ದೇಶಿ ಮಾರುಕಟ್ಟೆಯಲ್ಲಿ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಲಾಂಚ್‌!

|

ದೇಶ ಸ್ಮಾರ್ಟ್‌ಫೋನ್‌ ಕಂಪೆನಿ ಮೈಕ್ರೋಮ್ಯಾಕ್ಸ್‌ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಮೈಕ್ರೋಮ್ಯಾಕ್ಸ್‌

ಹೌದು, ಮೈಕ್ರೋಮ್ಯಾಕ್ಸ್‌ ಕಂಪೆನಿ ಭಾರತದಲ್ಲಿ ಹೊಸ ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ಆಕ್ಟಾ-ಕೋರ್‌ ಮೀಡಿಯಾಟೆಕ್‌ ಹಿಲಿಯೋ G95 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 410 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ. ಇದು 60Hz ರಿಪ್ರೇಶ್‌ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G95 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11 ಸಾಫ್ಟ್‌ವೇರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ GM1 ಐಸೋಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮರಾ ಅಪ್ಲಿಕೇಶನ್‌ನಲ್ಲಿ ನೈಟ್‌ ಮೋಡ್ ಮತ್ತು AI ಮೋಡ್‌ ಫೀಚರ್ಸ್‌ಗಳನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದು 25 ನಿಮಿಷಗಳಲ್ಲಿ 50% ಚಾರ್ಜಿಂಗ್‌ ಮಾಡಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ತನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಲೋನ್ಸಮ್ ರೂಪಾಂತರಕ್ಕೆ 12,490ರೂ.ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಕಂದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರ ಮೊದಲ ಸೇಲ್‌ ಫ್ಲಿಪ್‌ಕಾರ್ಟ್‌ನಲ್ಲಿ ಜನವರಿ 30 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ಸೀಮಿತ ಅವಧಿಯ ತನಕ 12,490.ರೂ ಬೆಲೆಗೆ ಲಭ್ಯವಾಗಲಿದೆ.

Best Mobiles in India

English summary
Micromax In Note 2 is powered by an octa-core MediaTek Helio G95 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X