ಸದ್ಯದಲ್ಲೇ ಬರಲಿದೆ ಮೈಕ್ರೋಮ್ಯಾಕ್ಸ್‌ 'ಇನ್‌' ಸ್ಮಾರ್ಟ್‌ಫೋನ್‌ ಸರಣಿ!

|

ಗುರುಗ್ರಾಮ್ ಮೂಲದ ಟೆಕ್ ಕಂಪನಿ ಮೈಕ್ರೋಮ್ಯಾಕ್ಸ್ ಕಂಪೆನಿ ಶೀಘ್ರದಲ್ಲೇ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಕಂಪನಿಯು ತನ್ನ ಮುಂಬರುವ ಸ್ಮಾರ್ಟ್‌ಫೋನ್ ಶ್ರೇಣಿಯ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಸುಮಾರು 2 ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಲಬ್ಯವಿರುವ ಮಾಹಿತಿ ಪ್ರಕಾರ ಇದು N ಸರಣಿಯಲ್ಲಿ ಬರುವ ಸ್ಮಾರ್ಟ್‌ಫೋನ್‌ ಆಗಿದೆ ಎಂದು ನಿರೀಕ್ಷಿಸಲಾಗಿದೆ.

ಮೈಕ್ರೋಮ್ಯಾಕ್ಸ್

ಹೌದು, ದೇಶಿ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್ ತನ್ನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ವೇದಿಕೆ ಸಿದ್ದ ಪಡಿಸಿಕೊಂಡಿದೆ. ಈಗಾಗಲೇ ಚೀನಾ ಸ್ಮಾರ್ಟ್‌ಫೋನ್‌ಗಳ ಬಾಯ್ಕಾಟ್‌ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಹೊಸ ವಿನ್ಯಾಸದ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆತ್ಮನಿರ್ಭರ ಭಾರತ್‌ ಅಭಿಯಾನದಲ್ಲಿ ಬರಲಿರುವ ಸ್ಮಾರ್ಟ್‌ಫೋನ್‌ ಆಗಿದ್ದು, ಮೈಕ್ರೋಮ್ಯಾಕ್ಸ್ ಇಂಡಿಯಾ ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ‘ಇನ್' ಆಗಲಿದೆ ಎನ್ನಲಾಗಿದೆ.

ಮೈಕ್ರೋಮ್ಯಾಕ್ಸ್‌

ಸದ್ಯ ವೀಡಿಯೊದಲ್ಲಿ ಮೈಕ್ರೋಮ್ಯಾಕ್ಸ್‌ ಕಂಪನಿ ಮುಂಬರುವ ಸ್ಮಾರ್ಟ್ಫೋನ್ ಸರಣಿಯ ಪೆಟ್ಟಿಗೆಯನ್ನು ಸಹ ಹಂಚಿಕೊಂಡಿದೆ. ಇದು ನೀಲಿ ಬಣ್ಣದ ಬಾಕ್ಸ್-ಜೊತೆಗೆ ‘ಇನ್' ಎಂದು ಬರೆಯಲಾಗಿದೆ. ಇದು ಕಂಪನಿಯು ಭಾರತದಲ್ಲಿ ಹೊಸ ಇನ್-ಸೀರೀಸ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ಸೂಚಿಸುತ್ತದೆ. ಲಭ್ಯ ಮಾಹಿತಿ ಪ್ರಕಾರ, ಮೈಕ್ರೋಮ್ಯಾಕ್ಸ್‌ನ ಇನ್-ಸೀರೀಸ್ ಸ್ಮಾರ್ಟ್‌ಫೋನ್‌ಗಳು 7,000ರೂ ಮತ್ತು 15,000ರೂ ವ್ಯಾಪ್ತಿಯಲ್ಲಿ ಲಭ್ಯವಾಗುವ ನಿರೀಕ್ಷೆಯನ್ನು ಇಡಲಾಗಿದೆ.

ಸ್ಮಾರ್ಟ್‌ಫೋನ್‌ಗಳು

ಇನ್ನು ಈ ಸ್ಮಾರ್ಟ್‌ಫೋನ್‌ಗಳು ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ನವೆಂಬರ್ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಮೈಕ್ರೋಮ್ಯಾಕ್ಸ್‌ ಕಂಪನಿಯು ತನ್ನ ಮುಂಬರುವ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಮೈಕ್ರೊಮ್ಯಾಕ್ಸ್ ಇನ್ 1A ಸ್ಮಾರ್ಟ್‌ಫೋನ್‌ ಒಂದಾಗಿರಲಿದ್ದು, ಇದು ಮೀಡಿಯಾ ಟೆಕ್ ಹೆಲಿಯೊ P35 ಅಥವಾ G35 ಚಿಪ್‌ಸೆಟ್, 4GB RAM ಮತ್ತು ಆಂಡ್ರಾಯ್ಡ್ 10 ಅನ್ನು ಪ್ಯಾಕ್ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಮೈಕ್ರೊಮ್ಯಾಕ್ಸ್

ಹಾಗೇ ನೋಡಿದರೆ ಮೈಕ್ರೊಮ್ಯಾಕ್ಸ್ ದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆದರೆ ಭಾರತೀಯ ಫೋನ್ ಮಾರುಕಟ್ಟೆಗೆ ಚೀನಾ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಿದ ನಂತರ ಮೈಕ್ರೋಮ್ಯಾಕ್ಸ್‌ ತ್ರೀವ ಸ್ಪರ್ಧೆಯನ್ನು ಎದುರಿಸಿ ಸೈಡ್‌ಲೈನ್‌ ಆಗಿತ್ತು. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ, ಮತ್ತು ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ. ಆತ್ಮನಿರ್ಭರ್‌ ಭಾರತ್‌ ಅಭಿಯಾನದಲ್ಲಿ ಈ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಬರುವುದರಿಂದ ಸ್ಮಾರ್ಟ್‌ಫೋನ್‌ ಉದ್ಯಮದಲ್ಲಿ ಮೈಕ್ರೋಮ್ಯಾಕ್ಸ್‌ ಮತ್ತೆ ಪುಟಿದೆಳಲಿದೆಯಾ ಅನ್ನೊದನ್ನ ಕಾದು ನೋಡಬೇಕಿದೆ.

Most Read Articles
Best Mobiles in India

Read more about:
English summary
Gurugram-based tech company Micromax is gearing for a major launch in India. The company is planning to launch a new smartphone series in India soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X