Subscribe to Gizbot

ಕ್ಯಾನ್‌ವಾಸ್ ನಿಟ್ರೋ A311 ರೂ 13,574 ಕ್ಕೆ

Written By:

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A311 ಅನ್ನು ಕಂಪೆನಿ ಅಧಿಕೃತವಾಗಿ ತನ್ನ ಕಂಪೆನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದ್ದು, ಇದು ಆದಷ್ಟು ಬೇಗನೇ ರೀಟೈಲ್ ತಾಣಕ್ಕೆ ಬರಲಿದೆ. ಕ್ಯಾನ್‌ವಾಸ್ ನಿಟ್ರೋದ ಹೊಸ ಆವೃತ್ತಿ A310 ಸ್ಮಾರ್ಟ್‌ಫೋನ್ ಇದೀಗ ರೂ 13,574 ಕ್ಕೆ ಲಭ್ಯವಿದೆ.

ಇದನ್ನೂ ಓದಿ: ಬ್ಲ್ಯೂಟೂತ್‌ನಲ್ಲಿ ಫೋನ್ ಸಂಪರ್ಕಗಳನ್ನು ಉಳಿಸುವುದು ಹೇಗೆ?

ಕಳೆದ ವಾರ, ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A311 ಕಂಪೆನಿಯ ಸೈಟ್‌ನಲ್ಲಿ ಬೆಲೆ ಮತ್ತು ಇತ ವರದಿಗಳಿಲ್ಲದೆ ಪಟ್ಟಿ ಮಾಡಿದೆ. ಮೈಕ್ರೋಮ್ಯಾಕ್ಸ್ ಸಪ್ಟೆಂಬರ್‌ನಲ್ಲಿ ಕ್ಯಾನ್‌ವಾಸ್ ನಿಟ್ರೋ A310 ಅನ್ನು ಭಾರತದಲ್ಲಿ ರೂ 12,900 ಕ್ಕೆ ಸ್ನ್ಯಾಪ್‌ಡೀಲ್ ಮೂಲಕ ಲಭ್ಯವಾಗುತ್ತಿದೆ. ಇನ್ನು ಕ್ಯಾನ್‌ವಾಸ್ ನಿಟ್ರೋ A311 ಅನ್ನು ಇದೇ ಬೆಲೆಯಲ್ಲಿ ನಮಗೆ ನಿರೀಕ್ಷಿಸಬಹುದಾಗಿದೆ.

ಮೈಕ್ರೋಮ್ಯಾಕ್ಸ್‌ನ ಹೊಸ ಲಾಂಚ್ ರೂ 13,574 ಕ್ಕೆ

ಕ್ಯಾನ್‌ವಾಸ್ ನಿಟ್ರೋ A310 ಹಾಗೂ ಕ್ಯಾನ್‌ವಾಸ್ ನಿಟ್ರೋ A311 ನಡುವೆ ಇರುವ ವ್ಯತ್ಯಾಸವೆಂದರೆ 16 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಮೂಲ ಕ್ಯಾನ್‌ವಾಸ್ ನಿಟ್ರೋ (A310) ನ ವಿಶೇಷತೆಗಳು ಒಂದೇ ಆಗಿದೆ.

ಡ್ಯುಯಲ್ ಸಿಮ್ ಕ್ಯಾನ್‌ವಾಸ್ ನಿಟ್ರೋ (A311) ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಅನ್ನು ಒಳಗೊಂಡಿದ್ದು, ಇದು 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಓಲಿಯೊಫೋಬಿಕ್ ಕೋಟಿಂಗ್ ಅನ್ನು ಪಡೆದುಕೊಂಡಿದೆ. ಫಾಕ್ಸ್ ಲೆದರ್ ಪ್ಯಾನಲ್ ಜೊತೆಗೆ ಈ ಫೋನ್ ಬಂದಿದ್ದು ಆಕರ್ಷಕ ನೀಲಿ ಹಾಗೂ ಪ್ರಿಸ್ಟೀನ್ ಬಿಳಿ ಬಣ್ಣಗಳಲ್ಲಿ ಲಭ್ಯವಾಗುತ್ತಿದೆ.

ಕ್ಯಾನ್‌ವಾಸ್ ನಿಟ್ರೋ A310, ಕ್ಯಾನ್‌ವಾಸ್ ನಿಟ್ರೋ A311 1.7GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. ARM Mali 450 GPU ವನ್ನು ಡಿವೈಸ್ ಒಳಗೊಂಡಿದೆ. ಇದು 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದ್ದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದೆ. ಇದು ಸೋನಿಯ IMX135 CMOS ಸೆನ್ಸಾರ್ ಅನ್ನು ಪಡೆದುಕೊಂಡಿದ್ದು f/2.2 ಅಪಾರ್ಚರ್ ಇದರಲ್ಲಿದೆ. ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳೆಂದರೆ GPRS/ EDGE, 3ಜಿ, ವೈ-ಫೈ, ಮೈಕ್ರೋ-USB, GPS/ A-GPS, ಬ್ಲ್ಯೂಟೂತ್ 4.0, 3.5mm ಆಡಿಯೊ ಜಾಕ್, ಮತ್ತು ಎಫ್‌ಎಮ್ ರೇಡಿಯೊ ಇದೆ. ಕ್ಯಾನ್‌ವಾಸ್ ನಿಟ್ರೋ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದು. ಫೋನ್‌ನ ಬ್ಯಾಟರಿ 2500mAh ಆಗಿದೆ. ಇದು 10 ಗಂಟೆಗಳ ಟಾಕ್ ಟೈಮ್ ಸಮಯವನ್ನು ಒದಗಿಸುತ್ತಿದ್ದು, 320 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತಿದೆ.

English summary
This article tells about The Micromax Canvas Nitro A311, soon after being officially listed by the company, has gone on sale via an e-commerce website. The new variant of the Canvas Nitro A310 smartphone is now available to buy at Rs. 13,574.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot