲಿರುವ ಬಿಡಿಭಾಗಗಳು ಭಾರೀ ಸಣ್ಣದಿರುವುದರಿಂದಾಗಿ ಅವರು ಬಾಯಿಗೆ ಹಾಕಿಕೊಂಡು ಗಂಟಲಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

ಬೆಲೆ ಎಷ್ಟು?
ಬಾಕ್ಸ್ ನಲ್ಲಿ ನಿಮಗೆ 1,799 ರುಪಾಯಿ ಎಂದು ಬರೆಯಲಾಗಿದೆ. ಆದರೆ ಆನ್ ಲೈನ್ ನಲ್ಲಿ ಲಭ್ಯವಿರುವ ಆಫರ್ ನಲ್ಲಿ ಖರೀದಿಸಿದರೆ ಇನ್ನೂ ಸ್ವಲ್ಪ ಕಡಿಮೆ ಬೆಲೆಯಲ್ಲೇ ಕೈಗೆಟುಕುತ್ತದೆ.

ಬಾಕ್ಸ್ ನಲ್ಲಿ ಏನೇನಿರುತ್ತೆ?
ನೀವು ಎಂಐ ಟ್ರಕ್ ಬಿಲ್ಡರ್ ಖರೀದಿಸಿರುವ ಬಾಕ್ಸ್ ನಲ್ಲಿ ಒಂದು ಯ್ಯೂಸರ್ ಮ್ಯಾನುವಲ್ ಮತ್ತು 97 ವಿಭಿನ್ನವಾಗಿರುವ 530ಕ್ಕೂ ಅಧಿಕ ಬಿಡಿಭಾಗಗಳಿರುತ್ತದೆ. ಕೆಲವು ಬಿಡಿಭಾಗಗಳು ಅದೆಷ್ಟು ಚಿಕ್ಕದಿವೆ ಎಂದರೆ ನಿಮ್ಮ ಕಿರಿಬೆರಳಿನ ತುದಿಯಲ್ಲಿ ಇಟ್ಟುಕೊಳ್ಳಬಹುದು. ಒಂದು ವಿಚಾರ ನೆನಪಿನಲ್ಲಿರಲಿ. ಯಾವುದೇ ಒಂದು ಸಣ್ಣ ಬಿಡಿಭಾಗ ಕಳೆದುಕೊಂಡರೂ ಕೂಡ ನಿಮ್ಮ ಟ್ರಕ್ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಪ್ರತಿಯೊಂದು ಸಣ್ಣಸಣ್ಣ ಬಿಡಿಭಾಗವೂ ಕೂಡ ಟ್ರಕ್ ತಯಾರಿಕೆಗೆ ಅಗತ್ಯವಾಗಿ ಬೇಕಾಗುತ್ತದೆ. 530 ಬಿಡಿಭಾಗಗಳೂ ಕೂಡ ನಾವು ಫೋಟೋದಲ್ಲಿ ತೋರಿಸಿದ ಟ್ರಕ್ ನಿರ್ಮಾಣದಲ್ಲಿ ಬಳಕೆಯಾಗಿವೆ ಎಂಬುದು ನಿಮಗೆ ನೆನಪಿರಲಿ.

ಅಟೋಮ್ಯಾಟಿಕ್ ಅಲ್ಲಾ, ರಿಮೋಟ್ ಕಂಟ್ರೋಲ್ ಅಲ್ಲ:
ಇಷ್ಟೊಂದು ದುಬಾರಿಯಾಗಿರುವ ಈ ಟ್ರಕ್ ದೊಡ್ಡದಿರಬೇಕು ಅಥವಾ ರಿಮೋಟ್ ಕಂಟ್ರೋಲ್ ಇರಬೇಕು ಅಥವಾ ಅಟೋಮ್ಯಾಟಿಕ್ ಆಗಿ ಚಲಿಸುವಂತೆ ಬಿಲ್ಡ್ ಮಾಡಬಹುದು ಅನ್ನಿಸುತ್ತೆ ಅಂತ ನೀವಂದುಕೊಳ್ಳುತ್ತಿದ್ದರೆ ನಿಮ್ಮ ಅಂದಾಜು ಸುಳ್ಳು. ತೀರಾ ದೊಡ್ಡದಲ್ಲದ ಈ ಟ್ರಕ್ ಕೇವಲ ನಿಮ್ಮ ತಾಳ್ಮೆ ಮತ್ತು ಕನ್ಸ್ಟ್ರಕ್ಷನ್ ಬಗ್ಗೆ ಐಡಿಯಾ ಬರಲು ಅಥವಾ ಆಸಕ್ತಿ ಬೆಳೆಯಲು ಇರುವ ಒಂದು ಆಟದ ವಸ್ತು ಅಷ್ಟೇ. ಪ್ರತಿಯೊಂದು ಬಿಡಿಭಾಗವನ್ನು ಹಂತಹಂತವಾಗಿ ಜೋಡಿಸುವುದೇ ಈ ಆಟದ ವಸ್ತುವಿನ ಪ್ರಮುಖ ವಿಚಾರ.

