Home
ಸುದ್ದಿಜಾಲ

ಭಾರತದ ಮಾರುಕಟ್ಟೆಯಲ್ಲಿ ಮಿ ಟಿವಿ 4A ನೂತನ ಆವೃತ್ತಿ ಬಿಡುಗಡೆ!

ಜನಪ್ರಿಯ ಸ್ಮಾರ್ಟ್‌ಟಿವಿಗಳ ಸರಣಿಯನ್ನ ಪರಿಚಯಿಸುವ ಶಿಯೋಮಿ ಸಂಸ್ಥೆ ತನ್ನ ಹೊಸ ಮಿ ಟಿವಿ 4A ಹರೈಸನ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯಲ್ಲಿ 32- ಮತ್ತು 43 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ. ಇದು "ಬೆಜೆಲ್‌ ಲೆಸ್‌ ಡಿಸೈನ್‌ " ಹೊಂದಿದ್ದು, ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ 95% ಹೊಂದಿದ್ದು, ಇದು ಮುಂಭಾಗದ ಚೌಕಟ್ಟನ್ನು ಸಾನ್ಸ್ ಮಾಡುತ್ತದೆ. ಅಲ್ಲದೆ ಮಿ ಟಿವಿ 4A ಹರೈಸನ್ ಆವೃತ್ತಿಯು ಶಿಯೋಮಿಯ ವಿವಿದ್ ಪಿಕ್ಚರ್ ಎಂಜಿನ್‌ನಿಂದ ಕೂಡಿದ್ದು, ಬಳಕೆದಾರರಿಗೆ ಹೊಸ ಅನುಭವ ದೊರೆಯಲಿದೆ.

ಮಿ ಟಿವಿ 4A ಹರೈಸನ್‌ ಆವೃತ್ತಿ

ಹೌದು, ಮಿ ಟಿವಿ 4A ಹರೈಸನ್‌ ಆವೃತ್ತಿಯ ಸ್ಮಾರ್ಟ್‌ಟಿವಿ ಭಾರತದಲ್ಲಿ ಬಿಡುಗಡೆ ಆಗಿದ್ದು, screen calibration, deeper contrasts, and pin-point precision in colour reproduction ಟೆಕ್ನಾಲಜಿಯನ್ನು ಹೊಂದಿದೆ. ಅಲ್ಲದೆ ಶಿಯೋಮಿ ತನ್ನ ಪ್ಯಾಚ್‌ವಾಲ್ ಇಂಟರ್ಫೇಸ್ ಅನ್ನು ಮಿ ಟಿವಿ 4A ಹರೈಸನ್ ಆವೃತ್ತಿಯಲ್ಲಿ ನೀಡಿದ್ದು, ಆಂಡ್ರಾಯ್ಡ್ ಟಿವಿಯ ಮೇಲಿರುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ, ಮಿ ಕ್ವಿಕ್ ವೇಕ್ ಎಂಬ ಪ್ರೀ ಲೋಡ್ ಫೀಚರ್ಸ್‌ ಅನ್ನು ಸಹ ಇದರಲ್ಲಿ ನೀಡಲಾಗಿದೆ. ಇದು ಬಳಕೆದಾರರು ಹೊಸ ಮಿ ಟಿವಿಯನ್ನು ಕೇವಲ 05 ಸೆಕೆಂಡುಗಳಲ್ಲಿ ಟಿವಿ ವೆಕ್‌ ಆಪ್‌ ಆಗಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಮಿ ಟಿವಿ 4A ಹರೈಸನ್ ಆವೃತ್ತಿ 32 ಇಂಚು.

ಮಿ ಟಿವಿ 4A ಹರೈಸನ್ ಆವೃತ್ತಿ 32 ಇಂಚು.

ಮಿ ಟಿವಿ 4A ಹರೈಸನ್ ಆವೃತ್ತಿಯ 32 ಇಂಚಿನ ಸ್ಮಾರ್ಟ್‌ಟಿವಿ 1,368x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಎಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟಿವಿ 20D ಸ್ಟಿರಿಯೊ ಸ್ಪೀಕರ್‌ಗಳನ್ನ ಹೊಂದಿದ್ದು, ಡಿಟಿಎಸ್-ಎಚ್‌ಡಿ ಸರೌಂಡ್ ಸೌಂಡ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಕ್ವಾಡ್‌-ಕೋರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಪ್ಯಾಚ್‌ವಾಲ್ ಇಂಟರ್‌ಪೇಸ್‌ ಜೊತೆಗೆ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮಾಲಿ -450 GPU ಮತ್ತು 1GB RAM ಅನ್ನು ಹೊಂದಿದ್ದು, ಇದು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ V4.2, ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಮಿ ಟಿವಿ 4A ಹರೈಸನ್ ಆವೃತ್ತಿ 43 ಇಂಚು.

ಮಿ ಟಿವಿ 4A ಹರೈಸನ್ ಆವೃತ್ತಿ 43 ಇಂಚು.

ಮಿ ಟಿವಿ 4A ಹರೈಸನ್ ಆವೃತ್ತಿಯ 43 ಇಂಚಿನ ಮಾದರಿಯು 1,920x1,080 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿರುವ ಫುಲ್-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 43-ಇಂಚಿನ ಆಯ್ಕೆಯು 32-ಇಂಚಿನ ಆವೃತ್ತಿಯ ಫಿಚರ್ಸ್ಗಳನ್ನೇ ಹೊಂದಿದೆ. 43 ಇಂಚಿನ ಮಿ ಟಿವಿ 4A ಹರೈಸನ್ ಆವೃತ್ತಿಯಲ್ಲಿ ಒಂದೇ, ಕ್ವಾಡ್-ಕೋರ್ ಪ್ರೊಸೆಸರ್, 1GB RAM ಮತ್ತು 8GB ಸ್ಟೋರೇಜ್‌ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕೂಡ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಟ್ಯಾಂಡರ್ಡ್ ವೈ-ಫೈ, ಬ್ಲೂಟೂತ್, ಎಚ್‌ಡಿಎಂಐ, ಯುಎಸ್‌ಬಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಭಾರತದಲ್ಲಿ ಮಿ ಟಿವಿ 4A ಹರೈಸನ್ ಆವೃತ್ತಿ 32 ಇಂಚಿನ ಬೆಲೆ ರೂ. 13,499 ಆಗಿದ್ದು, ಮಿ ಟಿವಿ 4A ಹರೈಸನ್ ಆವೃತ್ತಿ 43 ಇಂಚಿನ ಬೆಲೆ ರೂ. 22,999 ಆಗಿದೆ. ಇನ್ನು 32 ಇಂಚಿನ ಸ್ಮಾರ್ಟ್‌ಟಿವಿ ಆಯ್ಕೆಯು ಇದೇ ಸೆಪ್ಟೆಂಬರ್ 11 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಫ್ಲಿಪ್‌ಕಾರ್ಟ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಆದರೆ 43 ಇಂಚಿನ ಮಿ ಟಿವಿ 4A ಹರೈಸನ್ ಸ್ಮಾರ್ಟ್‌ಟಿವಿ ಅಮೆಜಾನ್, ಮಿ.ಕಾಮ್ ಮತ್ತು ಮಿ ಮೂಲಕ ಮಾರಾಟವಾಗಲಿದೆ.

Best Mobiles in India

English summary
Mi TV 4A Horizon Edition 32-inch carries a price tag of Rs. 13,499, while its 43-inch version is priced at Rs. 22,999.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+