ಬಹುನಿರೀಕ್ಷಿತ ಮೈಕ್ರೋಮ್ಯಾಕ್ಸ್ 'ಇನ್' ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ!
ದೇಶಿ ಸ್ಮಾರ್ಟ್‌ಫೋನ್ ಕಂಪೆನಿ ಮೈಕ್ರೊಮ್ಯಾಕ್ಸ್ ತನ್ನ ಬಹುನಿರೀಕ್ಷಿತ ಮೈಕ್ರೊಮ್ಯಾಕ್ಸ್ ಇನ್ ಸ್ಮಾರ್ಟ್‌ಫೋನ್ ಸರಣಿಯನ್ನ ಲಾಂಚ್ ಮಾಡಿದೆ. ಈ ಮೂಲಕ ಭಾರತದಲ್ಲಿ ಮತ್ತೊಮ್ಮೆ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ. ಸದ್ಯ ತನ್ನ ಹೊಸ ಇನ್ ಸರಣಿಯಲ್ಲಿ ಮೈಕ್ರೊಮ್ಯಾಕ್ಸ್ ಇನ್ ನೋಟ್ 1 ಮತ್ತು ಇನ್ 1B ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇನ್ನು ಮೈಕ್ರೊಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್ ಹೊಂದಿದ್ದು, ಮೈಕ್ರೋಮ್ಯಾಕ್ಸ್ ಇನ್ 1B ಮೀಡಿಯಾಟೆಕ್ ಹಿಲಿಯೊ G35 SoC ಪ್ರೊಸೆಸರ್ ಅನ್ನು ಹೊಂದಿದೆ.

ಹೌದು, ಮೈಕ್ರೊಮ್ಯಾಕ್ಸ್ ಕಂಪೆನಿ ತನ್ನ ಮೈಕ್ರೊಮ್ಯಾಕ್ಸ್ ಇನ್ ಸ್ಮಾರ್ಟ್‌ಫೋನ್ ಸರಣಿಯನ್ನ ಬಿಡುಗಡೆ ಮಾಡಿದೆ. ಇನ್ನು ಮೈಕ್ರೋಮ್ಯಾಕ್ಸ್ ಇನ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇನ್ 1B ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಎರಡೂ ಹೊಸ ಮೈಕ್ರೋಮ್ಯಾಕ್ಸ್ ಫೋನ್‌ಗಳು ಫ್ಲಿಪ್‌ಕಾರ್ಟ್ ಮತ್ತು ಮೈಕ್ರೋಮ್ಯಾಕ್ಸ್ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿರುತ್ತವೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ವಿಶೇಷತೆ
ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಸ್ಮಾರ್ಟ್‌ಫೋನ್ 6.67-ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಪಂಚ್‌ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇನ್ನು ಮೈಕ್ರೋಮ್ಯಾಕ್ಸ್ ಇನ್ 1B ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ವಾಟರ್ ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.

ಪ್ರೊಸೆಸರ್ ಬಲ ಏನು?
ಮೈಕ್ರೋಮ್ಯಾಕ್ಸ್ ಇನ್ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು ಎರಡು ಚಿಪ್‌ಸೆಟ್ ಅನ್ನು ಹೊಂದಿವೆ. ಇದರಲ್ಲಿ ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB, 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. ಇನ್ನು ಇನ್ 1B ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ G35 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಕೂಡ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 2GB RAM ಮತ್ತು 32 GB ಸ್ಟೋರೇಜ್ ಹಾಗೂ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ
ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ , ಮೂರು ಮತ್ತು ನಾಲ್ಕನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಮೈಕ್ರೋಮ್ಯಾಕ್ಸ್ ಇನ್ 1B ಸ್ಮಾರ್ಟ್‌ಫೋನ್ ಡ್ಯಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನಿಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಮೈಕ್ರೋಮ್ಯಾಕ್ಸ್ ಇನ್ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಪಡೆದುಕೊಂಡಿವೆ. ಇದರಲ್ಲಿ ಇನ್ ನೋಟ್ 1 ಫೋನ್ 18W ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗೇಯೇ ಇನ್ 1B ಸ್ಮಾರ್ಟ್‌ಫೋನ್ 10W ಸ್ಟ್ಯಾಂಡರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ಬ್ಲೂಟೂತ್, ವೈಫೈ, ಜಿಪಿಎಸ್ ಅನ್ನು ಬೆಂಬಲಿಸಲಿವೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಬೆಲೆ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂಗಳಿದ್ದರೆ, ಫೋನ್‌ನ 4GB RAM + 128GB ಸ್ಟೋರೇಜ್ ಮಾದರಿಯ ಬೆಲೆ ರೂ. 12,499. ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮೈಕ್ರೊಮ್ಯಾಕ್ಸ್ ಇನ್ 1B ಸ್ಮಾರ್ಟ್‌ಫೋನ್ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ 6,999 ರೂ., ಇದರ 4GB RAM + 64GB ಸ್ಟೋರೇಜ್ ಆವೃತ್ತಿಯ ಬೆಲೆ 7,999 ರೂ. ಆಗಿದೆ. ಇನ್ನು ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಗ್ರೀನ್ ಅಂಡ್ ವೈಟ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಇದು ನವೆಂಬರ್ 24 ರಿಂದ ಮಾರಾಟವಾಗಲಿದೆ. ಆದಾಗ್ಯೂ, ಮೈಕ್ರೊಮ್ಯಾಕ್ಸ್ ಇನ್ 1 ಬಿ ಮೂರು ವಿಭಿನ್ನ ಬಣ್ಣ ಆಯ್ಕೆಗಳನ್ನು ಹೊಂದಿದೆ ಮತ್ತು ನವೆಂಬರ್ 26 ರಿಂದ ಲಭ್ಯವಿರುತ್ತದೆ.


Click it and Unblock the Notifications





