Subscribe to Gizbot

ಶಿಕ್ಷಣ ರಂಗದಲ್ಲಿ ತಂತ್ರಜ್ಞಾನದ ಅಲೆ

Written By:

ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವ ಪ್ರತಿಯೊಂದು ಸಾಧನೆ ಕೂಡ ಬೆಲೆಕಟ್ಟಲಾಗದೇ ಇರುವಂಥದ್ದು. ಉತ್ತಮ ತಂತ್ರಜ್ಞಾನ ರೂಪಿತ ಶಿಕ್ಷಣದ ಆಯಾಮ ಹೊಸ ಮೈಲಿಗಲ್ಲನ್ನೇ ಸ್ಥಾಪಿಸುತ್ತದೆ. ದೇಶದ ಉನ್ನತಿ ಇರುವುದೇ ಶಿಕ್ಷಣದಲ್ಲಿ ಎಂಬುದು ಸಾಧಕರ ಮಾತಾಗಿದೆ ಇದೇ ಮಾತನ್ನು ಪುಷ್ಟೀಕರಿಸುವ ಸಾಧನೆಯೊಂದನ್ನು ಜಗತ್ತಿನ ದೊಡ್ಡಣ್ಣ ಅಮೇರಿಕಾ ದೇಶ ಮಾಡಲಿದೆ.

ಅದುವೇ ಹೆಚ್ಚು ವೇಗದ ಅಂತರ್ಜಾಲ ಸಾಮರ್ಥ್ಯ ಹಾಗೂ ನವೀಕೃತ ವಿದ್ಯಾಭ್ಯಾಸವನ್ನು ಅಲ್ಲಿನ ಮಕ್ಕಳಿಗೆ ನೀಡುವ ನಿರ್ಧಾರವನ್ನು ಅಧ್ಯಕ್ಷ ಬರಾಕ್ ಒಬಾಮಾ ಪ್ರಾಸ್ತಾಪಿಸಿದ್ದು ಇದಕ್ಕೆ ಕೈ ಜೋಡಿಸಲಿರುವ ಮೈಕ್ರೋಸಾಫ್ಟ್ $1 ಬಿಲಿಯನ್ ಅನ್ನು ಶಾಲೆಗಳಿಗೆ ಒದಗಿಸಲಿದ್ದು ಇದರಿಂದ ಶುಲ್ಕಕಡಿತವಿರುವ ಕಂಪ್ಯೂಟರ್‌ಗಳನ್ನು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗಾಗಿ ಖರೀದಿಸಬಹುದಾಗಿದೆ.

ಶಿಕ್ಷಣ ರಂಗದಲ್ಲಿ ತಂತ್ರಜ್ಞಾನದ ಅಲೆ

ಮೈಕ್ರೋಸಾಫ್ಟ್ ಎಜ್ಯುಕೇಶನ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಕ್ಯಾಮರಾನ್ ಇವಾನ್ಸ್ ಹೇಳುವಂತೆ ಶಿಕ್ಷಣ ರಂಗದಲ್ಲಿ ನಿಜಕ್ಕೂ ತಾಂತ್ರಿಕತೆಯ ಅಲೆ ಬೀಸಬೇಕಿದೆ. ನಾವು ಹೆಚ್ಚು ಹೆಚ್ಚು ನವೀಕರಣಗಳನ್ನು ಶಿಕ್ಷಣ ರಂಗದಲ್ಲಿ ಮಾಡಿದಂತೆ ಅದು ನಮಗೆ ಲಾಭಕರವಾಗಿಯೇ ಇರುತ್ತದೆ ಮತ್ತು ವಿದ್ಯಾರ್ಥಿಗಳು ಹೆಚ್ಚು ಚತುರರಾಗುತ್ತಾರೆ ಎಂದವರು ತಿಳಿಸಿದ್ದಾರೆ.

ತಂತ್ರಜ್ಞಾನದ ಮಾಹಿತಿ ಇಲ್ಲದಿರುವ ಹಲವಾರು ವಿದ್ಯಾರ್ಥಿಗಳು ಶಾಲೆಗಳಲ್ಲಿ ಕಲಿಯುತ್ತಿದ್ದು ಇದರಿಂದ ಅವರ ಮತ್ತು ತಾಂತ್ರಿಕತೆಯ ನಡುವಿನ ಅಂತರ ಕಡಿಮೆಯಾಗಲಿದೆ. ಅವರಲ್ಲಿ ಹೆಚ್ಚು ಹೆಚ್ಚು ನೈಪುಣ್ಯವನ್ನು ನಾವು ಬೆಳೆಸಿದಂತೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂಬುದು ಕಂಪೆನಿಯ ನಂಬಿಕೆಯಾಗಿದೆ. ಈ ನೀತಿ ಇಲ್ಲಿ ನಡೆಯುತ್ತಿದೆ ಎಂದಾದರೆ ನಮ್ಮ ದೇಶದ ಮಕ್ಕಳೂ ಕೂಡ ಇಂತಹ ಶಿಕ್ಷಣಕ್ಕೆ ತಮ್ಮನ್ನು ತೆರೆದುಕೊಳ್ಳುವಂತಾಗಬೇಕು.

ಶಿಕ್ಷಣದಲ್ಲಿ ತಾಂತ್ರಕತೆಯ ಸಹಾಯವನ್ನು ಪಡೆದುಕೊಂಡರೆ ನಿಜಕ್ಕೂ ಅದೊಂದು ದೊಡ್ಡ ಮಾರ್ಗದರ್ಶನವಾಗಿ ವಿದ್ಯಾರ್ಥಿಗಳು ಅದರ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ಅವರ ಭವಿಷ್ಯದ ಹಾದಿ ಕೂಡ ಸುಗಮವಾಗಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot