ದೇಶಿ ಬ್ರ್ಯಾಂಡ್‌ ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಹೊಸ ಬಜೆಟ್ ಸ್ಮಾರ್ಟ್‌ಫೋನ್!

|

ದೇಶಿ ಸ್ಮಾರ್ಟ್‌ಫೋನ್‌ ತಯಾರಕ ಮೈಕ್ರೋಮ್ಯಾಕ್ಸ್ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಸದ್ದು ಮಾಡುತ್ತಿದೆ. ಚೀನಾ ಸ್ಮಾರ್ಟ್‌ಫೋನ್‌ಗಳ ಅಬ್ಬರದ ನಡುವೆ ಕಳೆದು ಹೋಗಿದ್ದ ಮೈಕ್ರೋಮ್ಯಾಕ್ಸ್‌ ಆತ್ಮ ನಿರ್ಭರ್‌ ಭಾರತ್‌ ಅಭಿಯಾನದಡಿಯಲ್ಲಿ ಮತ್ತೆ ಸಂಚಲನ ಸೃಷ್ಟಿಸುತ್ತಿದೆ. ಸದ್ಯ ಇದೀಗ ಭಾರತದಲ್ಲಿ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಮೈಕ್ರೋಮ್ಯಾಕ್ಸ್

ಹೌದು, ಮೈಕ್ರೋಮ್ಯಾಕ್ಸ್‌ ಸಂಸ್ಥೆ ಭಾರತದಲ್ಲಿ ಮೈಕ್ರೊಮ್ಯಾಕ್ಸ್ ಇನ್ 1 ಎಂದು ಕರೆಯಲ್ಪಡುವ ಮತ್ತೊಂದು ಇನ್ ಸರಣಿ ಡಿವೈಸ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಳೆದ ವರ್ಷಾಂತ್ಯದಲ್ಲಿ ಮೈಕ್ರೋಮ್ಯಾಕ್ಸ್ ಇನ್ 1B ಮತ್ತು ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಮೂಲಕ ಭಾರತೀಯ ಮಾರುಕಟ್ಟೆಗೆ ರೀ ಎಂಟ್ರಿ ನೀಡಿತ್ತು. ಇದೀಗ ಮತ್ತೇ ಅಂತಹದ್ದೇ ಸಂಚಲನ ಸೃಷ್ಟಿಸುತ್ತಾ ಅನ್ನುವ ನಿರೀಕ್ಷೆ ಸೃಷ್ಟಿಯಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಯಾವಾಗ ನಡೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಮ್ಯಾಕ್ಸ್ ಇನ್ 1

ಮೈಕ್ರೋಮ್ಯಾಕ್ಸ್ ಇನ್ 1 ರ ಆನ್‌ಲೈನ್ ಉಡಾವಣಾ ಕಾರ್ಯಕ್ರಮವನ್ನು ಮಾರ್ಚ್‌ 19 ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿದೆ. ಮೈಕ್ರೋಮ್ಯಾಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವರ್ಚುವಲ್ ಈವೆಂಟ್‌ನ ಲೈವ್‌ಸ್ಟ್ರೀಮ್ ಅನ್ನು ನೀವು ವೀಕ್ಷಿಸಬಹುದು. ಇನ್ನು ಈಗಾಗಲೇ ಮೈಕ್ರೊಮ್ಯಾಕ್ಸ್ ಇನ್ 1B ಮತ್ತು ಇನ್ ನೋಟ್ 1 ಅನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸತ್ತು. ಇವುಗಳ ಬೆಲೆ ಕ್ರಮವಾಗಿ 6,999 ಮತ್ತು 10,999 ರೂ.ಆಗಿದೆ. ಆದರೆ ಮುಂಬರುವ ಮೈಕ್ರೋಮ್ಯಾಕ್ಸ್ ಇನ್ 1 ಸಹ ಬಜೆಟ್ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಇದರ ಬೆಲೆ 12,000 ರೂ. ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಮೈಕ್ರೊಮ್ಯಾಕ್ಸ್ ಇನ್‌ 1

ಇದಲ್ಲದೆ ಮೈಕ್ರೊಮ್ಯಾಕ್ಸ್ ಇನ್‌ 1 ಎಂದು ಹೆಸರಿಸಿರುವುದರಿಂದ ಈ ಸ್ಮಾರ್ಟ್‌ಫೋನ್‌ ಮೈಕ್ರೋಮ್ಯಾಕ್ಸ್‌ ಇನ್ 1B ಯ ಮುಂದುವರೆದ ಆವೃತ್ತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಮೈಕ್ರೊಮ್ಯಾಕ್ಸ್ ಇನ್ 1B 720 × 1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದ 6.52-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಮೈಕ್ರೋಮ್ಯಾಕ್ಸ್‌ ಇನ್‌ 1B

ಇನ್ನು ಮೈಕ್ರೋಮ್ಯಾಕ್ಸ್‌ ಇನ್‌ 1B ಸ್ಮಾರ್ಟ್‌ಫೊನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ವೈಡ್‌ ಆಂಗಲ್‌ ಲೆನ್ಸ್‌, ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್ ಡೆಪ್ತ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದೆ ಕಾರಣಕ್ಕೆ ಮೈಕ್ರೋಮ್ಯಾಕ್ಸ್ ಇನ್‌ 1 ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹೇಗಿರಲಿದೆ ಎಂಬ ಕುತೂಹಲ ಗರಿಗೆದರಿದೆ.

Best Mobiles in India

English summary
Micromax set to launch a new budget smartphone in India on March 19.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X