Home
ಸುದ್ದಿಜಾಲ

ಭಾರತದಲ್ಲಿ ಮೈಕ್ರೊಮ್ಯಾಕ್ಸ್ 'ಇನ್‌' 1B ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಎಷ್ಟು?

ಬಹುನಿರೀಕ್ಷಿತ ಮೈಕ್ರೋಮ್ಯಾಕ್ಸ್‌ ಇನ್‌ ಸ್ಮಾರ್ಟ್‌ಫೋನ್‌ ಸರಣಿ ಭಾರತದಲ್ಲಿ ಬಿಡುಗಡೆ ಆಗಿದೆ. ಸದ್ಯ ಮೈಕ್ರೋಮ್ಯಾಕ್ಸ್‌ ಇನ್‌ ಸರಣಿಯಲ್ಲಿ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 1 ಮತ್ತು ಇನ್‌ 1B ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಾಗಿದೆ. ಈ ಎರಡೂ ಹೊಸ ಮೈಕ್ರೋಮ್ಯಾಕ್ಸ್ ಫೋನ್‌ಗಳು ಫ್ಲಿಪ್‌ಕಾರ್ಟ್ ಮತ್ತು ಮೈಕ್ರೋಮ್ಯಾಕ್ಸ್ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿರುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದ್ದು, ಹೊಸ ಮಾದರಿಯ ವಿನ್ಯಾಸವನ್ನು ಒಳಗೊಂಡಿವೆ.

ಮೈಕ್ರೋಮ್ಯಾಕ್ಸ್‌

ಹೌದು, ಮೈಕ್ರೋಮ್ಯಾಕ್ಸ್‌ ತನ್ನ ಇನ್‌ ಸರಣಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಇದರಲ್ಲಿ ಮೈಕ್ರೋಮ್ಯಾಕ್ಸ್‌ ಇನ್‌ 1B ಫೋನ್ ಬಜೆಟ್‌ ಪ್ರೈಸ್‌ ಟ್ಯಾಗ್ ನಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಮೈಕ್ರೋಮ್ಯಾಕ್ಸ್‌ ಇನ್‌ 1B ಸ್ಮಾರ್ಟ್‌ಫೋನ್‌ 720 x 1560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ರಚನೆ ಅನುಪಾತ 19.5:9 ಆಗಿದ್ದು, 264PPI ಸಾಂದ್ರತೆಯನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2GBRAM+32GB, ಮತ್ತು 4GB RAM+64GB, ವೇರಿಯೆಂಟ್‌ ಆಯ್ಕೆಯ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಮೈಕ್ರೋಮ್ಯಾಕ್ಸ್‌ ಇನ್‌ 1B ಸ್ಮಾರ್ಟ್‌ಫೊನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ವೈಡ್‌ ಆಂಗಲ್‌ ಲೆನ್ಸ್‌, ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್ ಡೆಪ್ತ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇದು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 10W ವೇಗದ ಚಾರ್ಜಿಂಗ್ ಮತ್ತು ರಿವರ್ಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, ಜಿಪಿಎಸ್ , ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ಇನ್ನು ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಮೈಕ್ರೊಮ್ಯಾಕ್ಸ್ ಇನ್ 1B ಸ್ಮಾರ್ಟ್‌ಫೋನ್‌ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ 6,999 ರೂ., ಇದರ 4GB RAM + 64GB ಸ್ಟೋರೇಜ್ ಆವೃತ್ತಿಯ ಬೆಲೆ 7,999 ರೂ. ಆಗಿದೆ. ಇನ್ನು ಮೈಕ್ರೊಮ್ಯಾಕ್ಸ್ ಇನ್ 1B ಮೂರು ವಿಭಿನ್ನ ಬಣ್ಣ ಆಯ್ಕೆಗಳನ್ನು ಹೊಂದಿದೆ ಮತ್ತು ನವೆಂಬರ್ 26 ರಿಂದ ಲಭ್ಯವಿರುತ್ತದೆ.

Best Mobiles in India

English summary
Micromax In 1b runs on Android 10 and features a 6.52-inch HD+ display with a waterdrop-style notch.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+