ಹೃದಯ ಬಡಿತವನ್ನು ಅಳತೆಮಾಡಲಿದೆ ಈ ವಾಚ್

Written By:

ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಫೋನ್ ಡಿವೈಸ್‌ಗಳಾದ್ಯಂತ ಕಾಂಪಿಟೇಬಲ್ ಆಗುವ ಹೊಸ ಸ್ಮಾರ್ಟ್‌ವಾಚ್ ಅನ್ನು ಹೊರತರಲು ಮೈಕ್ರೋಸಾಫ್ಟ್ ಯೋಜಿಸುತ್ತಿದೆ.

ಈ ವಾಚು ಹೃದಯ ಬಡಿತವನ್ನು ಮಾನಿಟರ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಎರಡು ದಿನದ ಬ್ಯಾಟರಿ ಜೀವನವನ್ನು ಹೊಂದಿದೆ. ಎಕ್ಸ್‌ಬಾಕ್ಸ್ ಕಿನೆಕ್ಟ್ ಇಂಜಿನಿಯರುಗಳು ಬಳಸಿರುವಂತಹ ತಂತ್ರಜ್ಞಾನವನ್ನು ವಾಚ್‌ನಲ್ಲಿ ಬಳಸಲಾಗಿದ್ದು ಇದನ್ನು ಧರಿಸಿದವರ ಹೃದಯ ಬಡಿತವನ್ನು ಇದು ಟ್ರ್ಯಾಕ್ ಮಾಡುತ್ತದೆ.

ಹೃದಯ ಬಡಿತವನ್ನು ಅಳತೆಮಾಡಲಿದೆ ಈ ವಾಚ್

ಈ ವಾಚನ್ನು ತಯಾರಿಸಲು ಮೈಕ್ರೋಸಾಫ್ಟ್‌ಗೆ ಈಗಾಗಲೇ ಪೇಟೆಂಟ್ ದೊರೆತಿದ್ದು ಆ ದಿಸೆಯಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ. ಸ್ಯಾಮ್‌ಸಂಗ್ ಈಗಾಗಲೇ ಫಿಟ್‌ನೆಸ್ ಕಾಯ್ದಿರಿಸುವ ವೃಸ್ಟ್ ಬ್ಯಾಂಡ್ ಅನ್ನು ಹೊರತಂದಿದ್ದು ಸಿಮ್‌ಬ್ಯಾಂಡ್ ಎಂಬ ಹೆಸರಿನಿಂದ ಇದು ಚಿರಪರಿಚಿತವಾಗಿದೆ.

ವಾಚು ಆದಷ್ಟು ಬೇಗನೇ ಮಾರುಕಟ್ಟೆಗೆ ಬರಲಿದ್ದು ಬೇಸಿಗೆಯ ಸಮಯದಲ್ಲಿ ಲಾಂಚ್ ಆಗುವ ನಿರೀಕ್ಷೆ ಇದೆ. ವಿಂಡೋಸ್ ಫೋನ್ ಡಿವೈಸ್‌ಗಳಿಗೆ ಈ ವಾಚ್ ಅನ್ನು ಕಟ್ಟಲಾಗುವುದಿಲ್ಲ. ಆದರೆ ಐಫೋನ್ ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಈ ವಾಚ್ ಅನ್ನು ಕಟ್ಟಬಹುದು. ಈ ವಾಚು ಸ್ಯಾಮ್‌ಸಂಗ್‌ನ ಗೇರ್ ಫಿಟ್‌ನಂತೆಯೇ ಕಂಡುಬಂದಿದ್ದು ವಾಚನ್ನು ಧರಿಸುವವರು ಮಣಿಗಂಟಿಗೆ ಇದನ್ನು ಕಟ್ಟಿಕೊಳ್ಳಬಹುದಾಗಿದೆ. ಇದರಿಂದ ಅಧಿಸೂಚನೆಗಳನ್ನು ಹೆಚ್ಚು ಖಾಸಗಿಯಾಗಿ ವೀಕ್ಷಿಬಹುದಾಗಿದೆ.

ಇಷ್ಟರವರೆಗೆ ಈ ರೀತಿಯ ವಾಚ್ ತಯಾರಿಕಾ ಶ್ರೇಣಿಯಲ್ಲಿ ಮುಂದಿದ್ದ ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ಮೈಕ್ರೋಸಾಫ್ಟ್ ತೀವ್ರ ರೀತಿಯ ಪೈಪೋಟಿಯನ್ನು ನೀಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot