25 ವರ್ಷಗಳ ನಂತರ ಹೊಸ ಲೋಗೋ: ಮೈಕ್ರೋಸಾಫ್ಟ್

Posted By: Varun
25 ವರ್ಷಗಳ ನಂತರ ಹೊಸ ಲೋಗೋ: ಮೈಕ್ರೋಸಾಫ್ಟ್

ಶುರುವಾದ 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಶ್ವ ವಿಖ್ಯಾತ ಸಾಫ್ಟ್ ವೇರ್ ಕಂಪನಿ ಮೈಕ್ರೋಸಾಫ್ಟ್ ತನ್ನ ಲೋಗೋ ವನ್ನು ಬದಲಾಯಿಸಿ ಅಚ್ಚರಿ ಮೂಡಿಸಿದೆ!

ನಿಮಗೆ ಜ್ಞಾಪಕವಿರಬೇಕು, ಪ್ರತಿ ಸರಿ ವಿಂಡೋಸ್ ತಂತ್ರಾಂಶವಿರುವ ಕಂಪ್ಯೂಟರ್ ಅನ್ನು ಆನ್ ಮಾಡಿದಾಗ ನಾಲ್ಕು ಬಣ್ಣಗಳ ಲೋಗೋ ಮೂಡುತ್ತದೆ. ಇದನ್ನು ಸುಮಾರು ವರ್ಷಗಳಿಂದ ಉಳಿಸಿಕೊಂಡಿದ್ದ ಮೈಕ್ರೋಸಾಫ್ಟ್ ಈಗ ಚೌಕಾಕಾರ ಮಾದರಿಯ ಲೋಗೋವನ್ನು ಇನ್ನು ಮುಂದೆ ಉಪಯೋಗಿಸಲಿದೆ.

ಮುಂದೆ ಬಿಡುಗಡೆಯಾಗಲಿರುವ Xbox 360, ವಿಂಡೋಸ್ 8 ತಂತ್ರಾಂಶ ಹಾಗು ವಿಂಡೋಸ್ ಫೋನ್ ಗಳಿಗೆ ಇದನ್ನು ಮೈಕ್ರೋಸಾಫ್ಟ್ ಉಪಯೋಗಿಸಲಿದ್ದು, ಮೈಕ್ರೋಸಾಫ್ಟ್ ಹೆಸರನ್ನು ಲೋಗೋ ಪಕ್ಕ ಸೇರಿಸಲಾಗಿದೆ. ಕೆಂಪು, ಹಸಿರು, ನೀಲಿ ಹಾಗು ಹಳದಿ ಬಣ್ಣಗಳ ಚೌಕಗಳುಳ್ಳ ಈ ಲೋಗೋ ವನ್ನು ಈಗಾಗಲೇ ಮೈಕ್ರೋಸಾಫ್ಟ್ ತನ್ನ ವೆಬ್ಸೈಟ್ ನಲ್ಲಿ ಉಪಯೋಗಿಸಲಾರಂಭಿಸಿದೆ.

ಲೋಗೋ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು, ದಯವಿಟ್ಟು ತಿಳಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot