ಮೈಕ್ರೋಮ್ಯಾಕ್ಸ್ ಇನ್ 2b ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಹೆಚ್ಚಳ!

|

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆ ಆಗಿದ್ದ ಮೈಕ್ರೋಮ್ಯಾಕ್ಸ್ ಇನ್ 2b ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಡೀರ್‌ ಏರಿಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು 500ರೂ, ಗಳಷ್ಟು ಏರಿಕೆಯನ್ನು ಮಾಡಲಾಗಿದೆ. 4GB RAM + 64GB ವೇರಿಯೆಂಟ್‌ ಆಯ್ಕೆಗೆ 7,999ರೂ ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಬೆಲೆ ಏರಿಕೆ ನಂತರ 8,499ರೂ,ಗೆ ಲಭ್ಯವಾಗಲಿದೆ. ಹಾಗೆಯೇ 6GB RAM + 64GB ವೆರಿಯೆಂಟ್ ಆಯ್ಕೆ ಇದೀಗ 9,499ರೂ,ಬೆಲೆಯಲ್ಲಿ ಲಭ್ಯವಾಗಲಿದೆ.

ಮೈಕ್ರೋಮ್ಯಾಕ್ಸ್‌

ಹೌದು, ಮೈಕ್ರೋಮ್ಯಾಕ್ಸ್‌ ಇನ್ 2b ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 500ರೂ,ಗಳಷ್ಟು ಏರಿಕೆ ಆಗಿದೆ. ಆದರೂ ಈಗಲೂ ಭಾರತದಲ್ಲಿ ಲಭ್ಯವಿರುವ 6GB RAM ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್ ಇದಾಗಿದೆ. ಇನ್ನು ಮೈಕ್ರೋಮ್ಯಾಕ್ಸ್‌ ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಸದ್ಯ ಬೆಲೆ ಏರಿಕೆ ಕಂಡಿರುವ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

ಮೈಕ್ರೊಮ್ಯಾಕ್ಸ್ ಇನ್‌ 2b ಸ್ಮಾರ್ಟ್‌ಫೋನ್‌ 6.52-ಇಂಚಿನ HD+ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 400 ನಿಟ್ಸ್ ಬ್ರೈಟ್ನೆಸ್, 89% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 20:9 ರಚನಯೆ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಸ್ಮಾರ್ಟ್‌ಫೋನ್ ಯುನಿಸಾಕ್ ಟಿ 610 ಆಕ್ಟಾ-ಕೋರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.ಹಾಗೆಯೇ 4GB RAM + 64GB ಮತ್ತು 6GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಮೈಕ್ರೊಮ್ಯಾಕ್ಸ್ ಇನ್ 2 ಬಿ ಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ನೈಟ್ ಮೋಡ್, ಹಿನ್ನೆಲೆ ಭಾವಚಿತ್ರ, ಸೌಂದರ್ಯ ಮೋಡ್, ಚಲನೆಯ ಫೋಟೋ, ಪ್ಲೇ ಮತ್ತು ವಿರಾಮ ವೀಡಿಯೊ ಶೂಟ್, ಮತ್ತು ಫುಲ್‌ ಹೆಚ್‌ಡಿ ಫ್ರಂಟ್ ಮತ್ತು ಬ್ಯಾಕ್ ರೆಕಾರ್ಡಿಂಗ್ ಸೇರಿವೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಮೈಕ್ರೋಮ್ಯಾಕ್ಸ್ ಇನ್‌ 2 ಬಿ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವೀಡಿಯೊ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ಟೈಮ್ ಅನ್ನು ನೀಡುತ್ತದೆ ಎಂದು ಹೇಳುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ VoWiFi, ಡ್ಯುಯಲ್ VoLTE, Wi-Fi 802.11 ac, ಬ್ಲೂಟೂತ್ v5, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೈಕ್ರೋಮ್ಯಾಕ್ಸ್ ಇನ್ 2ಬಿ ಬೆಲೆ ಏರಿಕೆ ಆದ ನಂತರ 4GB RAM + 64GB ಶೇಖರಣಾ ಆಯ್ಕೆಗೆ 7,999ರೂ ಬದಲಿಗೆ 8,499ರೂ,ಬೆಲೆ ಹೊಂದಿದೆ. ಇನ್ನು 6GB + 64GB ಸ್ಟೋರೇಜ್ ಮಾದರಿ 8,999.ರೂ ಬದಲಿಗೆ 9,499 ರೂ, ಬೆಲೆ ಹೊಂದಿದೆ. ಇದು ಕಪ್ಪು, ನೀಲಿ ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

Best Mobiles in India

English summary
Micromax In 2b which was launched at a starting price of Rs 7,999 for the 4GB+64GB will now cost Rs 8,499.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X