ಮೈಕ್ರೋಸಾಫ್ಟ್‌ ಕಂಪೆನಿಯಿಂದ COVID-19 ಟ್ರ್ಯಾಕರ್ ಲಾಂಚ್‌!

|

ಇಡೀ ಜಗತ್ತೇ ಮಾರಕ ವೈರಸ್‌ ಕೊರೊನಾ ದಾಳಿಗೆ ತತ್ತರಿಸಿ ಹೋಗ್ತಿದೆ. ಚೀನಾದಲ್ಲಿ ಹುಟ್ಟಿ ಇಂದು ಇಡೀ ವಿಶ್ವವನ್ನೇ ಆತಂಕಕ್ಕೆ ನೂಕಿರುವ ಕೊರೊನಾ ವೈರಸ್‌ ಇನ್ನು ಕೂಡ ಸಂಪೂರ್ಣವಾಗಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೀಗ ಯಾವ ಪ್ರದೇಶದಲ್ಲಿ ಕೊರೊನಾ ವೈರಸ್‌ ಹೆಚ್ಚಾಗಿದೆ. ಕೊರೊನಾ ಪ್ರಕರಣಗಳ ಮಾಹಿತಿ ಹೇಗಿದೆ ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿಯೋದಕ್ಕೆ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ಟ್ರ್ಯಾಕರ್‌ ಒಂದನ್ನ ಬಿಡುಗಡೆ ಮಾಡಿದೆ. ಇದು ಕೊರೊನಾ ಪ್ರಕರಣಗಳು ಎಲ್ಲೆಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.

ಸಾಪ್ಟ್‌ವೇರ್‌

ಹೌದು, ಸಾಪ್ಟ್‌ವೇರ್‌ ಲೋಕದ ದಿಗ್ಗಜ ಮೈಕ್ರೋಸಾಪ್ಟ್‌ ಕಂಪೆನಿ ನಿಮ್ಮ ಡೆಸ್ಕ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಉಚಿತವಾಗಿ ಬಳಸಬಹುದಾದ COVID-19 ಟ್ರ್ಯಾಕರ್ ಅನ್ನು ಬಿಂಗ್ ಸರ್ಚ್ ಎಂಜಿನ್‌ನಲ್ಲಿ ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ COVID-19 ಟ್ರ್ಯಾಕರ್ ಆನ್‌ಲೈನ್‌ನಲ್ಲಿ bing.com/covid ನಲ್ಲಿ ಲಭ್ಯವಿದೆ. ಇದರಲ್ಲಿ ಒಟ್ಟು ದೃಡಪಡಿಸಿದ ಕೊರೊನಾ ಪ್ರಕರಣಗಳು, ಚೇತರಿಸಿಕೊಂಡ ಪ್ರಕರಣಗಳು ಮತ್ತು ಮಾರಣಾಂತಿಕ ಪ್ರಕರಣಗಳಂತಹ ಇತರ ಮಾಹಿತಿಯನ್ನ ಜಾಗತಿಕ ನಕ್ಷೆಯಲ್ಲಿ ತೋರಿಸುತ್ತದೆ.

ಇದರಿಂದ

ಇನ್ನು ಈ ನಕ್ಷೆಯಲ್ಲಿ ಇಡೀ ವಿಶ್ವದಲ್ಲಿ ಕೊರೊನಾ ಪ್ರಕರಣದ ಗತಿ ಹೇಗಿದೆ. ಇದರಿಂದ ಉಂಟಾಗಿರುವ ಸಾವು ನೋವುಗಳೆಷ್ಟು, ಪ್ರಕರಣದಿಂದಾಗಿ ಯಾವ ಪ್ರದೇಶದಲ್ಲಿ ಅತಿ ಹೆಚ್ಚು ಜನ ಸಂಕಷ್ಟದಲ್ಲಿದ್ದಾರೆ ಎಂಬ ಮಾಹಿತಿಯನ್ನ ಟ್ರ್ಯಾಕ್‌ ಮಾಡಿ ತೋರಿಸುತ್ತದೆ. UIನಲ್ಲಿ ಸದ್ಯ ಈ ಟ್ರ್ಯಾಕರ್‌ ಅನ್ನ ಬಿಡುಗಡೆ ಮಾಡಲಾಗಿದ್ದು, ವಿಶ್ವದ ಎಲ್ಲಾ ಕಡೆ ಇದನ್ನ ಸರ್ಚ್‌ ಮಾಡಬಹುದಾಗಿದೆ. ಈ ಮೂಲಕ ನೀವು ಪ್ರತಿ ದೇಶದ ಅಂಕಿಅಂಶಗಳನ್ನು ಸಹ ನೋಡಬಹುದಾಘಿದೆ. ಅಲ್ಲದೆ ನೀವು ಬಯಸುವ ನಿರ್ದಿಷ್ಟ ಪ್ರದೇಶದಲ್ಲಿನ ಹೆಚ್ಚುವರಿ ಮಾಹಿತಿಗಾಗಿ ಜೂಮ್ ಇನ್ ಮಾಡಿ ವೀಕ್ಷಿಸಬಹುದು.

