ಭಾರತದಲ್ಲಿ ಮಿ ವಾಚ್ ರಿವಾಲ್ವ್ ಆಕ್ಟಿವ್ ಲಾಂಚ್‌! Sp02 ಮಾನಿಟರಿಂಗ್‌ ವಿಶೇಷ!

|

ಜನಪ್ರಿಯ ಶಿಯೋಮಿ ಕಂಪೆನಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಲ್ಲೂ ಸೈ ಎನಿಸಿಕೊಂಡಿದೆ. ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಆಕ್ಸಿಸರಿಸ್‌ ಜೊತೆಗೆ ಸ್ಮಾರ್ಟ್‌ವಾಚ್‌ಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಮಿ ವಾಚ್ ರಿವಾಲ್ವ್ ಆಕ್ಟಿವ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ ವಾಚ್ Sp02 ಮಾನಿಟರಿಂಗ್‌ ಅನ್ನು ಹೊಂದಿದೆ. ಜೊತಗೆ 117 ಸ್ಪೋರ್ಟ್ಸ್ ಮೋಡ್‌ ಫೀಚರ್ಸ್‌ ಒಳಗೊಂಡಿದೆ.

ಶಿಯೋಮಿ

ಹೌದು, ಶಿಯೋಮಿ ಸಂಸ್ಥೆ ಹೊಸ ಮಿ ವಾಚ್ ರಿವಾಲ್ವ್ ಆಕ್ಟಿವ್ ಸ್ಮಾರ್ಟ್‌ವಾಚ್ ಲಾಂಚ್‌ ಮಾಡಿದೆ. ಇದು ಮಣಿಕಟ್ಟಿನ ಮೇಲೆ ಉತ್ತಮ ಹಿಡಿತಕ್ಕಾಗಿ ಸಿಲಿಕೋನ್ ಪಟ್ಟಿಗಳನ್ನು ಮತ್ತು ಬಕಲ್ ಕ್ಲೋಸರ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌, ಒತ್ತಡದ ಮೇಲ್ವಿಚಾರಣೆಯಂತಹ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಮಿ ವಾಚ್ ರಿವಾಲ್ವ್‌ ಮಾದರಿಯನ್ನೇ ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಿ ವಾಚ್ ರಿವಾಲ್ವ್

