ಭಾರತದ ಅತ್ಯಂತ ಕಡಿಮೆ ಬೆಲೆಯ 4G ಪೋನ್ಗೆ ಗ್ರಾಹಕರು ಫಿದಾ!!

Written By:

ಭಾರತದ 4G ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಕಡಿಮೆಬೆಲೆ 4G ಸ್ಮಾರ್ಟ್‌ಫೋನ್‌ 'ಭಾರತ್ 2' ಬಿಡುಗಡೆ ಮಾಡಿದ್ದ ಮೈಕ್ರೊಮ್ಯಾಕ್ಸ್ ಕಂಪೆನಿಗೆ ಯಶಸ್ಸು ದೊರೆತಿದೆ.!!ಒಂದು ತಿಂಗಳಿನಲ್ಲಿ 60 ಲಕ್ಷ ಭಾರತ್ 2 ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದ ಮೈಕ್ರೋಮ್ಯಾಕ್ಸ್‌ಗೆ ಸ್ವಲ್ಪ ಯಶಸ್ಸು ದೊರೆತಿದ್ದು, ಇದೇ ಆಗಸ್ಟ್ ತಿಂಗಳಿನ ಕೊನೆಯ ವೇಳೆಗೆ 2 ಮಿಲಿಯನ್ ಭಾರತ್ -2 ಪೋನ್ ಮಾರಾಟ ಮಾಡಿ ಸಂಭ್ರಮಿಸಿದೆ.!!

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿರುವ ಅತ್ಯಂತ ಅಗ್ಗದ 4G ಸ್ಮಾರ್ಟ್‌ಫೋನ್ 'ಭಾರತ್ 2' ಹೆಚ್ಚು ಜನರನ್ನು ಸೆಳೆದಿದ್ದು, ಭಾರತ್ ಸರಣಿಯ ಹೊಸ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೈಕ್ರೋಮ್ಯಾಕ್ಸ್ ಮುಂದಾಗಿದೆ!! 3449 ರೂಪಾಯಿಗಳಿಗೆ ಭಾರತ್ 2 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಾಗಾದರೆ, ಭಾರತ್ 2 ಸ್ಮಾರ್ಟ್‌ಫೋನ್ ಪೀಚರ್ಸ್ ಏನು? ಹೊಸ ಮೂರು ಸ್ಮಾರ್ಟ್‌ಪೋನ್‌ಗಳು ಯಾವುದು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌!!

ಕಡಿಮೆಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌!!

ಭಾರತದ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಮೈಕ್ರೊಮ್ಯಾಕ್ಸ್ ಕಡಿಮೆ ಬೆಲೆ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಯಾವಾಗಲು ಮುಂದು. ಹಾಗಾಗಿ, ಜಿಯೋ ಬಂದ ನಂತರ ಟೆಲಿಕಾಂನಲ್ಲಿ ದೊಡ್ಡ ದರಸಮರವೇ ನಡೆಯುತ್ತಿದ್ದು, ಕಡಿಮೆಬೆಲೆಯಲ್ಲಿ ಭಾರತ್ 2 4G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು!!

ಭಾರತ್ 2 ಫೀಚರ್ ಏನು?

ಭಾರತ್ 2 ಫೀಚರ್ ಏನು?

ಭಾರತ್ 2 ಸ್ಮಾರ್ಟ್‌ಫೋನ್ ಕ್ವಾಡ್‌ಕೋರ್ ಪ್ರೊಸೆಸರ್, 512MB RAM ಮತ್ತು 4GB ಆಂತರಿ ಮೆಮೊರಿಯನ್ನು ಹೊಂದಿದೆ. ಜೊತೆಗೆ 5MP ಹಿಂಬದಿಯ ಕ್ಯಾಮರಾ, 1600 mAh ಬ್ಯಾಟರಿ ಪೋನ್‌ನಲ್ಲಿ ಲಭ್ಯವಿದ್ದು, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದ್ದು, ಫೀಚರ್ಸ್‌ನಲ್ಲಿ ಸ್ವಲ್ಪ ಹಿಂದೆ ಉಳಿದಿದೆ ಎನ್ನಬಹುದು.!!