ಹಾಗೇ

ಹಾಗೇ ನೋಡಿದ್ರೆ ಇದೇ ರೀತಿಯ ಟ್ರ್ಯಾಕರ್‌ ಸೇವೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿದೆ, ಆದರೆ ಕರೋನವೈರಸ್ ಮೇಲೆ ಮಾತ್ರ ಈ ಟ್ರ್ಯಾಕರ್ ಅನ್ನು ಸೆಂಟರ್‌ಪಾಯಿಂಟ್‌ ಮಾಡಲು ಮೈಕ್ರೋಸಾಫ್ಟ್ ಪ್ಲ್ಯಾನ್‌ ಮಾಡಿದೆ. ಇದಕ್ಕಾಗಿ ಈ ಟ್ರ್ಯಾಕರ್‌ನಲ್ಲಿ ಕೊರೊನಾ ಸೋಂಕಿನ ಬಗ್ಗೆ ಸುದ್ದಿ ಮತ್ತು ವೀಡಿಯೊಗಳನ್ನು ಮಾತ್ರ ಬಿತ್ತರಿಸಲಾಗುತ್ತದೆ. ಅಲ್ಲದೆ ಇದು CDC, WHO, ECDC ಮತ್ತು ವಿಕಿಪೀಡಿಯಾದಲ್ಲಿ ಲಭ್ಯವಾಗುವ ನಿಖರವಾದ ಡೇಟಾವನ್ನು ಮಾತ್ರ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಟ್ರ್ಯಾಕರ್

ಇನ್ನು ಈ ಹೊಸ ಟ್ರ್ಯಾಕರ್ ಅನ್ನು ಮೊಬೈಲ್‌ನಲ್ಲೂ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ bing.com/covid ಲಿಂಕ್‌ ಅನ್ನು ಬ್ರೌಸರ್ ಮಾಡಿದರೆ ಸಾಕು ನೀವು ಕೊರೊನಾ ಕುರಿತ ಡೇಟಾವನ್ನ ಪಡೆಯಬಹುದಾಗಿದೆ. ಈಗಾಗ್ಲೆ ಕೊರೊನಾ ವೈರಸ್‌ನಿಂದ ನಷ್ಟ ಅನುಭವಿಸಿದ ಕಂಪೆನಿಗಳಲ್ಲಿ ಮೈಕ್ರೋಸಾಫ್ಟ್‌ ಕಂಪೆನಿ ಕೂಡ ಒಂದು. ಈಗಾಗ್ಲೆ ತನ್ನ ಪ್ರಮುಖ ಈವೆಂಟ್‌ಗಳನ್ನ ರದ್ದು ಪಡಿಸಿದೆ. ಆದರೂ ಕೊರೊನಾ ವೈರಸ್‌ ಕುರಿತು ಮಾಹಿತಿ ತಿಳಿಸುವ ಪ್ರಯತ್ನಕ್ಕೆ ಮೈಕ್ರೋಸಾಪ್ಟ್‌ ಮುಂದಾಗಿದೆ.

Most Read Articles
Best Mobiles in India

English summary
Microsoft Launches a Free COVID-19 Tracker for Desktop and Mobile.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X