ಮಿ ವಾಚ್ ರಿವಾಲ್ವ್ ಆಕ್ಟಿವ್ 110 ವಾಚ್ ಫೇಸ್‌ಗಳನ್ನು ಹೊಂದಿದ್ದು ಅವುಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 454x454 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 1.39-ಇಂಚಿನ ಆಲ್ವೇಸ್-ಆನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಮ್ಯಾಗ್ನೆಟಿಕ್ ಚಾರ್ಜಿಂಗ್ ಪಾಡ್ ಅನ್ನು ಹೊಂದಿದೆ. ಮಿ ವಾಚ್‌ ರಿವಾಲ್ವ ಆಕ್ಟಿವ್‌ ಸ್ಮಾರ್ಟ್‌ವಾಚ್‌ ರಕ್ತದ ಆಮ್ಲಜನಕದ ಶುದ್ಧತ್ವ (Sp02) ಮೇಲ್ವಿಚಾರಣೆ ಫೀಚರ್ಸ್‌ ಅನ್ನು ಸೇರಿಸಿರುವುದು ಇದರ ಮುಖ್ಯ ಹೈಲೈಟ್. Sp02 ಮಾಪನಗಳು ಸ್ಲೀಪ್ ಅಪ್ನಿಯಾ, ಕೋವಿಡ್‌-19, ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ಆರಂಭಿಕ ಸೂಚನೆಗಳನ್ನು ಸಹ ನೀಡಬಲ್ಲದು. ಈ ವಾಚ್‌ನಲ್ಲಿ ನಿದ್ರೆ, ಹೃದಯ ಬಡಿತ ಮತ್ತು ಒತ್ತಡದ ಮಟ್ಟವನ್ನು ಸಹ ಮೇಲ್ವಿಚಾರಣೆ ಮಾಡುವ ಫೀಚರ್ಸ್‌ ಹೊಂದಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಜಿಪಿಎಸ್ ಮತ್ತು 17 ವೃತ್ತಿಪರ ಕ್ರೀಡಾ ವಿಧಾನಗಳು ಸೇರಿದಂತೆ 117 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ವೃತ್ತಿಪರ ವರ್ಕ್‌ಮೋಡ್‌ ಗಳಲ್ಲಿ ಯೋಗ, ಟ್ರಯಥ್ಲಾನ್‌ಗಳು, ಸ್ವಿಮ್ಮಿಂಗ್‌ ಮತ್ತು ಎಚ್‌ಐಐಟಿ ಸೇರಿವೆ. ಮಿ ವಾಚ್ ರಿವಾಲ್ವ್ ಆಕ್ಟಿವ್ 5 ಎಟಿಎಂ ವಾಟರ್‌- ಪ್ರೂಫ್‌ ಅನ್ನು ಒಳಗೊಂಡಿವೆ. ಇದು ಇಂಟರ್‌ಬಿಲ್ಟ್‌ 12 ಎನ್ಎಂ ರೆಸ್ಪಾನ್ಸ್‌ ಐರೋಹಾ ಜಿಪಿಎಸ್ ಚಿಪ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ನಾಲ್ಕು ಪ್ರಮುಖ ಸ್ಥಾನಿಕ ವ್ಯವಸ್ಥೆಗಳಿಂದ ಸಿಂಕ್ರೊನಸ್ ಸ್ಥಾನೀಕರಣವನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ 420mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 14 ದಿನಗಳವರೆಗೆ ಇರುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಲಾಂಗ್ ಬ್ಯಾಟರಿ ಮೋಡ್‌ನಲ್ಲಿ 22 ದಿನಗಳು ಮತ್ತು ಹೊರಾಂಗಣ ಸ್ಪೋರ್ಟ್ಸ್ ಮೋಡ್‌ನಲ್ಲಿ 50 ಗಂಟೆಗಳ ಕಾಲ ಇರುತ್ತದೆ. ವಾಚ್ ಸಂಪೂರ್ಣ ಚಾರ್ಜ್ ಆಗಲು ಎರಡು ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಬಾಡಿ ಎನರ್ಜಿ ಮಾನಿಟರ್, ಕರೆ ಮತ್ತು ಟೆಕ್ಸ್ಟ್‌ ನೋಟಿಫಿಕೇಶನ್‌, ಮ್ಯೂಸಿಕ್‌ ಕಂಟ್ರೋಲ್‌, ಅಂತರ್ನಿರ್ಮಿತ ಅಲೆಕ್ಸಾ ಬೆಂಬಲ, ಸ್ಟಾಪ್‌ವಾಚ್, ಅಲಾರಂ, ಟೈಮರ್, ಫೈಂಡ್‌ ಮೈ ಫೋನ್‌, ಫ್ಲ್ಯಾಷ್‌ಲೈಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

 ರಿವಾಲ್ವ್ ಆಕ್ಟಿವ್ ಸ್ಮಾರ್ಟ್ ವಾಚ್

ಸದ್ಯ ಈ ಹೊಸ ಮಿ ವಾಚ್ ರಿವಾಲ್ವ್ ಆಕ್ಟಿವ್ ಸ್ಮಾರ್ಟ್ ವಾಚ್ ಭಾರತದಲ್ಲಿ 9,999 ರೂ. ಹೊಂದಿದೆ. ಇದು ಜೂನ್ 25 ರಿಂದ ಅಮೆಜಾನ್ ಇಂಡಿಯಾ, ಮಿ.ಕಾಮ್, ಮಿ ಹೋಮ್ ಸ್ಟೋರ್‌ಗಳು ಮತ್ತು ಇತರ ರಿಟೇಲ್‌ ಸ್ಟೋರ್‌ ಮೂಲಕ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಲಾಂಚ್‌ ಆಫರ್‌ನಲ್ಲಿ 8,999 ರೂ. ಬೆಲೆಯನ್ನು ಹೊಂದಿದೆ. ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಆಫರ್ ಇದ್ದು ಡೆಬಿಟ್, ಕ್ರೆಡಿಟ್ ಮತ್ತು ಇಎಂಐ ವಹಿವಾಟುಗಳಿಗೆ 750 ರೂ.ಕ್ಯಾಶ್‌ಬ್ಯಾಕ್‌ ಸಿಗಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಬೀಜ್, ಬ್ಲ್ಯಾಕ್ ಮತ್ತು ನೇವಿ ಬ್ಲೂ ವಾಚ್ ಕೇಸ್ ಆಯ್ಕೆಗಳಲ್ಲಿ ಬರುತ್ತದೆ. ಇದು ಕಪ್ಪು, ನೀಲಿ, ಹಸಿರು, ಬಿಳಿ ಮತ್ತು ನೇರಳೆ ಸೇರಿದಂತೆ ಆರು ಪಟ್ಟಿಯ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.

Best Mobiles in India

English summary
Mi Watch Revolve Active smartwatch has launched in India alongside the Mi 11 Lite.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X