ಮೈಕ್ರೊ ಸಾಫ್ಟ್ ನಿಂದ ಹೊಸ ಮಾದರಿಯ ಸೇವೆ
ಮೈಕ್ರೋಸಾಫ್ಟ್ ಹೊಸದಾಗಿ ಅಜುರ್ ಲೋಕೆಷನ್ ಬೆಸ್ಡ್ ಸರ್ವೀಸ್ ಅನ್ನು ಲಾಂಚ್ ಮಾಡಿದ್ದು, ಇದು ಹೊಸ ಮಾದರಿಯ ಪಬ್ಲಿಕ್ ಕ್ಲವ್ಡ್ ಆಫರಿಂಗ್ ಸೇವೆಯಾಗಿದ್ದು, ಇದು ಎಂಟರ್ಪೈಸರ್ಸ್ ಗ್ರಾಹಕರಿಗೆ ಲೋಕೆಷನ್ ಕ್ಲವ್ಡ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಹೊಸ ಲೋಕೆಷನ್ ಕೆಪಬಲಿಟಿಗಳು ಸ್ಮಾರ್ಟ್ ಸಿಟಿಗಳಿಲ್ಲಿರುವ ಕ್ಲವ್ಡ್ ಡೆವಲಪರ್ ಗಳಿಗೆ ಕ್ರಿಟಿಕಲ್ ಜಿಯೋಗ್ರಾಫಿಕಲ್ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಿಂದ IOT ಸೇವೆಯೂ ಇಂಡಸ್ಟ್ರಿಗಳಿಗೆ ದೊರೆಯಲಿದೆ. ಮಾನುಪ್ಚರ್ ಗಳು, ಆಟೋಮೊಟಿವ್, ಲಾಜಿಸ್ಟಿಕ್, ರೀಟೆಲ್ ರ್ ಗಳಿಗೆ ಇದು ಲಭ್ಯವಿರಲಿದೆ.
ಮೊಬೈಲಿಟಿ ಚಾಲೆಂಜ್ ಗಳನ್ನು ನಿವಾರಿಸುವ ಸಲುವಾಗಿ ಮೈಕ್ರೊ ಸಾಫ್ಟ್ ತನ್ನ ಹೊಸ ಸೇವೆಯನ್ನು ನೀಡುತ್ತಿದ್ದು, ಸರಕಾರಿ ಸೇವಳಿಗೆ, ಪ್ರೈವೆಟ್ ಕಂಪನಿಗಳಿಗೆ ಮೈಕ್ರೊ ಸಾಫ್ಟ್ ಇಂಟೆಲಿಜೆಂಟ್ ಕ್ಲವ್ಡ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.
ಮೈಕ್ರೊಸಾಫ್ಟ್ ಇದಕ್ಕಾಗಿ ಟಾಮ್ ಟಾಮ್ ಟೆಲಿ ಮಾಟ್ಸ್ ಜೊತೆ ಅಧಿಕೃತವಾಗಿ ಪಾಲುದಾರಿಕೆಯನ್ನು ಹೊಂದಿದೆ ಎನ್ನಲಾಗಿದ್ದು, ಇದು ಬಳಕೆದಾರರಿಗೆ ರಿಲಯಲ್ ಟೈಮ್ ಡೇಟಾ ಮತ್ತು ಆಡ್ವನ್ಸ್ ಲೋಕೆಷನ್ ಮ್ಯಾಪಿಂಗ್ ಸೇವೆಯನ್ನು ನೀಡಲಿದೆ.
ಈ ಸೇವೆಯ ಬಳಕೆಯಿಂದಾಗಿ ಬಳಕೆದಾರರು ತಮ್ಮ ಇಂಡಸ್ಟ್ರಿಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಇದರಿಂದಾಗಿ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಹೊಸ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ಅವಕಾಶವನ್ನು ಸಹ ಇಲ್ಲಿ ಪಡೆಯಬಹುದಾಗಿದೆ.


Click it and Unblock the Notifications








