Home
ಸುದ್ದಿಜಾಲ

ಮೈಕ್ರೋಮ್ಯಾಕ್ಸ್ ಕಂಪೆನಿಯಿಂದ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು!

ಭಾರತದಲ್ಲಿ ಪ್ರಸ್ತುತ ಚೀನಾ ವಸ್ತುಗಳ ಬಾಯ್ಕಾಟ್‌ ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಚೀನಾ ಪ್ರಾಡಕ್ಟ್‌ಗಳನ್ನ ಖರೀದಿಸಬೇಡಿ ಎನ್ನುವ ಕೂಗು ಜೋರಾಗಿಯೇ ಎದ್ದಿದೆ. ಇದರ ನಡುವೆ ದೇಶಿ ಮಾರುಕಟ್ಟೆಯಲ್ಲಿ ತನ್ನದೆ ಆದ ಬ್ರಾಂಡ್‌ ಹೊಂದಿರುವ ಮೈಕ್ರೋಮ್ಯಾಕ್ಸ್ ಕಂಪೆನಿ ಮತ್ತೆ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಮಾಲ್‌ ಮಾಡಲು ಸಿದ್ದತೆ ನಡೆಸಿದೆ. ಒಂದು ಕಾಲದಲ್ಲಿ ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದ್ದ ಕಂಪನಿಯು ಮಾರುಕಟ್ಟೆಗೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಭಾರತೀಯ ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗುವ ಸಧ್ಯತೆ ಇದೆ. ಸದ್ಯ ದೇಶದಲ್ಲಿ ಚೀನಾ ಪ್ರಾಡಕ್ಟ್‌ಗಳನ್ನ ಬಾಯ್ಕಟ್‌ ಮಾಡುವ ಅಭಿಯಾನ ನಡೆಯುತ್ತಿದೆ. ಇದೇ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಆಗಿದ್ದ ಮೈಕ್ರೋಮ್ಯಾಕ್ಸ್‌ ಇದೀಗ ತನ್ನ ಹೊಸ ಮಾದರಿಯ ಪ್ರಿಮಿಯಂ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ಈ ಮೂರು ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತ

ಇನ್ನು ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಬ್ರಾಂಡ್‌ ಆಗಿದ್ದ ಮೈಕ್ರೋಮ್ಯಾಕ್ಸ್‌ನ ಕೊನೆಯ ಸ್ಮಾರ್ಟ್‌ಫೋನ್ ಐಒನ್ ನೋಟ್ ಆಗಿದ್ದು, ಇದು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ದೇಶದಲ್ಲಿ ಬೆಳೆಯುತ್ತಿರುವ ಚೀನಾ ವಿರೋಧಿ ಭಾವನೆಯು ಗ್ರಾಹಕರನ್ನು ಮತ್ತೆ ತನ್ನತ್ತ ಸೆಳೆಯಲು ಅವಕಾಶವಾಗಲಿದೆ ಎಂದು ಮೈಕ್ರೋಮ್ಯಾಕ್ಸ್‌ ಯೋಜನೆ ಸಿದ್ದಪಡಿಸಿಕೊಂಡಿದೆ. ಇನ್ನು ಈ ಹೊಸ ಮೂರು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯನ್ನ ಹೊಂದಿದ್ದು ರೂ 10,000 ಒಳಗೆ ಲಭ್ಯವಾಗುವ ಸಾಧ್ಯತೆ ಇದೆ.

ಮೈಕ್ರೋಮ್ಯಾಕ್ಸ್

ಇದಲ್ಲದೆ ಮೈಕ್ರೋಮ್ಯಾಕ್ಸ್ ಒಂದು ಸ್ವದೇಶಿ ಸ್ಮಾರ್ಟ್ಫೋನ್ ಬ್ರಾಂಡ್ ಆಗಿದ್ದು, ಅದು ಒಂದು ಕಾಲದಲ್ಲಿ ಈ ವಿಭಾಗದ ರಾಜನಾಗಿತ್ತು. ಇದೇ ಮನೋಭಾವವನ್ನು ಮತ್ತೇ ಮೈಕ್ರೊಮ್ಯಾಕ್ಸ್‌ ಮುಂದುವರೆಸುವುದಕ್ಕೆ ಮುಂದಾಗಿದೆ. ಇದೇ ಸಮಯದಲ್ಲಿ ತನ್ನ ಟ್ವಿಟರ್‌ಖಾತೆಯಲ್ಲಿ #MadeByIndian ಮತ್ತು #MadeForIndian ಎಂಬ ಹ್ಯಾಶ್‌ಟ್ಯಾಗ್‌ ಗಳನ್ನ ಹಾಕಿದೆ. ಇದು ಚೀನಾ ಬಾಯ್ಕಟ್‌ ಅಭಿಯಾನಕ್ಕೆ ಬೆಂಬಲಿಸುವುದರ ಜೊತೆಗೆ ತನ್ನ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ಸಿದ್ದತೆ ಬಗ್ಗೆ ಸೂಚನೆ ನೀಡಿದೆ.

ಸ್ಮಾರ್ಟ್‌ಫೋನ್

ಸದ್ಯ ಚೀನಾ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಬ್ರಾಮಡ್‌ ಕುಸಿಯುವ ಸಾಧ್ಯತೆ ಎದ್ದು ಕಾಣ್ತಿದ್ದು, ಮುಂದಿನ ದಿನಗಳಲ್ಲಿ ಸ್ವದೇಶಿ ಬ್ರಾಂಡ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸಾಧ್ಯತೆ ಇದೆ. ಇದನ್ನೇ ನಿರೀಕ್ಷೆ ಮಾಡಿರುವ ಮೈಕ್ರೊಮ್ಯಾಕ್ಸ್‌ ಮುಂಚಿತವಾಗಿಯೇ ಒಂದು ಹೆಜ್ಜೆ ಮುಂದೆ ಇಟ್ಟಿದೆ.

Best Mobiles in India

English summary
As the anti-China sentiment reaches new level in the country, Micromax plans a comeback and challenge Chinese smartphone brands in the country.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+