ಏನೇನು ಮಾಡಬಹುದು?
ಒಮ್ಮೆ ನಿರ್ಮಾಣ ಕಾರ್ಯ ಮುಗಿದ ನಂತರ ಟಯರ್ ಚಲಿಸುವಂತೆ ಮಾಡಬಹುದು. ಟ್ರಕ್ ಹಿಂಭಾಗ ಮೇಲೆ ಕೆಳಗೆ ಆಗಿ ಲೋಡ್ ಮತ್ತು ಅನ್ ಲೋಡ್ ಮಾಡಲು ಟ್ರಕ್ ನಲ್ಲಿ ಯಾವ ರೀತಿಯ ತಂತ್ರಗಾರಿಕೆ ಬಳಕೆಯಾಗಿರುತ್ತದೆ ಎಂಬುದನ್ನು ಮಕ್ಕಳಿಗೆ ವಿವರಿಸಬಹುದು. ಹೆಚ್ಚಿನ ವಿವರಣೆಗಾಗಿ ಒಮ್ಮೆ ವೀಡಿಯೋಗಳನ್ನು ಗಮನಿಸಿ.

ಗಮನಿಸಬೇಕಾಗಿರುವ ಅಂಶಗಳು:
• ಪ್ಲಾಸ್ಟಿಕ್ ನಿರ್ಮಿಸಲಾಗಿರುವ ಈ ಟ್ರಕ್ ನ ಬಿಡಿಭಾಗಗಳನ್ನು ಅತೀ ಚಿಕ್ಕ ಮಕ್ಕಳಿಗೆ ನೀಡಬಾರದು.
• ಬೆಂಕಿಯಿಂದ ದೂರವೇ ಇಡಬೇಕು
• ಯಾವುದೇ ಕಾರಣಕ್ಕೂ ಭೂಮಿಗೆ ಎಸೆಯಬಾರದು. ಯಾಕೆಂದರೆ ಇದು ಕರಗುವ ವಸ್ತು ಅಲ್ಲ.
• ಮಕ್ಕಳು ಬಾಯಿಗೆ ಹಾಕಿಕೊಳ್ಳದಂತೆ ನೋಡಿಕೊಳ್ಳಿ.
• ಕೂದಲಿನಿಂದ ದೂರವಿಡಿ. ಕೆಲವು ಸಣ್ಣಸಣ್ಣ ಬಿಡಿಭಾಗಗಳು ಕೂದಲಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ.
• ಬಣ್ಣಗಳು ಮತ್ತು ಬಿಡಿಭಾಗಗಳ ಅಳತೆಯ ಆಧಾರದಲ್ಲಿ ಜೋಡಣೆ ಸುಲಭವಾಗಿರುತ್ತದೆ.

ಟ್ರಕ್ ಮಾತ್ರವಲ್ಲ, ಬುಲ್ಡೋಜರ್ ಕೂಡ ಮಾಡಬಹುದು:
ಇದರಲ್ಲಿರುವ ಬಿಡಿಭಾಗಗಳನ್ನು ಬಳಸಿ ಕೇವಲ ಟ್ರಕ್ ಮಾತ್ರವಲ್ಲ ಬದಲಾಗಿ ಬುಲ್ಡೋಜರ್ ಕೂಡ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿದೆ. ಆದರೆ ಅದರ ವಿವರಣೆ ಮ್ಯಾನುವಲ್ ನಲ್ಲಿ ಇರುವುದಿಲ್ಲ. ಕೇವಲ ಬುಲ್ಡೋಜರ್ ನ ಫೋಟೋವನ್ನು ಬಾಕ್ಸ್ ನಲ್ಲಿ ನೀಡಲಾಗಿರುವ ಮ್ಯಾನುವಲ್ ನಲ್ಲಿ ತೋರಿಸಲಾಗಿದೆ.ನೀವು ಬುಲ್ಡೋಜರ್ ನಿರ್ಮಾಣ ಮಾಡಬೇಕು ಎಂದಾದರೆ http://www.iqi-inc.com/MiTruckBuilder ಗೆ ತೆರಳಿ ಹೆಚ್ಚಿನ ವಿವರಣೆ ಪಡೆದು, ಮ್ಯಾನುವಲ್ ಡೌನ್ ಲೋಡ್ ಮಾಡಿಕೊಂಡು ತಯಾರಿಸಬೇಕಾಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470