ಶಿಯೋಮಿಯಿಂದ 65 ಇಂಚಿನ ಮಿ TV 4S ಸ್ಮಾರ್ಟ್‌ಟಿವಿ ಬಿಡುಗಡೆ!
ಶಿಯೋಮಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತೆ ಇದೆ. ಪ್ರತಿ ಭಾರಿಯು ಹೊಸ ಮಾದರಿಯನ್ನ ಪರಿಚಯಿಸುವ ಶಿಯೋಮಿ ತನ್ನ ಮಾರುಕಟ್ಟೆಯನ್ನ ಇತರೆ ವಲಯಗಳಿಗೂ ವಿಸ್ತರಣೆ ಮಾಡಿ ಆಗಿದೆ. ಈಗಾಗಲೇ ತನ್ನ ಪ್ರಾಬಲ್ಯವನ್ನು ನಿರೂಪಿಸಿರುವ ಶಿಯೋಮಿ ಸ್ಮಾರ್ಟ್ ಡಿವೈಸ್‌ಗಳ ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ. ಇನ್ನು ಈಗಾಗ್ಲೆ ಟಿವಿ ಮಾರುಕಟ್ಟೆಯಲ್ಲೂ ತನ್ನ ಕೈ ಚಳಕ ತೋರಿಸುವ ಶಿಯೋಮಿ ಇದೀಗ ತನ್ನ ಹೊಸ ಮಾದರಿಯ ಟಿವಿಯನ್ನ ಪರಿಚಯಿಸಿದೆ.

ಹೌದು, ಚೀನಾ ಮೂಲದ ಜನಪ್ರಿಯ ಕಂಪೆನಿ ಶಿಯೋಮಿ ತನ್ನ ಹೊಸ ಮಿ TV 4S 65 ಇಂಚಿನ ಆವೃತ್ತಿಯನ್ನ ಬಿಡುಗಡೆ ಮಾಡಿದೆ. ಸದ್ಯ ಕೊರೊನಾ ವೈರಸ್ ಬೀತಿಯತಿಂದಾಗಿ ಎಲ್ಲೆಡೆ ಲಾಕ್‌ಡೌನ್ ಸಮಸ್ಯೆ ಇರೊದ್ರಿಂದ ಆನ್‌ಲೈನ್ ಈವೆಂಟ್ ಮೂಲಕ ಈ ಸ್ಮಾರ್ಟ್‌ಟಿವಿಯನ್ನು ಲಾಂಚ್ ಮಾಡಲಾಗಿದೆ. ಇನ್ನು ಈ ಹೊಸ ಮಿ TV 4s ಮಾದರಿ 4k ಮತ್ತು HDR10 + ಬೆಂಬಲವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಟಿವಿ ಡಿಟಿಎಸ್-ಎಚ್‌ಡಿ ಮತ್ತು ಡಾಲ್ಬಿ ಆಡಿಯೋ ಧ್ವನಿ ಅನುಭವವನ್ನು ಸಹ ನೀಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ವಿನ್ಯಾಸ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಸದ್ಯ ಶಿಯೋಮಿ ಬಿಡುಗಡೆ ಮಾಡಿರುವ ಮಿ TV4 S65 ಟಿವಿಯು 65-ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಐಪಿಎಸ್ ಡಿಸ್‌ಪ್ಲೇ ಪ್ಯಾನೆಲ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಎಚ್‌ಡಿಆರ್ 10 + ಅನ್ನು ಬೆಂಬಲಿಸುತ್ತದೆ ಮತ್ತು 4k ರೆಸಲ್ಯೂಶನ್ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು 85% ಎನ್‌ಟಿಎಸ್‌ಸಿ ಬಣ್ಣದ ಹರವು ಮತ್ತು ಎಂಇಎಂಸಿ ಬೆಂಬಲವನ್ನು ಸಹ ಹೊಂದಿದೆ. ಹಾಗೇಯೆ ಈ ಸ್ಮಾರ್ಟ್ ಟಿವಿಯು 2GB RAM ಮತ್ತು 16GB ಇಂಟರ್ ಸ್ಟೊರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.

ಇದಲ್ಲದೆ ಈ ಸ್ಮಾರ್ಟ್‌ಟಿವಿ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಮತ್ತು ಯೂಟ್ಯೂಬ್‌ನಂತಹ ಒಟಿಟಿ ಅಪ್ಲಿಕೇಶನ್‌ಗಳಿಗೆ ಅವಕಾಶ ನೀಡುವ ಸ್ಮಾರ್ಟ್ ಹೋಮ್ ಹಬ್ ಅನ್ನು ಸಹ ಒಳಗೊಂಡಿದೆ. ಜೊತೆಗೆ ಲಭ್ಯವಿರುವ ಅಪ್ಲಿಕೇಶನ್‌ಗಳ ಶ್ರೇಣಿಯನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡಲು ಟಿವಿಯಲ್ಲಿ ಗೂಗಲ್ ಪ್ಲೇ ಆಪ್ಲಿಕೇಶನ್ ಅನ್ನು ಸಹ ನೀಡಲಾಗಿದೆ. ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ ಮಿ ಟಿವಿ 4s 65-ಇಂಚಿನ ಮಾದರಿಯು ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಬೆಂಬಲವನ್ನು ಹೊಂದಿದೆ. ಟಿವಿಯು Chromecast ಬೆಂಬಲವನ್ನು ಸಹ ಒಳಗೊಂಡಿದೆ.

ಅಲ್ಲದೆ ಈ ಸ್ಮಾರ್ಟ್‌ಟಿವಿ ಉತ್ತಮ ಸೌಂಡ್ ಸಿಸ್ಟಂ ಅನ್ನು ಸಹ ಒಳಗೊಂಡಿದ್ದು, ವಾಯ್ಸ ರಿಮೋಟ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ. ಜೊತೆಗೆ ಇದು ಕಾರ್ಬನ್-ಫೈಬರ್ ಮಾದರಿಯ ರಿಯರ್ ಪ್ಯಾನೆಲ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ. ಪೋರ್ಟ್ ಮಾಡಿದ ಪೆಟ್ಟಿಗೆಯಲ್ಲಿ ಎರಡು 10W ಸ್ಪೀಕರ್‌ಗಳನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬೆಲೆಯನ್ನು ಯುರೋ 549 (ಸರಿಸುಮಾರು ರೂ. 45,900) ಎಂದು ನಿಗದಿಪಡಿಸಲಾಗಿದೆ. ಸದ್ಯ ಇದೇ ಜೂನ್‌ನಿಂದ ಅಧಿಕೃತ ಮಿ ಸ್ಟೋರ್‌ಗಳ ಮೂಲಕ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಖರೀದಿಸಲು ಇದು ಲಭ್ಯವಿರುತ್ತದೆ.


Click it and Unblock the Notifications




