Subscribe to Gizbot

ಮೈಕ್ರೋಮ್ಯಾಕ್ಸ್‌ನ ವೈಯು ಬ್ರ್ಯಾಂಡ್ ಡಿಸೆಂಬರ್ 18 ಕ್ಕೆ ಲಾಂಚ್

Posted By:

ತನ್ನ ಹೊಸ ವೈಯು ಬ್ರ್ಯಾಂಡ್‌ನಲ್ಲಿ ತನ್ನ ಸಿನೋಜಿನ್ -ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಡಿಸೆಂಬರ್ 18 ಅನ್ನು ಕಂಪೆನಿ ಗೊತ್ತುಪಡಿಸಿದೆ. ಇದಕ್ಕಾಗಿ ಕಂಪೆನಿಯು ಆಹ್ವಾನಗಳನ್ನು ಕಳುಹಿಸುತ್ತಿದ್ದು ದುರಾದೃಷ್ಟವಶಾತ್ ಹ್ಯಾಂಡ್‌ಸೆಟ್ ಕುರಿತು ಹೆಚ್ಚಿನ ಮಾಹಿತಿಗಳೇನು ತಿಳಿದುಬಂದಿಲ್ಲ. ವೈಯು ಶ್ರೇಣಿಯ ಫೋನ್‌ಗಳನ್ನು ಕುರಿತು ಯಾವುದೇ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.

ಕಳೆದ ತಿಂಗಳು ಮೈಕ್ರೋಮ್ಯಾಕ್ಸ್ ಸಿನೋಜಿನ್ ಜೊತೆಗೆ ವೈಯು ಬ್ರ್ಯಾಂಡ್ ಅನ್ನು ಪಾಲುದಾರಿಕೆಯೊಂದಿಗೆ ಕಳೆದ ತಿಂಗಳು ಘೋಷಿಸಿದ್ದು ಈ ಬ್ರ್ಯಾಂಡ್‌ನ ಪ್ರಥಮ ಹ್ಯಾಂಡ್‌ಸೆಟ್ ಈ ತಿಂಗಳು ಫೋಷಣೆಯಾಗುವ ನಿರೀಕ್ಷೆ ಇದೆ.

ಮೈಕ್ರೋಮ್ಯಾಕ್ಸ್ ವೈಯು ಬ್ರ್ಯಾಂಡ್ ಇದೇ 18 ಕ್ಕೆ ಲಾಂಚ್

ಮೈಕ್ರೋಮ್ಯಾಕ್ಸ್‌ನ ಪ್ರಥಮ ವೈಯು ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಸಿನೋಜಿನ್ ಮೋಡ್ ಓಎಸ್ ಆವೃತ್ತಿಯನ್ನು ಹೊಂದಿದ್ದು ಇದು 64 ಬಿಟ್ ಸಿಪಿಯುವನ್ನು ಒಳಗೊಂಡಿದೆ. ಹಾಗೂ ಇದರ ಚಿಪ್‌ಸೆಟ್ ಕುರಿತು ಯಾವುದೇ ಮಾಹಿತಿ ದೊರಕಿಲ್ಲ. ಈ ಹ್ಯಾಂಡ್‌ಸೆಟ್ ಭಾರತದಲ್ಲಿ ಡಿಸೆಂಬರ್ 18 ಕ್ಕೆ ಲಾಂಚ್ ಆಗಲಿದೆ. ಫೋನ್ ಬಿಡುಗಡೆಯಾದ ನಂತರ 2-3 ವಾರಗಳಲ್ಲಿ ಇದರ ಮಾರುಕಟ್ಟೆ ಲಭ್ಯತೆಯ ಬಗೆಗೆ ಸುದ್ದಿ ದೊರಕಲಿದೆ.

ಮೈಕ್ರೋಮ್ಯಾಕ್ಸ್‌ನ ಹೊಸ ವೈಯು ಸ್ಮಾರ್ಟ್‌ಫೋನ್‌ಗೆ ಉತ್ತಮ ಅಪ್ಲಿಕೇಶನ್ ಅನ್ನು ಯೋಜಿಸುವವರಿಗೆ ಕಂಪೆನಿಯು ರೂ 1,00,000 ವನ್ನು ಘೋಷಿಸಿದೆ.

English summary
This article tells about Micromax on Thursday, as expected, started sending invites for an event scheduled on December 18, where it is expected to launch the first Cyanogen-based smartphone under its new YU brand.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot