ಮೈಕ್ರೋಸಾಫ್ಟ್‌ನಿಂದ 18,000 ಉದ್ಯೋಗ ಕಡಿತ!

By Shwetha
|

ಮೈಕ್ರೋಸಾಫ್ಟ್ ತನ್ನ ಸಿಬ್ಬಂದಿಗಳನ್ನು ತೆಗೆದುಹಾಕುತ್ತಿದ್ದು ಈ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ. ಮೈಕ್ರೋಸಾಫ್ಟ್ ಸಿಇಒ ತನ್ನ ಉದ್ಯೋಗಿಗಳಗೆ ಇಮೇಲ್ ಸಂದೇಶವನ್ನು ರವಾನಿಸಿದ್ದು ಮುಂದಿನ ವರ್ಷ 18,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ಇದೇ ಸಮಯದಲ್ಲಿ ಮೈಕ್ರೋಸಾಫ್ಟ್ ಡಿವೈಸ್‌ಗಳ ಮುಖ್ಯಸ್ಥ ಸ್ಟೀಫನ್ ಇಲೋಪ್, ನೋಕಿಯಾ ಎಕ್ಸ್ ಆಂಡ್ರಾಯ್ಡ್ ಪ್ರಾಜೆಕ್ಟ್ ಈಗ ಮುಗಿದಿದೆ. ಸಂಬಂಧಿತವಾಗಿ, ನೋಕಿಯಾ ಎಕ್ಸ್‌ನ ಮುಂಬರುವ ವಿನ್ಯಾಸಗಳು ಮತ್ತು ಉತ್ಪನ್ನಗಳನ್ನು ವಿಂಡೋಸ್ ಫೋನ್ ಯೂನಿಟ್‌ಗಳಿಗೆ ವರ್ಗಾಯಿಸುವುದಾಗಿ ಅವರು ತಿಳಿಸಿದ್ದಾರೆ. ಅಧಿಕೃತ ಕಲಾಪದಲ್ಲಿ ಅವರು, ಈ ಪ್ರಾಜೆಕ್ಟ್ ಅನ್ನು ಯಾವುದೇ ವಿಳಂಬವಿಲ್ಲದೆ ವರ್ಗಾಯಿಸುವುದಾಗಿದ್ದು ಪ್ರಸ್ತುತವಿರುವ ನೋಕಿಯಾ ಎಕ್ಸ್ ಉತ್ಪನ್ನಗಳನ್ನು ಹಾಗೆಯೇ ಇಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಸತ್ಯ ನಡೇಲಾರ ನಡೆ ಏಕೆ ಹೀಗೆ?

ಈ ಬೆಳಣಿಗೆಗಳನ್ನು ಗಮನಿಸುವಾಗ ನೋಕಿಯಾ ಎಕ್ಸ್2 ಕೂಡಲೇ ಭಾರತದಲ್ಲಿ ಬಿಡುಗಡೆಯಾಗವುದಿಲ್ಲ ಎಂಬುದು ಅರಿವಾಗುತ್ತದೆ. ಆದರೆ ಭಾರತೀಯ ಆಮದ/ರಫ್ತು ಝೂಬಾ ಸೈಟ್‌ನಲ್ಲಿ ಪಟ್ಟಿಯಾಗಿರುವ 4.3 ಇಂಚಿನ ಡಿಸ್‌ಪ್ಲೇ ಹೊಂದಿರುವ ನೋಕಿಯಾ ಎಕ್ಸ್2 ಅನ್ನು ಭಾರತಕ್ಕೆ ಈಗಾಗಲೇ ತರಲಾಗಿದೆ ಅಂದರೆ ಅದು ಇಲ್ಲಿ ಯಾವಾಗ ಬೇಕಾದರೂ ಲಾಂಚ್ ಆಗಬಹುದು. ರೀಟೈಲ್ ತಾಣಗಳಲ್ಲಿ ಮೈಕ್ರೋಸಾಫ್ಟ್ ಈ ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಕೂಡ ಇಲ್ಲದಿಲ್ಲ.

ಇದೇ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಬರೆದಿರುವ ಮೇಲ್‌ನಲ್ಲಿ ಸತ್ಯ ನಡೇಲಾ ಏನು ತಿಳಿಸಿದ್ದಾರೆ ಎಂಬುದನ್ನು ನೋಡಿ
"ಮುಂದಿನ ವರ್ಷದಲ್ಲಿ 18,000 ಉದ್ಯೋಗಿಗಳನ್ನು ತೆಗೆದುಹಾಕುವ ಮೂಲಕ ನಾವು ನಮ್ಮ ಸಂಪೂರ್ಣ ವರ್ಕ್ ಸ್ಪೇಸ್ ಅನ್ನು ಕುಂಠಿತಗೊಳಿಸಲಿದ್ದೇವೆ. ಅಂದರೆ ಒಟ್ಟಾರೆ ವೃತ್ತಿಪರ ಮತ್ತು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಸೇರಿಸಿ ನೋಕಿಯಾ ಡಿವೈಸ್‌ಗಳು ಮತ್ತು ಸೇವೆಗಳು 12,500 ದಷ್ಟು ಹುದ್ದೆಗಳನ್ನು ನಿರೀಕ್ಷಿಸುತ್ತಿದೆ".

"ನಾವೀಗ ನಮ್ಮ 13,000 ದಷ್ಟು ಹುದ್ದೆಗಳನ್ನು ಕಡಿಮೆಗೊಳಿಸಲು ಮುಂದುವರಿಯುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಹುದ್ದೆಯನ್ನು ಕಳೆದುಕೊಳ್ಳಲಿರುವ ಉದ್ಯೋಗಿಗಳ ವಿವರಗಳನ್ನು ನೀಡಲಾಗುವುದು."

"ಈ ಬದಲಾವಣೆಗಳ ಪ್ರಭಾವಕ್ಕೊಳಗಾಗಿರುವ ಎಲ್ಲಾ ಉದ್ಯೋಗಿಗಳ ಪರಿಶ್ರಮವನ್ನು ನಾವು ಅರಿತಿದ್ದೇವೆ, ಅಂತೆಯೇ ಉದ್ಯೋಗ ಪರವರ್ತನೆಯು ಅವರಿಗೆ ಹಲವಾರು ಸ್ಥಳಗಳಲ್ಲಿ ಸಹಾಯ ಮಾಡುತ್ತದೆ ಮತ್ತು ಪ್ರತಿಯೊಬ್ಬರನ್ನೂ ಗೌರವದಿಂದ ಪರಿಗಣಿಸಲಾಗುತ್ತದೆ ಈ ಕಂಪೆನಿಯ ಅವರ ಕೊಡುಗೆಗಳಿಗಾಗಿ ಈ ಗೌರವ ಅವರಿಗೆ ಸಲ್ಲುತ್ತದೆ."

Best Mobiles in India

Read more about:
English summary
This article tells about that Microsoft ceo Satya Nadella confirms 18,000 job cuts and nokia x platform ceased.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X