Subscribe to Gizbot

ಐಟಿ ನೌಕರರಿಗೆ ಸಂಕಷ್ಟ..ಸಾವಿರಾರು ಉದ್ಯೋಗ ಕಡಿತಕ್ಕೆ ಮುಂದಾದ ಮೈಕ್ರೋಸಾಫ್ಟ್!!

Written By:

ಯಾಕೋ ಐಟಿ ಕಂಪೆನಿ ನೌಕರರ ಹಣೆಬರಹ ಚೆನ್ನಾಗಿಲ್ಲಾ ಎಂದು ಕಾಣಿಸುತ್ತದೆ. ಕೆಲವು ದಿವಸಗಳಿಂದ ಐಟಿ ನೌಕರರೆಲ್ಲರೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿಯೇ ಇದ್ದು, ಇದಕ್ಕೆ ಮೈಕ್ರೋಸಾಫ್ಟ್ ಸಹ ಬಹುದೊಡ್ಡ ಶಾಕ್ ನೀಡಿದೆ.! ಹೌದು, ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಮುಂದಾಗಿದೆ.!!

2014 ರಲ್ಲಿ ಅತಿ ಹೆಚ್ಚು ಅಂದರೆ 18,000 ಉದ್ಯೋಗಗಳನ್ನು ಕಡಿತಗೊಳಿಸಿದ್ದ ಮೈಕ್ರೋಸಾಫ್ಟ್, ಇತ್ತೀಚಿನ ವರ್ಷಗಳಲ್ಲಿ ಸಾವಿರಗಟ್ಟಲೆ ಉದ್ಯೋಗಗಳನ್ನು ಕಡಿತಗೊಳಿಸಿತ್ತು. ಇದೀಗ ಮತ್ತೆ ಭಾರಿ ಉದ್ಯೋಗ ಕಡಿತದ ಭೀತಿ ಎದುರಾಗಿದ್ದು, ಉದ್ಯೋಗ ಕಡಿತಗೊಳ್ಳುತ್ತಿರುವುದೇಕೆ? ಮೈಕ್ರೋಸಾಫ್ಟ್ ಹೇಳಿದ್ದೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉದ್ಯೋಗ ಕಡಿತ ಮಾಡುತ್ತಿರುವುದುದೇಕೆ?

ಉದ್ಯೋಗ ಕಡಿತ ಮಾಡುತ್ತಿರುವುದುದೇಕೆ?

ಕ್ಲೌಡ್ ಕಂಪ್ಯೂಟಿಂಗ್ ಮೇಲೆ ಅವಲಂಬಿತವಾಗಿ ಸಾಫ್ಟ್ವೇರ್ ಕೊಲೋಸಸ್ ಅನ್ನು ಉದ್ಯಮದ ಪ್ರಮುಖ ಭಾಗವಾಗಿಸಿಕೊಳ್ಳುವತ್ತ ಮೈಕ್ರೋಸಾಫ್ಟ್ ಹೆಜ್ಜೆ ಹಾಕಿದೆ. ಹಾಗಾಗಿ, ಈ ಬಾರಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.!!

ಮೈಕ್ರೋಸಾಫ್ಟ್ ಹೇಳಿದ್ದೇನು?

ಮೈಕ್ರೋಸಾಫ್ಟ್ ಹೇಳಿದ್ದೇನು?

ಮೈಕ್ರೋಸಾಫ್ಟ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂದು ವಿಶ್ಲೇಷಿಸಿರುವ ವರದಿಗಳಿಗೆ ಪೂರಕವಾಗಿ ಸಂಸ್ಥೆಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನೂ ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ. ಗ್ರಾಹಕರಿಗೆ ಹಾಗೂ ಪಾಲುದಾರರಿಗೆ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಎಷ್ಟು ಉದ್ಯೋಗ ಕಡಿತವಾಗಬಹುದು?

ಎಷ್ಟು ಉದ್ಯೋಗ ಕಡಿತವಾಗಬಹುದು?

ವಿಶ್ಲೇಷಣೆಯ ಪ್ರಕಾರ ಮೈಕ್ರೋಸಾಫ್ಟ್ ನಲ್ಲಿ ಈ ಬಾರಿ ಹತ್ತು ಸಾವಿರ ಉದ್ಯೋಗಳನ್ನು ಕಡಿತಗೊಳಿಸುವ ಸಂಭವವಿದೆ ಎಂದು ಹೇಳಲಾಗಿದೆ. ಮತ್ತು ಇನ್ನು ಹೆಚ್ಚಿನ ಉದ್ಯೋಗಗಳು ಕಡಿತವಾದರೂ ಆಶ್ಚರ್ಯವಿಲ್ಲಾ ಎಂದು ಐಟಿ ತಜ್ಞರೆ ಅಭಿಪ್ರಾಯಪಟ್ಟಿದ್ದಾರೆ.!!

ಎಲ್ಲಾ ಮೈಕ್ರೋಸಾಫ್ಟ್ ಕ್ಲೌಡ್ಗಾಗಿ?

ಎಲ್ಲಾ ಮೈಕ್ರೋಸಾಫ್ಟ್ ಕ್ಲೌಡ್ಗಾಗಿ?

ಬಹುರಾಷ್ಟ್ರೀಯ ಉದ್ಯಮದಿಂದ, ಮಧ್ಯಮ ಗಾತ್ರದ ಉದ್ಯಮ, ಲಾಭ ರಹಿತ ಸಂಸ್ಥೆಗಳ ವರೆಗೂ ವಿಶ್ವಾದ್ಯಂತ ಎಲ್ಲಾ ಸಂಸ್ಥೆಗಳು ಮೈಕ್ರೋಸಾಫ್ಟ್ ಕ್ಲೌಡ್ ಬಳಕೆ ಮಾಡಿಕೊಳ್ಳುತ್ತಿವೆ ಹಾಗಾಗಿ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಉದ್ಯಮ ಸೇವೆಗಳತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಮೈಕ್ರೋಸಾಫ್ಟ್ ಸಿಇಒಸತ್ಯ ನಾದೆಳ್ಲ ಹೇಳಿದ್ದಾರೆ.

ಓದಿರಿ:ಮಕ್ಕಳು ಗಣಿತದಲ್ಲಿ 100% ಮಾರ್ಕ್ಸ್ ತಗೊಬೇಕಾ?..ಈ ಉಚಿತ ಆಪ್ ಡೌನ್‌ಲೋಡ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
An anonymous source told the site that the move would be announced this week and involve "thousands" of workers around the world.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot