Home
ಸುದ್ದಿಜಾಲ

1 ರೂ.ಗೆ ಸ್ಮಾರ್ಟ್‌ಫೋನ್ ನೀಡುತ್ತಂತೆ ಮೈಕ್ರೋಮ್ಯಾಕ್ಸ್‌ ..!

By Avinash

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಬಿರುಸಾಗುತ್ತಿದೆ. ಶಿಯೋಮಿ, ಒಪ್ಪೋ, ವಿವೋ , ಸ್ಯಾಮ್‌ಸಂಗ್‌ನಂತಹ ಸ್ಮಾರ್ಟ್‌ಫೋನ್ ತಯಾರಕರು ಅಗ್ಗದ ದರದಲ್ಲಿ ದಿನಕ್ಕೊಂದು ಮೊಬೈಲ್ ಬಿಡುಗಡೆ ಮಾಡುತ್ತಿದ್ದಾರೆ. ಅದೇ ರೀತಿ ಎದುರಾಳಿಗಳಿಗೆ ಹೊಸ ಹೊಸ ಯೋಜನೆಗಳಿಂದ ನಿದ್ದೆಗೆಡಿಸುತ್ತಿದ್ದಾರೆ. ಕಳೆದ ವರ್ಷ 251 ರೂ.ಗೆ ಫ್ರೀಡಂ 251 ಎಂಬ ಸ್ಮಾರ್ಟ್‌ಫೋನ್ ಕಥೆ ನಿಮಗೆಲ್ಲಾ ಗೊತ್ತಿರುತ್ತೆ. ಯಾವುದೋ ಹೊಸ ಕಂಪನಿ ಆ ರೀತಿ ಘೋಷಣೆ ಮಾಡಿ ಸ್ಮಾರ್ಟ್‌ಫೋನ್‌ಗಳನ್ನು ಇನ್ನು ಬಿಡುಗಡೆ ಮಾಡಿಲ್ಲ.

1 ರೂ.ಗೆ ಸ್ಮಾರ್ಟ್‌ಫೋನ್ ನೀಡುತ್ತಂತೆ ಮೈಕ್ರೋಮ್ಯಾಕ್ಸ್‌ ..!

ಆದರೆ, ಈಗ ಅದೇ ರೀತಿಯ ಸುದ್ದಿಯನ್ನು ಭಾರತದ ಪ್ರಖ್ಯಾತ ಸ್ಮಾರ್ಟ್‌ಫೋನ್ ಕಂಪನಿ ಮೈಕ್ರೋಮ್ಯಾಕ್ಸ್‌ ಹೊರಹಾಕಿದೆ. ಮೈಕ್ರೋಮ್ಯಾಕ್ಸ್‌ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಟೀಸರ್ ಒಂದನ್ನು ಬಿಡುಗಡೆ ಮಾಡಿ ಕೇವಲ 1 ರೂ.ಗೆ ಸ್ಮಾರ್ಟ್‌ಫೋನ್ ನೀಡುತ್ತೇವೆ ಎಂದು ಘೋಷಿಸಿರುವುದು ಸ್ಮಾರ್ಟ್‌ಫೋನ್‌ ಲೋಕದಲ್ಲಿ ಹಲವು ಅಚ್ಚರಿಗೆ ಕಾರಣವಾಗಿದೆ.

ವಿಡಿಯೋ ಟೀಸರ್‌

ವಿಡಿಯೋ ಟೀಸರ್‌

ಮೈಕ್ರೋಮ್ಯಾಕ್ಸ್‌ ಕಂಪನಿ ತನ್ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಜುಲೈ 5 ರಂದು ಪೋಸ್ಟ್‌ ಮಾಡಿರುವ 8 ಸೆಕೆಂಡ್ ವಿಡಿಯೋದಲ್ಲಿ ಅತಿ ಕಡಿಮೆ ಅಂದರೆ ಕೇವಲ 1 ರೂ.ಗೆ ಹೊಸ ಸ್ಮಾರ್ಟ್‌ಫೋನ್ ನೀಡುವುದನ್ನು ಘೋಷಿಸಿದ್ದು, ಭಾಗಶಃ ಉಚಿತ ಸ್ಮಾರ್ಟ್‌ಫೋನ್ ಅತಿ ಶೀಘ್ರದಲ್ಲಿ ಬರಲಿದೆ ಎಂದು ತಿಳಿಸಿದೆ.

ಟೀಸರ್‌ನಲ್ಲಿ ಏನೀದೆ?

ಟೀಸರ್‌ನಲ್ಲಿ ಏನೀದೆ?

ಟೀಸರ್‌ ಪೋಸ್ಟ್‌ ಂಆಡಿರುವ ಮೈಕ್ರೋಮ್ಯಾಕ್ಸ್‌ ಹಲೋ ಚೆನ್ನೈ, ಬಿಗ್ ನ್ಯೂಸ್, ನಾವು 1 ರೂ.ಗೆ ಸ್ಮಾರ್ಟ್‌ಫೋನ್ ಘೋಷಣೆ ಮಾಡುತ್ತಿದ್ದು, ತೆಗೆದುಕೊಳ್ಳುವುದಕ್ಕೆ ತಯಾರಾಗಿದ್ದಿರಾ? ಎಂದು ಬರೆದುಕೊಂಡಿದೆ. ಟೀಸರ್ ಪ್ರಕಾರ ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ 1 ರೂ.ಗೆ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್ ಲಾಂಚ್ ಮಾಡಬಹುದು.

1 ರೂ.ಗೆ ಸ್ಮಾರ್ಟ್‌ಫೋನ್ ಬರುತ್ತಾ.?

1 ರೂ.ಗೆ ಸ್ಮಾರ್ಟ್‌ಫೋನ್ ಬರುತ್ತಾ.?

ಮೈಕ್ರೋಮ್ಯಾಕ್ಸ್‌ ತನ್ನ ಟೀಸರ್‌ನಲ್ಲಿ ಘೋಷಿಸಿರುವಂತೆ ಸ್ಮಾರ್ಟ್‌ಫೋನ್‌ನ್ನು 1ರೂ.ಗೆ ನೀಡುತ್ತಾ ಎನ್ನುವುದು ಎಲ್ಲರ ಪ್ರಶ್ನೆ. ಆದರೆ, 2016ರಲ್ಲಿ 1500 ರೂ. ಠೇವಣಿಯೊಂದಿಗೆ ಜಿಯೋಫೋನ್‌ ಹೊರಬಂದಿತ್ತು, ಮೂರು ವರ್ಷದ ನಂತರ ಠೇವಣಿ ಹಿಂತಿರುಗಿಸುವ ಯೋಜನೆಯೊಂದಿಗೆ ಜಿಯೋಫೋನ್ ಕೂಡ ಉಚಿತ ಎಂದು ಘೋಷಿಸಿಕೊಂಡಿತ್ತು. ಇಲ್ಲೂ ಅದೇ ರೀತಿಯ ತಂತ್ರಗಾರಿಕೆಯನ್ನು ಮೈಕ್ರೋಮ್ಯಾಕ್ಸ್‌ ಮಾಡಿದಿಯಾ ಎಂಬುದೆ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ.

ನಿಜ ಹೌದಂತೆ..!

ನಿಜ ಹೌದಂತೆ..!

ಕೆಲವು ಮೂಲಗಳ ಪ್ರಕಾರ ಮೈಕ್ರೋಮ್ಯಾಕ್ಸ್‌ ಘೋಷಿಸಿರುವ ಘೋಷಣೆ ನಿಜ ಎಂದು ಹೇಳಲಾಗುತ್ತಿದೆ. ಕೆಲವೇ ಕೆಲವು ಸಂಖ್ಯೆಯಲ್ಲಿ 1 ರೂ.ಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಅಧಿಕೃತ ಮಾಹಿತಿ ಹೊರಬಿಳುವವರೆಗೂ ಯಾವುದೇ ನಿರ್ಧಾರಕ್ಕೆ ಬರುವಂಗಿಲ್ಲ.

ಹಿಂಗೂ ಇರಬಹುದು..!

ಹಿಂಗೂ ಇರಬಹುದು..!

ಕ್ಯಾನ್ವಾಸ್ ಪ್ಲಸ್ 2 ಮತ್ತು ಭಾರತ್ 5 ಪ್ರೋ ಸ್ಮಾರ್ಟ್‌ಫೋನ್‌ಗಳು ಮೈಕ್ರೋಮ್ಯಾಕ್ಸ್‌ನ ಘೋಷಣೆಗೊಳಪಡುವ ಸಾಧ್ಯತೆ ಇದೆ. ಕ್ಯಾನ್ವಾಸ್‌ ಪ್ಲಸ್‌ 2 ಸ್ಮಾರ್ಟ್‌ಫೋನ್ 8,991 ರೂ. ಹಾಗೂ ಭಾರತ್‌ 5 ಪ್ರೋ 7,992 ರೂ. ಬೆಲೆ ಹೊಂದಿದ್ದು, ಕೇವಲ 1 ರೂ. ಡೌನ್‌ಪೇಮೆಂಟ್ ಮತ್ತು 999 ಇಎಂಐ ಆಫರ್ ನೀಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಇದೇ ಯೋಜನೆಯನ್ನು ಜನರಲ್ಲಿ ಹೈಪ್ ಸೃಷ್ಟಿಸಲು ಮೈಕ್ರೋಮ್ಯಾಕ್ಸ್‌ 1 ರೂ.ಗೆ ಸ್ಮಾರ್ಟ್‌ಫೋನ್ ತಂತ್ರಗಾರಿಕೆಯನ್ನು ಕಂಡುಕೊಂಡಿರಬಹುದು.

Best Mobiles in India

English summary
Micromax India to launch a smartphone for just Rs 1. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+