ಆಪರೇಟಿಂಗ್ ಸಿಸ್ಟಮ್ ಯಾವುದು.?

ಆಪರೇಟಿಂಗ್ ಸಿಸ್ಟಮ್ ಯಾವುದು.?

ಇಷ್ಟು ಕಡಿಮೆ ಬೆಲೆಯಲ್ಲಿ 4G ಆಯ್ಕೆ ಹೊಂದಿರುವ ಭಾರತ್ 2 ಆಂಡ್ರಾಯ್ಡ್ ಮಾರ್ಶಮಲ್ಲೊ 6.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಹೀಗಾಗಲೇ ಹಳೆಯ ಮಾಡೆಲ್ ಆಗಿರುವ ಮಾರ್ಶಮಲ್ಲೊ 6.0 ಆಪರೇಟಿಂಗ್ ಸಿಸ್ಟಮ್ ಗುಣಮಟ್ಟಕ್ಕೆ ಹೆಸರುವಾಸಿ.!!

ಹೊಸ ಮೂರು ಫೋನ್‌ಗಳು!!

ಹೊಸ ಮೂರು ಫೋನ್‌ಗಳು!!

ಈಗಾಗಲೇ ಭಾರತ್ -2 ಪೋನ್ ಮಾರಾಟದ ಯಶಸ್ಸಿನಿಂದ ಖುಷಿಯಾಗಿರುವ ಮೈಕ್ರೋಮ್ಯಾಕ್ಸ್ ಹೊಸ ಮೂರು ಬಜೆಟ್‌ ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.!! ಭಾರತ್ ಸರಣಿಯಲ್ಲಿಯೇ ಮೂರು ಹೊಸ ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿದ್ದು, ಭಾರತ್-3, ಭಾರತ್-4, ಭಾರತ್-5 ಎಂದು ಹೆಸರಿಡಲಾಗುವುದು ಎಂದು ಕಂಪೆನಿ ತಿಳಿಸಿದೆ.!!

ರೀಟೆಲ್ ಶಾಪ್‌ಗಳಲ್ಲಿಯೂ ಲಭ್ಯವಿವೆ.!!

ರೀಟೆಲ್ ಶಾಪ್‌ಗಳಲ್ಲಿಯೂ ಲಭ್ಯವಿವೆ.!!

ಮೈಕ್ರೊಮ್ಯಾಕ್ಸ್ ಬಿಡುಗಡೆ ಮಾಡುತ್ತಿರುವ ಅತ್ಯಂತ ಕಡಿಮೆ ದರದ 4G ಸ್ಮಾರ್ಟ್‌ಫೋನ್‌ ಭಾರತ್ 2 ಇದೀಗ ರೀಟೆಲ್ ಶಾಪ್‌ಗಳಲ್ಲಿಯೂ ಲಭ್ಯವಿವೆ. ಗುಣಮಟ್ಟದಲ್ಲಿ ಸ್ವಲ್ಪ ಹಿಂದುಳಿದಿದ್ದರೂ ಕೂಡ ನಾವು ನೀಡುವ ಹಣಕ್ಕೆ ಇದೊಮದು ಉತ್ತಮ ಫೋನ್ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.!!

ಓದಿರಿ:ಮೊಬೈಲ್‌ನಿಂದ ಹಣ ಕದಿಯುವ ಆಪ್‌ಗಳು ಪತ್ತೆ ಮಾಡಿದ ಕ್ಯಾಸ್ಪರಸ್ಕಿ!!.ಯಾವುವು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Micromax has today announced that it has sold 2 million Bharat-2 smartphones by the end of August.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot