ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4 ಬಿಡುಗಡೆ! ವಿಶೇಷತೆ ಏನು?

|

ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಆಕರ್ಷಕ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಸರ್ಫೇಸ್ ಲ್ಯಾಪ್‌ಟಾಪ್ 4 ಅನ್ನು ಬಿಡುಗಡೆ ಮಾಡಿದೆ. ಇದು ಹಿಂದಿನ ಮಾದರಿಗಳಂತೆಯೇ ವಿನ್ಯಾಸವನ್ನು ಹೊಂದಿದೆ. ಇದು ಪ್ಲ್ಯಾಟಿನಮ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಅಲ್ಕಾಂಟರಾ ಅಥವಾ ಮೆಟಲ್ ಫಿನಿಶ್‌ಗಳಲ್ಲಿ ದೊರೆಯಲಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಸಂಸ್ಥೆ ಹೊಸ ಸರ್ಫೇಸ್ ಲ್ಯಾಪ್‌ಟಾಪ್ 4 ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಡಿವೈಸ್‌ 3:2 ಪಿಕ್ಸೆಲ್‌ಸೆನ್ಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 13.5-ಇಂಚಿನ ಮತ್ತು 15-ಇಂಚಿನ ಎರಡೂ ಮಾದರಿಗಳಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್‌ 13.5-ಇಂಚಿನ ಆಯ್ಕೆಯು ಉತ್ಪಾದಕತೆ ಮತ್ತು ಪೋರ್ಟಬಿಲಿಟಿಗಾಗಿ ಉತ್ತಮವಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಆದರೆ 15-ಇಂಚಿನ ರೂಪಾಂತರವು ಮಲ್ಟಿ-ಫಂಕ್ಷನಲ್‌ ಸೂಕ್ತವಾಗಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4 11 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ಅಥವಾ ಎಎಮ್‌ಡಿಯ ರೈಜೆನ್ 4000 ಸರಣಿ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದನ್ನು ರೇಡಿಯನ್ ಗ್ರಾಫಿಕ್ಸ್ ಬೆಂಬಲಿಸುತ್ತದೆ. ಸರ್ಫೇಸ್ ಲ್ಯಾಪ್‌ಟಾಪ್ 3 ಗಿಂತ ಗ್ರಾಹಕರು ಶೇಕಡಾ 70 ರಷ್ಟು ಉತ್ತಮ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಅವಧಿಯನ್ನು ಪಡೆಯುತ್ತಾರೆ ಎಂದು ಕಂಪನಿ ಭರವಸೆ ನೀಡಿದೆ. ಬೆಲೆ ನೀವು ಆಯ್ಕೆಮಾಡುವ ಪ್ರೊಸೆಸರ್ ಮತ್ತು ಲ್ಯಾಪ್‌ಟಾಪ್ ಗಾತ್ರವನ್ನು ಅವಲಂಬಿಸಿರುತ್ತದೆ.

ಮೈಕ್ರೋಸಾಫ್ಟ್‌

ಇನ್ನು ಮೈಕ್ರೋಸಾಫ್ಟ್‌ ಸರ್ಫೇಸ್ 4 ಲ್ಯಾಪ್‌ಟಾಪ್‌ಗಳು ಡಾಲ್ಬಿ ಅಟ್ಮೋಸ್ ಆಡಿಯೊಗೆ ಸಹಕರಿಸುತ್ತವೆ. ಮೈಕ್ರೋಸಾಫ್ಟ್ ಮುಂಭಾಗದಲ್ಲಿ ಕಡಿಮೆ-ಬೆಳಕಿನ ಸಾಮರ್ಥ್ಯ ಮತ್ತು ಸ್ಟುಡಿಯೋ ಮೈಕ್ರೊಫೋನ್ ರಚನೆಯೊಂದಿಗೆ ಇಂಟರ್‌ಬಿಲ್ಟ್‌ ಹೆಚ್‌ಡಿ ಕ್ಯಾಮೆರಾವನ್ನು ಸೇರಿಸಿದೆ. ತನ್ನ ಹೊಸ ಲ್ಯಾಪ್‌ಟಾಪ್ ಇಂಟಿಗ್ರೇಟೆಡ್ ಹಾರ್ಡ್‌ವೇರ್, ಫರ್ಮ್‌ವೇರ್, ಸಾಫ್ಟ್‌ವೇರ್ ಮತ್ತು ಗುರುತಿನ ರಕ್ಷಣೆಯೊಂದಿಗೆ ಉನ್ನತ ಮಟ್ಟದ ಭದ್ರತೆಯನ್ನು ನೀಡುತ್ತದೆ ಎಂದು ಹೇಳಿದೆ.

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4 ಆರಂಭಿಕ ಬೆಲೆ 102,999 ರೂ. ಆಗಿದೆ. ಇದು 13.5 ಇಂಚಿನ ಬೇಸ್ ಮಾದರಿಗೆ ಎಎಮ್‌ಡಿ ರೈಜೆನ್ 5 4680ಯು ಮತ್ತು 8ಜಿಬಿ ರಾಮ್, 256ಜಿಬಿ ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಎಎಮ್‌ಡಿ ರೈಜೆನ್ 7 4980 ಯು ಪ್ರೊಸೆಸರ್ ಹೊಂದಿರುವ 15 ಇಂಚಿನ ಮಾದರಿಯ ಬೆಲೆ 1,34,999 ರೂ. ಬೆಲೆಯನ್ನು ಹೊಂದಿದೆ. ಇದಲ್ಲದೆ 16GB RAM ಮತ್ತು 512GB SSD ಹೊಂದಿರುವ ಇಂಟೆಲ್ ಕೋರ್ ಐ 5 ರೂಪಾಂತರವು 151,999 ರೂ. ಬೆಲೆಯನ್ನು ಹೊಂದಿದೆ.

Best Mobiles in India

English summary
The Microsoft Surface Laptop 4 will be available with the 11th Gen Intel Core processor or AMD's Ryzen 4000 series processor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X