ಮೈಕ್ರೋಮ್ಯಾಕ್ಸ್ ಹೊಸ ಟ್ಯಾಬ್ಲೆಟ್ ಕೊಡುಗೆ ಕನ್ನಡ ಭಾಷೆಗೂ

Written By:

ಮೈಕ್ರೋಮ್ಯಾಕ್ಸ್ 3 ಜಿ ಸಕ್ರಿಯಗೊಂಡಿರುವ ವಾಯ್ಸ್ ಕಾಲಿಂಗ್ ಕ್ಯಾನ್‌ವಾಸ್ ಟ್ಯಾಬ್ P470 ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರ ಬೆಲೆ ರೂ 6,999 ಎಂದು ಕಂಪೆನಿ ತಿಳಿಸಿದೆ. ಈಗಾಗಲೇ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿದ್ದು ಇದು ಸಿಲ್ವರ್ ಹಾಗೂ ಮಿಸ್ಟಿಕ್ ಗ್ರೇ ಬಣ್ಣದಲ್ಲಿ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಯೇ ಇಲ್ಲಿದೆ ಸಲಹೆ

ಡ್ಯುಯಲ್ ಸಿಮ್ ಇರುವ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P470, 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಶನ್ 1024x600 ಆಗಿದೆ. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದ್ದು ಡ್ಯುಯಲ್ ಕೋರ್ ಮೀಡಿಯಾ ಟೆಕ್ MT8312 ಪ್ರೊಸೆಸರ್ ಟ್ಯಾಬ್‌ನಲ್ಲಿದೆ. ಟ್ಯಾಬ್ RAM ಸಾಮರ್ಥ್ಯ 1ಜಿಬಿಯಾಗಿದೆ. ಇನ್ನು ರಿಯರ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 0.3 ಮೆಗಾಪಿಕ್ಸೆಲ್ ಆಗಿದೆ.

ಮೈಕ್ರೋಮ್ಯಾಕ್ಸ್ ಹೊಸ ಟ್ಯಾಬ್ಲೆಟ್ ಬೆಂಬಲ ಕನ್ನಡ ಭಾಷೆಗೂ

ಇನ್ನು ಟ್ಯಾಬ್‌ನ ಸಂಗ್ರಹಣಾ ಸಾಮರ್ಥ್ಯದತ್ತ ನೋಡುವುದಾದರೆ, 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ. ಟ್ಯಾಬ್‌ನಲ್ಲಿ 3200mAh ಬ್ಯಾಟರಿ ಇದ್ದು ಫೋನ್ 158 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ಒದಗಿಸಲಿದೆ.

ಕ್ಯಾನ್‌ವಾಸ್ ಟ್ಯಾಬ್ P470, 21 ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು, ಇದು ಕನ್ನಡ, ಹಿಂದಿ, ಗುಜರಾತಿ, ಮಲಯಾಳಮ್, ತಮಿಳು ಭಾಷೆಗೂ ಬೆಂಬಲ ನೀಡುತ್ತಿದೆ.

English summary
This article tells about Micromax Canvas Tab P470 Voice-Calling 3G Tablet Launched at Rs. 6,999.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot