Subscribe to Gizbot

ಡ್ಯುಯಲ್ ಸಿಮ್ ಆವೃತ್ತಿಯುಳ್ಳ ಲ್ಯೂಮಿಯಾ 640 ಮತ್ತು ಎಕ್ಸ್‌ ಎಲ್ ಲಾಂಚ್

Written By:

ಡ್ಯುಯಲ್ ಸಿಮ್ ಆವೃತ್ತಿಯೊಂದಿಗೆ ಲ್ಯೂಮಿಯಾ 640 ಮತ್ತು ಲ್ಯೂಮಿಯಾ 640 ಎಕ್ಸ್ ಎಲ್ ಅನ್ನು ಮೈಕ್ರೋಸಾಫ್ಟ್ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಲಾಂಚ್ ಮಾಡಿದೆ. ಏಪ್ರಿಲ್ ಆರಂಭದಲ್ಲಿ ಲ್ಯೂಮಿಯಾ 640 ಜಾಗತಿಕವಾಗಿ ಲಭ್ಯವಿದ್ದು 3ಜಿ ಮತ್ತು ಎಮ್‌ಟಿಇ ಮಾಡೆಲ್‌ಗಳಲ್ಲಿ ಲಭ್ಯವಿದೆ.

ಡ್ಯುಯಲ್ ಸಿಮ್ ಆವೃತ್ತಿಯುಳ್ಳ ಲ್ಯೂಮಿಯಾ 640 ಮತ್ತು ಎಕ್ಸ್‌ ಎಲ್ ಲಾಂಚ್

ಮೈಕ್ರೋಸಾಫ್ಟ್ ಲ್ಯೂಮಿಯಾ 640 ಸಿಂಗಲ್ ಸಿಮ್ ಡಿವೈಸ್ ಆಗಿದ್ದು ಎಲ್‌ಟಿಇ ಬೆಂಬಲವನ್ನು ಪಡೆದುಕೊಂಡಿದೆ ಹಾಗೂ ಮೈಕ್ರೋಸಾಫ್ಟ್ ಲ್ಯೂಮಿಯಾ 640 ಡ್ಯುಯಲ್ ಸಿಮ್ ಒಂದು ಡ್ಯುಯಲ್ ಸಿಮ್ ಡಿವೈಸ್ ಆಗಿದ್ದು 3 ಜಿ ಸಂಪರ್ಕವನ್ನು ಇದು ಒದಗಿಸುತ್ತದೆ. ಇದರ ಅಂದಾಜು ಬೆಲೆ ರೂ 9,600 ಆಗಿದೆ. ಇನ್ನು 3ಜಿ ಆವೃತ್ತಿ ಇರುವ ಎಲ್‌ಟಿಇ ಮಾಡೆಲ್ ರೂ 11,000 ಕ್ಕ ದೊರೆಯುತ್ತಿದೆ.

ಡ್ಯುಯಲ್ ಸಿಮ್ ಆವೃತ್ತಿಯುಳ್ಳ ಲ್ಯೂಮಿಯಾ 640 ಮತ್ತು ಎಕ್ಸ್‌ ಎಲ್ ಲಾಂಚ್

ಮೈಕ್ರೋಸಾಫ್ಟ್‌ನ ಅಧಿಕೃತ ಭಾರತೀಯ ವೆಬ್‌ಸೈಟ್ ಲ್ಯೂಮಿಯಾ 640 ಡ್ಯುಯಲ್ ಸಿಮ್, ಲ್ಯೂಮಿಯಾ 640 ಎಕ್ಸ್‌ಎಲ್ ಡ್ಯುಯಲ್ ಸಿಮ್, ಮತ್ತು ಲ್ಯೂಮಿಯಾ 640 ಎಕ್ಸ್‌ಎಲ್ ಎಲ್‌ಟಿಇ ಡ್ಯುಯಲ್ ಸಿಮ್ ಪಟ್ಟಿಯಾಗಿದೆ.

ಲ್ಯೂಮಿಯಾ 640 ಮತ್ತು ಲ್ಯೂಮಿಯಾ 640 ಎಕ್ಸ್ಎಲ್ ವಿಂಡೋಸ್ ಫೋನ್ 8.1 ನೊಂದಿಗೆ ಬರುತ್ತಿದ್ದು ಲ್ಯೂಮಿಯಾ ಡೆನೀಮ್ ಅಪ್‌ಡೇಟ್ ಅನ್ನು ಇದು ಪಡೆದುಕೊಳ್ಳಲಿದೆ. ಎರಡೂ ಹ್ಯಾಂಡ್‌ಸೆಟ್‌ಗಳು ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ ಬಂದಿದ್ದು 1.2GHz ಸಂಯೋಜಿತ 1 ಜಿಬಿ RAM ಡಿವೈಸ್‌ನಲ್ಲಿದೆ. ಇನ್ನು ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

English summary
This article tells about Microsoft Lumia 640, Lumia 640 XL Launched Alongside Dual SIM, LTE Variants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot