ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ 310 ಭಾರತಕ್ಕೆ ಲಗ್ಗೆ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ ಬಹು ಜನಪ್ರಿಯ ಹಾಗೂ ಉತ್ತಮ ಫೋನ್ ಆಗಿ ಮಾರುಕಟ್ಟೆಯಲ್ಲಿ ರೂಪುಗೊಂಡಿದೆ. ಇತ್ತೀಚೆಗೆ ತಾನೇ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋವನ್ನು 16 ಜಿಬಿ ಸ್ಥಳೀಯ ಸಂಗ್ರಹ ವಿಶೇಷತೆಯೊಂದಿಗೆ ಲಾಂಚ್ ಮಾಡಿತ್ತು. ಇದೇ ರೀತಿ ಮಾಡೆಲ್ ಸಂಖ್ಯೆ ಎ311, 16 ಜಿಬಿ ಸ್ಥಳೀಯ ಸಂಗ್ರಹ ಸಾಮರ್ಥ್ಯದೊಂದಿಗೆ ಬಂದಿದ್ದು ಕ್ಯಾನ್‌ವಾಸ್ ನಿಟ್ರೋನಲ್ಲಿ ಎ310 ನಲ್ಲಿ 8ಜಿಬಿಯನ್ನು ನಿಮಗೆ ಕಾಣಬಹುದು.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ ಎ310 - ವಿಶೇಷತೆಗಳು
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ ಎ310, 5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಎಚ್‌ಡಿ ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳೊಂದಿಗೆ ಬಂದಿದ್ದು ಓಕ್ಟಾ ಕೋರ್ ಮೀಡಿಯಾ ಟೆಕ್ 6592 ಚಿಪ್‌ಸೆಟ್ ಇದರಲ್ಲಿದೆ. ಫೋನ್ 1.7GHz ಜೊತೆಗೆ ಮಾಲಿ 450 GPU ನೊಂದಿಗೆ ಬಂದಿದ್ದು 2 ಜಿಬಿ RAM ಸಾಮರ್ಥ್ಯ ಸೆಟ್‌ನಲ್ಲಿದೆ. ಆಂಡ್ರಾಯ್ಡ್ 4.4.2 ಇದರಲ್ಲಿ ಚಾಲನೆಯಾಗುತ್ತಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು.
ಇನ್ನು ಫೋನ್‌ನ ಕ್ಯಾಮೆರಾ ವಿಶೇಷತೆಗಳತ್ತ ಗಮನ ಹರಿಸಿದಾಗ 13 ಎಮ್‌ಪಿ ಆಟೋ ಫೋಕಸ್ ರಿಯರ್ ಕ್ಯಾಮೆರಾದ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಪಡೆದುಕೊಂಡಿದೆ. ಇನ್ನು ಫೋನ್‌ನ ಮುಂಭಾಗದಲ್ಲಿ 5 ಎಮ್‌ಪಿ ಫೋಕಸ್ ಫೇಸಿಂಗ್ ಸ್ನ್ಯಾಪರ್ ಇದೆ. ಇನ್ನು ಸಂಪರ್ಕ ವಿಶೇಷತೆಗಳತ್ತ ಗಮನಿಸಿದಾಗ ಇದು 3ಜಿ, ವೈಫೈ, ಬ್ಲ್ಯೂಟೂತ್, ಜಿಪಿಎಸ್, ಡ್ಯುಯಲ್ ಸಿಮ್, ಹಾಗೂ ಇತರ ವಿಶೇಷತೆಗಳನ್ನು ಹೊಂದಿದೆ. ಫೋನ್ ಬೆಲೆ ರೂ 11.990 ಆಗಿದೆ.


Click it and Unblock the Notifications








